ಮಕ್ಕಳ ಕಾಟಕ್ಕೆ ಅಜ್ಜಿ ಮನೆ ಪಕ್ಕದಲ್ಲಿರುವ ಗುಡಿ ಒಳಗಡೆ ಹೋಗಿ ಮಲಗಿದ್ದೆ ಹೆಂಡತಿ ಈರುಳ್ಳಿ ಕತ್ತರಿಸುತ್ತಾ ಕರೆಯಲು ಗುಡಿಯ ಒಳಗಡೆ ಮಲಗಿದ್ದ ಗಂಡನನ್ನುಎಬ್ಬಿಸಲು ಬಂದಳು ಗಂಡನು ಎದ್ದು ಹೊರಗೆ ಬರುವಾಗ ಪೂಜಾರಿ ಈತನ ಹೆಂಡತಿಗೆ ಸನ್ನೆ ಮಾಡಿ ನಗುವುದನ್ನು ನೋಡಿದ ಆಗ ಗಂಡ ಒಂದೂ ವಿಚಾರಿಸದೆ ಹೆಂಡತಿ ಕೈಯಲ್ಲಿರುವ ಕುಡುಗೋಲನ್ನು ಕಸಿದುಕೊಂಡು ಪೂಜಾರಿಗೆ ಹಾಕಿ ಕೊಂದೆ ಬಿಟ್ಟನು ಕೊಂದು ತಾನು ಮಲಿಗಿದ್ದ ಜಾಗಕ್ಕೆ ಪೂಜಾರಿಯ ಮೃತ ದೇಹವನ್ನು ಎಳೆದೊಯ್ದ ಹಾಕಿ ತನ್ನ ಹೆಂಡತಿಯ ಮುಖ ನೋಡುತ್ತಾ ನಡಿ ಬೇಗ ಊರು ಬಿಟ್ಟು ದೂರ ಹೋಗೋಣ ಎನ್ನುತ್ತಾನೆ ಹೆಂಡತಿ ಆಟವಾಡಲು ಹೋದ ಮಕ್ಕಳನ್ನು ಹುಡುಕುತ್ತಾ ಕೂಗುತ್ತಾ ಹೋದಳು ಹೆಂಡತಿ ಮಕ್ಕಳು ಬೇಗ ಬರಲೇ ಇಲ್ಲ ಬಂದಿದ್ದು ಮನೆಯ ಅಕ್ಕ ಪಕ್ಕ ಜನರು ನಿನಗೆ ಗೊತ್ತಾ ಪೂಜಾರಿಯನ್ನು ಯಾರು ಕೊಲೆ ಮಾಡಿದ್ದು
ಎನ್ನತೊಡಗಿದರು ಏಕೆಂದರೆ ಆ ಸಮಯದಲ್ಲಿ ನೀನು ಅಲ್ಲಿ ಮಲಗಿದ್ದೆಯಂತೆ ಅದಕ್ಕೆ ಕೇಳಿದೆ ಎನ್ನುತ್ತಿದ್ದರು ಅದೇ ಸಮಯಕ್ಕೆ ಪೊಲೀಸರ ವಾಹನ ಬಂದೇಬಿಟ್ಟಿತು ಇವನನ್ನು ಕರೆದರು ವಿಚಾರಿಸಿದಾಗ ಇವನೇ ಆ ಕೊಲೆ ಮಾಡಿದ್ದು ಎಂದು ಸಾಬೀತಾಯಿತು ಗಂಡ ಹೆಂಡತಿಯ ಪ್ರೀತಿ ನೆನೆಸಿಕೊಂಡು ಪ್ರತಿದಿನ ದುಃಖ ಪಡುತ್ತಿದ್ದನು ಹಲವು ವರ್ಷಗಳ ನಂತರ ಬಿಡುಗಡೆಯಾಗಿ ಓಡೋಡಿ ಎದ್ದೆ ಬಿದ್ದೆ ಎನ್ನುತ್ತಾ ಬಂದು ಹೆಂಡತಿ ಮಕ್ಕಳು ಎಲ್ಲರನ್ನೂ ನೋಡಿ ಖುಷಿ ಪಡುತ್ತಾನೆ ಆದರೆ ಇವನನ್ನು ನೋಡಿ ಗಾಬರಿಗೊಂಡು ಹೆಂಡತಿ ಮಕ್ಕಳು ನಮಗೇನು ಮಾಡುತ್ತಾನೋ ಎಂದು ತಿಳಿದು ಯಾರಿಗೂ ಗೊತ್ತಾಗದೆ ಮನೆಯ ಹಿಂದೆಗಡೆಯಿಂದ ದೂರದ ಊರಿಗೆ ಹೋಗಿ ಜೀವನ ನಡೆಸುತ್ತಾರೆ ಗಂಡ ಎಲ್ಲಾ ಕಡೆ ಹುಡುಕುತ್ತಾ ಅಲೆದಾಡಿ ಕೊನೆಗೆ ಅರ್ಧಮರ್ಧ ಹುಚ್ಚನಾಗಿ ಅಲೆದಾಡುತ್ತಾ ಹೋಗುತ್ತಾನೆ ಒಂದು ದಿನ ಒಬ್ಬ ಸಾಹುಕಾರ ಇವನನ್ನು ನೋಡಿ ವಿಚಾರಿಸಿ ಇವನಿಗೆ ಕಟಿಂಗ್ ಸ್ನಾನ ಮಾಡಿಸಿ ಬಟ್ಟೆ ಹಾಕಿ, ತನ್ನ ಮನೆಗೆ ಕರೆದುಕೊಂಡು ಹೋಗಿ ಮನೆ ಪಕ್ಕದ ಶೆಡ್ಡಿನಲ್ಲಿ ಇರಿಸಿಕೊಳ್ಳುತ್ತಾನೆ ರಾತ್ರಿಯಾದಂತೆ ಚಳಿಯಲ್ಲಿ ನಡುಗುವುದನ್ನು ನೋಡಿ ಸಾಹುಕಾರ ಹುಚ್ಚನಿಗೆ ಬೆಡ್ ಶೀಟ್ ತರಲೆಂದು ಒಳಗಡೆ ಹೋಗುತ್ತಾನೆ ಆ ಸಮಯದಲ್ಲಿ ಆ ಸಾಹುಕಾರನಿಗೆ ಒಂದು ಫೋನ್ ಕಾಲ್ ಬರುತ್ತದೆ ಆ ಫೋನಲ್ಲಿ ಮಾತನಾಡುತ್ತಾ ಬೆಡ್ ಶೀಟ್ ಕೊಡುವುದನ್ನು ಮರೆತೇ ಬಿಡುತ್ತಾನೆ ಬೆಳಿಗ್ಗೆ ಎದ್ದು ನೋಡಿದಾಗ ಹುಚ್ಚ ಸತ್ತು ಹೋಗಿರುತ್ತಾನೆ.
ಇದರ ಅರ್ಥ ಅತಿಯಾದ ಪ್ರೀತಿ ಹಾಗೂ ಸಂಶಯ ಅನಾಹುತಕ್ಕೆ ಕಾರಣ.
-ಮಂಜು.ಎಮ್.ಚಿಕ್ಕಣ್ಣವರ