ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪತ್ತೆಪುರ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸಿದ್ದಣ್ಣ ತಣಿಕೆದಾರ್ ಹಾಗೂ ಮುಖ್ಯ ಗುರುಗಳಾದ ಮುರುಗಪ್ಪ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಮಾಡಿದರು ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರು ಮಾತನಾಡಿ ಸರಕಾರದ ಸೌಲಭ್ಯಗಳು ಪ್ರತಿಯೊಬ್ಬ ಬಡ ಮಕ್ಕಳು ಪಡೆದುಕೊಳ್ಳಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಿಗಿಂತ ಸರಕಾರಿ ಶಾಲೆಗಳು ಸಿಗುವ ಸೌಲಭ್ಯಗಳು ಪಡಿದು ಖಾಸಗಿ ಶಾಲೆಗಳಿಗಿಂತ ಏನು ಕಡಿಮೆ ಎಂದು ಹೇಳಿದರು. ಶಿಕ್ಷಕರು ಮಕ್ಕಳ ಮನಸ್ಸು ಅರಿತು ಮಕ್ಕಳ ಭಾವನೆಗಳಿಗೆ ಸ್ಪಂದಿಸುವ ಕೆಲಸ ಶಿಕ್ಷಕರು ಮಾಡಬೇಕು.ಮತ್ತು ಪಾಲಕರು ತಮ್ಮ ಮಕ್ಕಳನ್ನು ಪ್ರತಿನಿತ್ಯ ಶಾಲೆಗೆ ಕಳುಹಿಸಬೇಕು ಕೂಲಿ ಕೆಲಸಕ್ಕೆ ಕಳಿಸುವುದು ಬಿಟ್ಟು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಎಂದು ಹೇಳಿದರು.
ಶಾಲೆ ಶಿಕ್ಷಕರು ಗಳಾದ ಬಸನಗೌಡ, ಚೇತನ್ ಕುಮಾರ್, ಅತಿಥಿ ಶಿಕ್ಷಕರಾದ ರಮೇಶ್ ತಣಕೆದರ್, ಆಪ್ರೀನ ಶಿಕ್ಷಕಿ ಹಾಗೂ ಶಾಲೆಯ ಮಕ್ಕಳು ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ