ಹನೂರು: ಕರ್ನಾಟಕ ಎಲೆಟ್ರಿಕಲ್ ರೆಗ್ಯುಲೇಷನ್ ಕಮಿಟಿ (K,E, R, C)
ಕಮಿಟಿಯು 3 ತಿಂಗಳಿಗೊಮ್ಮೆ ರೈತ ಸಂಪರ್ಕ ಸಭೆಯನ್ನು ನಡೆಸುತದೆ ರೈತರಿಗೆ ಬೇಕಾದ ಸೇವೆಯನ್ನು ಮಾಡಲು ಸದಾ ಸಿದ್ದವಿರುತದೆ. ರೈತರಿಗೆ ಇರುವಂತಹ ಸಮಸ್ಯೆಗಳನ್ನು ಸ್ಥಳದಲ್ಲಿ ಇತ್ಯಾರ್ಥ ಮಾಡುವುದು ಮತ್ತೆ ಕೆಲವು ದುರುಗಳನ್ನು ಸಾಧ್ಯವಾದಷ್ಟು ಬೇಗ ಕ್ರಮ ಜರುಗಿಸಲಾಗುವುದು ಎಂದು ಎಸ್ ಇ ಸೋಮರಾಜ್ ತಿಳಿಸಿದರು.
ಆಶ್ರಯ ಬಡಾವಣೆಯ ಖಾಲಿ ಜಾಗದಲ್ಲಿ ಮೇಲೆ ಹಾದು ಹೋಗಿರುವ 11ಕೆ ವಿ ಯ ಮಾರ್ಗವನ್ನು ಅತಿ ಬೇಗನೆ ಬದಲಾವಣೆ ಮಾಡಬೇಕು ಎಂದು 13 ವಾರ್ಡ್ ಮಹೇಶ್ ರವರು ಬೇಡಿಕೆ ಇಟ್ಟರು.
ಇದೆ ಸಂದರ್ಭದಲ್ಲಿ ರೈತ ಸೊಮ್ಮಣ್ಣ ನವರು ತಮ್ಮ ಜಮೀನಿನಲ್ಲಿ ಹಾದು ಹೋಗಿರುವ 11 ಕೆ ವಿ ಯ ವಿದ್ಯುತ್ ಸ್ಪರ್ಶದಿಂದ ಕಬ್ಬಿನ ಬೆಳೆ ಹಾನಿಯಾಗಿರುವುದರಿಂದ ಇವರು ಕೂಡಾ ಅದನ್ನು ಸ್ಥಳಾಂತರ ಮಾಡುವುದಕ್ಕೆ ಮನವಿ ಇಟ್ಟರು
ಇದೇ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ,ಹದಿನಾರು ದೂರು ಅರ್ಜಿಗಳು,ಎಂಟು ಟಿ ಸಿ ಗಳ ಸಮಸ್ಯೆ ,ಮೂರು ಕಂಬಗಳು ತೆರವುಗೊಳಿಸುವ ಬಗ್ಗೆ ,ಇನ್ನಿತರ ಸಮಸ್ಯೆಗಳು ಸೇರಿದಂತೆ ಅರ್ಜಿ ಮುಖಾಂತರ ದೂರುಗಳು ದಾಖಲಾದವು ,
ಇದೇ ಸಮಯದಲ್ಲಿ ಎಇಇ, ಎ ಎಮ್ ಶಂಕರ್ ,ಎಇ ರಂಗಸ್ವಾಮಿ ,ಜಿಇ ಗಳಾದ ಮಹೇಶ್ ,ವೆಂಕಟೇಶ್ ಮೂರ್ತಿ ,ರೈತ ಮುಖಂಡರಾದ ಚೆಂಗಡಿ ಕರಿಯಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ-ಉಸ್ಮಾನ್ ಖಾನ್