ರಾಣೇಬೆನ್ನೂರು:ನಮ್ಮ ಉತ್ತರ ಕರ್ನಾಟಕದ ಏಲಕ್ಕಿ ಕಂಪಿನ ನಗರಿ ಎಂದು ಖ್ಯಾತಿ ಹೊಂದಿರುವ ಹಾವೇರಿ. ಜಿಲ್ಲಾ ಕೇಂದ್ರ ಸ್ಥಾನವಾದ ಹಾವೇರಿ ನಗರದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಜಿಲ್ಲೆಯ ಜನತೆಯ ಸೌಭಾಗ್ಯ. ಜನವರಿ ತಿಂಗಳ 6, 7, ಹಾಗೂ 8 ರಂದು ಹಾವೇರಿಯಲ್ಲಿ ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಅತಿಥಿಗಳಿಗೆ ಸಾಹಿತಿ, ಕವಿ, ಲೇಖಕರು ಹಾಗೂ ಕಲಾವಿದರಿಗೆ, ಹೂವಿನ ಹಾರ,ಶಾಲು ಮತ್ತು ಹಣ್ಣು ಹಂಪಲು ಕೊಟ್ಟು ಸನ್ಮಾನಿಸುವುದರ ಜೊತೆಗೆ ಪುಸ್ತಕ ನೀಡಬೇಕು. ಇದರಿಂದ ಸಾಹಿತಿಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಸಾಹಿತ್ಯ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆಸುವ ಹೊಣೆ ಸಾಮೂಹಿಕ ನಾಯಕತ್ವದ ಮೇಲಿದೆ. ಉಪನ್ಯಾಸಕರಿಗೆ, ಸ್ವಾಗತ, ನಿರೂಪಣೆ ವಂದನಾರ್ಪಣೆ ಚಿಕ್ಕ ಚೊಕ್ಕ ವಾಗಿರಬೇಕು. ಆಮಂತ್ರಿತರು ಗೈರಾದಲ್ಲಿ ಅನಗತ್ಯ ಸ್ವಾಗತ ಬೇಡ. ಒಟ್ಟಾರೆ ಜಿಲ್ಲೆಯಲ್ಲಿ ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಬೇರೆ ಜಿಲ್ಲೆಗಳಿಗೆ ಮಾದರಿಯಾಗಬೇಕು ಎಂದು ಸಾಹಿತಿ, ಕವಿ
ಬಸವರಾಜ ಬಾಗೇವಾಡಿಮಠ ಅವರು ಸಲಹೆ ನೀಡಿದ್ದಾರೆ.
