ಕೆಂಭಾವಿ: ಶರಣಬಸಪ್ಪಗೌಡ ದರ್ಶನಾಪೂರ ರವರು ಪಟ್ಟಣದಲ್ಲಿ ಶಾಶ್ವತ ಕುಡಿಯುವ ಯೋಜನೆಯ ಸರ್ಕಾರ ಹಣ ಬಿಡುಗಡೆ ಮಾಡಿದ್ದು. ಶೀಘ್ರದಲ್ಲೆ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ಹೇಳಿದರು.
ಪಟ್ಟಣದ ಶಾಸಕರ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಅಮೃತ ಯೋಜನೆ-೨ ರಲ್ಲಿ ೬೮ ಕೋಟಿ ಗಳ ವೆಚ್ಚದಲ್ಲಿ ಮೊದಲ ಹಂತದ ಹಣ ಬಿಡುಗಡೆ ಮಾಡಿದ್ದು.ಅತಿ ಶೀಘ್ರದಲ್ಲೇ ಪುರಸಭೆ ವ್ಯಾಪ್ತಿಗೆ ಬರುವ ಎಲ್ಲಾ ವಾರ್ಡ್ ಗಳಿಗೆ ಶುದ್ಧ ಕುಡಿಯುವ ನೀರು ಸಿಗಲಿದೆ ಎಂದರು.
ಮಲ್ಲಾ- ಕೆಂಭಾವಿ ೧೦ ಕಿ.ಮೀ ರಸ್ತೆ ದುರಸ್ತಿಗೆ ೧ ಕೋಟಿ ೨೦ ಲಕ್ಷ ರೂಗಳ ಅನುದಾನದಲ್ಲಿ ಟೆಂಡರ್ ಆಗಿದ್ದು ಮುಂದಿನ ವಾರದಲ್ಲಿ ರಸ್ತೆ ಕಾರ್ಯ ಮುಗಿಯಲಿದೆ.
ಕೆಂಭಾವಿ-ಗುತ್ತಿ ಬಸವಣ್ಣ ರಸ್ತೆಯ ಕಾಮಗಾರಿ ನನೆಗುದಿಗೆ ಬಿದ್ದಿರುವ ೫೦೦ ಮೀಟರ್ ತಿರುವು ರಸ್ತೆಯ ದುರಸ್ತಿ ಕಾರ್ಯಕ್ಕೆ ಚಾಲನೆ ದೊರೆಯಲಿದೆ ಎಂದು ಹೇಳಿದರು.ರಾಜ್ಯ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಮರಿಗೌಡ ಹುಲಿಕಲ್,ಮಾಜಿ ಜಿಪಂ ಅಧ್ಯಕ್ಷ ಸಿದ್ದನಗೌಡ ಪಾಟೀಲ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ,ಶಿವಮಹಾಂತ ಚಂದಾಪುರ,ಪುರಸಭೆ ಸದಸ್ಯ ವಿಲಾಸ ದೇಶಪಾಂಡೆ, ರಾಘವೇಂದ್ರ ದೇಶಪಾಂಡೆ ಇನ್ನಿತರರು ಇದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ