ಯಾದಗಿರಿ (ಕೆಂಭಾವಿ):ಏವೂರ ಗ್ರಾಮದ ಜನರ ಸಮಸ್ಯೆಗಳು ಸ್ಥಳದಲ್ಲಿಯೇ ಬಗೆಹರಿಸಲು ಸರ್ಕಾರಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬ ಕಾರ್ಯಕ್ರಮಕ್ಕೆ ಅರ್ಥವೇ ಇಲ್ಲದಂತೆ ಎದ್ದು ಕಾಣುತ್ತಿತ್ತು. ಏವೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ೧೭/೧೨/೨೦೨೨ ರಂದು ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ದಂಡಾಧಿಕಾರಿ ಸುಬ್ಬಣ್ಣ ಜಮಖಂಡಿ ಸುರಪುರ ಇವರು ಈ ಕಾರ್ಯಕ್ರಮದಲ್ಲಿ ಗ್ರಾಮದ ಜನರ ಸಮಸ್ಯೆಗಳು ಸ್ಥಳದಲ್ಲಿಯೇ ಬಗೆಹರಿಸಿಕೊಳ್ಳಬಹುದು.ವಿಶೇಷವಾಗಿ ಸರ್ಕಾರದ ವಿವಿಧ ಯೋಜನೆಗಳು ಪಿಂಚಣಿಗಳನ್ನು ಸ್ಥಳದಲ್ಲೆ ಕೊಡುವ ವ್ಯವಸ್ಥೆ ಇದರಲ್ಲಿ ಇದ್ದು ವೃದ್ಧಾಪ್ಯ, ಅಂಗವಿಕಲ,ವಿವಿಧ ಯೋಜನೆಗಳು ಸೇರಿದಂತೆ ಸ್ಥಳದಲ್ಲಿಯೆ ಮಂಜೂರು ಮಾಡಲಾಗುವುದು ಎಂದು ಹೇಳಿದರು.
ತಾಲೂಕಿನಲ್ಲಿ ಇಲ್ಲಿವರೆಗೆ ಒಟ್ಟು ೩೮ ಪಿಂಚಣಿ ಫಲಾನುಭವಿಗಳಿಗೆ ನೀಡಿದ್ದು ಸ್ಪಷ್ಟ ದಾಖಲೆ ನೀಡಿದಲ್ಲಿ ಮಾತ್ರ ಜನತೆಗೆ ಸರ್ಕಾರದ ಸೌಲಭ್ಯಗಳು ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.ತಾಲೂಕಾ ವೈದ್ಯಾಧಿಕಾರಿ ಡಾ||ಆರ್.ವಿ.ನಾಯಕ್ ಅವರು ಅ.ಭಾ ಕಾರ್ಡ್ ಈ ಮೂಲಕ ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ಸೇವೆ ಒದಗಿಸಲು ಮುಂದಾಗಿದೆ ಎಂದು ತಾಲೂಕ ವೈದ್ಯಾಧಿಕಾರಿ ನಾಯಕ್ ಹೇಳಿದರು.ಬಿಪಿಎಲ್ ಕಾರ್ಡ್ ಇದ್ದವರಿಗೆ ೫ ಲಕ್ಷ ಮತ್ತು ಎಪಿಎಲ್ ಕಾರ್ಡ್ ಇದ್ದವರಿಗೆ ೧.೫೦ ಲಕ್ಷ ವರೆಗೆ ವೆಚ್ಚದಲ್ಲಿ ದೇಶದ ಯಾವುದೇ ಪ್ರದೇಶದಲ್ಲಿ ಚಿಕಿತ್ಸೆ ಪಡೆದುಕೊಳ್ಳುಲು ಸಹಕಾರಿಯಾಗುತ್ತದೆ.
ಗೈರಾದ ಅಧಿಕಾರಿಗಳು ವಿರುದ್ಧ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಾರ್ಯಕ್ರಮದ ಗೈರಾದ ಅಧಿಕಾರಿಗಳ ವಿರುದ್ಧ ಸುಬ್ಬಣ್ಣ ಜಮಖಂಡಿಯವರು ಗರಂ ಆದರು.ತಳವಾರ್ ಸಮಾಜದ ಮುಖಂಡರು ಅನ್ಯಾಯವಾದರೆ ನ್ಯಾಯ ದೊರಕಿಸಿ ಕೊಡುವುದೇ ಗ್ರಾಮ ವಾಸ್ತವ ಎಂದು ಹೇಳಿದರು.ಆದರೆ
ಏವೂರ ಗ್ರಾಮಸ್ಥರು ತೊಂದರೆಗಳು ಕೇಳಬೇಕಾದ ಅಧಿಕಾರಿಗಳು ಹಾಗೂ
ಜಿಲ್ಲಾಧಿಕಾರಿಗಳ ಗೈರಾಗಿದ್ದು ಮೇಲೆ ನೋಟಕೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಅರ್ಥವೇ ಇಲ್ಲದಂತೆ ಆಗಿದೆ.ಜಿಲ್ಲಾಧಿಕಾರಿಗಳ ಬಾರದೇ ಇರುವುದಕ್ಕೆ ಇವರ ವಿರುದ್ಧ ಯಾರಿಗೆ ದೂರು ಕೊಡಬೇಕು ಎಂದು ಏವೂರ ಜನತೆಗೆ ಯಕ್ಷ ಪ್ರಶ್ನೆಯಾಗಿದೆ.ಇದೆ ಸಂದರ್ಭದಲ್ಲಿ ಏವೂರ ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ