ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಲೈಫ್ ಪುಲ್ ಬೋರ್ !

ಸಾಮಾನ್ಯವಾಗಿ ಈಗ ಎಲ್ಲರ ಬಾಯಲ್ಲಿ ಬರುವ ಶಬ್ಧ ವೆಂದರೆ ಬೋರ್. ಹೇಗೆ ಇದೀಯಾ ಕೇಳಿದರೆ ಸಾಕು ಅಯ್ಯೋ ಲೈಫ್ ಪುಲ್ ಬೋರ್ ಅಂತಾರೆ
ಒಂಥರಾ ಟ್ರೆಂಡಿಂಗ್ ನಲ್ಲಿ ಇರುವ ಪದ ಅದು.
ಬಹುಶಃ ಥ್ಯಾಂಕ್ಸ್ ಹಾಗೂ ಸ್ಸಾರಿ ಪದಗಳು ಕೂಡಾ ಇಷ್ಟು ಪ್ರಚಲಿತದಲ್ಲಿಲ್ಲ.
ಹಿಂದಿನ ಕಾಲದಲ್ಲಿ ಮನುಷ್ಯರು ಮತ್ತು ಪ್ರಕೃತಿಯ ನಡುವೆ ಅವಿನಾಭಾವ ಸಂಬಂಧವಿತ್ತು, ಮಕ್ಕಳು ಪ್ರಕೃತಿಯೊಂದಿಗೆ ಬೆಳೆಯುತ್ತಿದ್ದರು. ಕಾಡುಗಳಲ್ಲಿ ಅಲೆಯುತ್ತಿದ್ದರು ಮೈದಾನಗಳಲ್ಲಿ ಅನೇಕ ಆಟಗಳನ್ನು ಆಡುತ್ತಿದ್ದರು. ಹಿರಿಯರು ಸಂಬಂಧಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದರು ಆದ್ದರಿಂದ ಹಿಂದಿನವರು ಆರೋಗ್ಯವಾಗಿ ಇರುತ್ತಿದ್ದರು ಜೀವನದ ಬಗ್ಗೆ ಅತೀವ ಆಸಕ್ತಿ ಹಾಗೂ ಒಲವನ್ನು ಕಾಣಬಹುದು.
ಈವಾಗಿನವರು ಲೈಫ್ ಪುಲ್ ಬೋರ್ ಅನ್ನೋದನ್ನೇ ತುಂಬಾ ಎಂಜಾಯ್ ಮಾಡುತ್ತಾರೆ ಅನಸತ್ತೇ ಇದಕ್ಕೆ ಮುಖ್ಯ ಕಾರಣ ಹವ್ಯಾಸಗಳ ಕೊರತೆ ಹವ್ಯಾಸಗಳು ಅಂದರೆ ಬೀಡಿ ಸಿಗರೇಟುಗಳನ್ನು ಸೇದುವುದು ಕುಡಿಯುವುದು ಅನವಶ್ಯಕ ಹರಟೆ ಹೊಡೆಯುವುದು ಇಂತಹ ಕೆಟ್ಟ ಚಟಗಳಲ್ಲ, ಇಂದಿನ ಯುವ ಪೀಳಿಗೆಯವರು ಬೇಸರ ದುಗುಡಗಳು ಕಾಡುವುದು ಹೆಚ್ಚು ಇದು ಕಾಡಲು ಮುಖ್ಯ ಕಾರಣವೆಂದರೆ ಸೋಷಿಯಲ್ ಮೀಡಿಯಾ ದೂರದರ್ಶನಗಳು ಆಯಸ್ಕಾಂತದಂತೆ ಅವರನ್ನ ಸೆಳೆಯುತ್ತಿದೆ.ಪ್ರಸಿದ್ಧ ಲೇಖಕರಾದ ಯಂಡಮೂರಿ ವೀರೆಂದ್ರನಾಥ್ ಹವ್ಯಾಸಗಳ ಹೀಗೆ ಹೇಳುತ್ತಾರೆ “ಪ್ರಾಣವಿರುವ ವ್ಯಕ್ತಿಗಳಿಗಿಂತಲೂ ಪ್ರಾಣವಿಲ್ಲದವನ್ನು ಪ್ರೀತಿಸುವುದರಲ್ಲಿ ಹೆಚ್ಚು ಆಹ್ಲಾದವಿದೆ. ವ್ಯಕ್ತಿಗಳನ್ನು ಪ್ರೀತಿಸಿದರೆ ಅವರಿಂದ ದೂರವಾದಾಗ ನೋವು ಅವರಿಗೆ ಕೋಪ ಬಂದರೆ ವಿರಹ ಅವರು ಬೇರೆಯವರೆಡೆಗೆ ಸ್ವಲ್ಪ ಹೆಚ್ಚು ಶ್ರದ್ಧೆ ತೋರಿಸಿದರೆ ಅಸೂಯೆ ಅದೇ ಪ್ರಾಣವಿಲ್ಲದ ಹವ್ಯಾಸಗಳಾದ ಸಂಗೀತ ಪೈಂಟಿಂಗ್ ಕರಕುಶಲ ತಯಾರಿಕೆ ಸಾಹಿತ್ಯದ ಕಡೆ ಅಭಿರುಚಿ ಬೆಳೆಸಿಕೊಂಡರೆ ಅವುಗಳ ಜೊತೆಗೆ ರಮಿಸಬಹುದು ಎಂದಿದ್ದಾರೆ.
ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು, ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ. ಬೆಲ್ಲ-ಸಕ್ಕರೆ ಯಾಗು ದೀನ ದುರ್ಬಲರಿಂಗೆ, ಎಲ್ಲರೊಳ ಗೊಂದಾಗು ಮಂಕುತಿಮ್ಮ’ ಇಲ್ಲಿ ಎಲ್ಲರೊಳ ಗೊಂದಾಗಿ ಬದುಕುವುದು ಎಂದರೆ ನಮ್ಮ ಅಸ್ತಿತ್ವವು ಇತರರಿಗೆ ಪ್ರಯೋಜನವಾಗುವಂತಿರಬೇಕು ಎಂದು. ನಮ್ಮ ಬದುಕು ನಮಗೆ ಆಸಕ್ತಿದಾಯಕವಾಗಿರಬೇಕು ಉತ್ಸಾಹ ಇರಬೇಕು ಕಲಿಯುವ ಕುತೂಹಲ ಇರಬೇಕು. ನಾವು ಲೈಫ್ ಬೋರ್ ಅನ್ನೋದಕ್ಕೆ ಸಾವಿರಾರು ವರ್ಷ ಇಲ್ಲಿ ಬದುಕುವುದಿಲ್ಲ ನಮ್ಮ ಬದುಕನ್ನ ನಾವು ತುಂಬಾ ಪ್ರೀತಿಸಬೇಕು.ಒಂದು ಕ್ಷಣ ಕಳೆದರೂ ಮರಳಿ ನಮಗೆ ಸಿಗುವುದಿಲ್ಲ ಕ್ಷಣಗಳು ಅತ್ಯ ಅಮೂಲ್ಯ ಈ ಕ್ಷಣವನ್ನು ಅನುಭವಿಸುವುದೇ ಬದುಕು.ನಮಗೆ ಬದುಕಲು ಒಂದೇ ಅವಕಾಶವಿರುವುದು ನಮ್ಮ ಬದುಕನ್ನು ನಾವು ಸುಂದರವಾಗಿಟ್ಟುಕೊಳ್ಳುವುದು ನಮ್ಮ ಕರ್ತವ್ಯ.

-ರೇಷ್ಮಾ ಶೆಟ್ಟಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ