ಸಂಬಂಧಗಳ ಕಳಚುತ ನಮ್ಮ ಹಿತಕ್ಕಾಗಿ
ದಾಯಾದಿಗಳನು ದೂರವಿರಿಸಿ ಆಸ್ತಿಗಾಗಿ
ಬೇರೊಬ್ಬರ ತುಳಿದು ತಮ್ಮಯ ಏಳಿಗೆಗಾಗಿ
ಜನತೆ ಮುಂದಾಗಿದೆ ಸ್ವಾರ್ಥ ಸಾಧನೆಗಾಗಿ.
ಹಚ್ಚಿಕೊಂಡು ಹಗಲುಗನಸಿನ ಬಯಕೆ
ಕೆಡಿಸಿಕೊಂಡು ನಮ್ಮೊಳಗಿನ ನಡವಳಿಕೆ
ಕಳೆದುಕೊಂಡು ನಮ್ಮ ನಮ್ಮಲ್ಲೇ ನಂಬಿಕೆ
ಆಯಸ್ಸು ಇಳಿದಿದೆ ಈಗ ವರ್ಷ ಐವತ್ತಕ್ಕೆ
ಹಚ್ಚುತ ಸಾಗುತ ಬಾಂಧವ್ಯಗಳಿಗೆ ಕಿಚ್ಚು
ಒಬ್ಬರ ಕಂಡರೆ ಮತ್ತೊಬ್ಬರಿಗೆ ಹೊಟ್ಟೆ ಕಿಚ್ಚು
ಯಾರಿಗೆ ಯಾರೂ ಇಲ್ಲಿಲ್ಲ ಅಚ್ಚು ಮೆಚ್ಚು
ಎಲ್ಲರಿಗೂ ಹಿಡಿದಿದೆ ಕಾಂಚಾಣದ ಹುಚ್ಚು.
ಗತಿಸಿದ ಕಾಲ ಮತ್ತೆಂದೂ ಬರದು
ನಿತ್ಯವೂ ಮಿಥ್ಯಕೆ ಜಯವು ಸಿಗದು
ಸತ್ಯಕ್ಕೆ ಯಶಸ್ಸು ಎಂದಿಗೂ ತಪ್ಪದು
ಒಳಿತು ಕೆಡುಕು ನಮ್ಮಲ್ಲೇ ಇಹುದು.
✍️ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
(ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು)
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.