ಚಾಮರಾಜನಗರ/ಹನೂರು : ಪ್ರತಿವರ್ಷದಂತೆ ಈ ವರ್ಷ ನಮ್ಮ ಗ್ರಾಮದಿಂದ ಶಬರಿಮಲೆ ಸ್ವಾಮಿ ಯಾತ್ರೆಯನ್ನು ಬಹಳ ಅದ್ದೂರಿಯಾಗಿ ನಡೆಸಿಕೊಂಡು ಬರುತ್ತಿದ್ದು ಮುಂದಿನ ದಿನಗಳಲ್ಲಿ ದೇವರ ಭಕ್ತಿಗೆ ಪಾತ್ರರಾಗೋಣವೆಂದು ಗುರು ಸ್ವಾಮೀಜಿಗಳಾದ ಕಾಂತರಾಜ್ ಸ್ವಾಮಿಗಳು ತಿಳಿಸಿದರು.
ಹನೂರು ತಾಲ್ಲೂಕಿನ ಕಾಂಚಳ್ಳಿ ಗ್ರಾಮದಲ್ಲಿ ಶಬರಿ ಮಲೆ ದೇವಾಲಯಕ್ಕೆ ಹೊರಟ ಮಾಲಾಧಾರಿಗಳ ಜೊತೆಯಲ್ಲಿ ಮಾತನಾಡಿದ ಅವರು ನಮ್ಮಲ್ಲಿ ಮಾಲಾ ಧರಿಸುವ ಸ್ವಾಮಿಗಳು ಹಿಂದೂ ಧರ್ಮದ ಸಂಪ್ರದಾಯದ ಪ್ರಕಾರವೇ ಕಠಿಣ ವ್ರತ ಆಚಾರ ಮಾಡಿ ನಂತರ ಯಾತ್ರೆ ಕೈಗೊಂಡರೆ ನಮ್ಮೆಲ್ಲರಿಗೂ ಶುಭವಾಗಲಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾಲಾಧಾರಿಗಳಾದ ಮೂರ್ತಿಸ್ವಾಮಿ ,ನಾಗರಾಜ್ ,ಮಾದೇಶ್ ,ನಂಜುಂಡಸ್ವಾಮಿ ,ಪತ್ರಕರ್ತರಾದ ಬಸವರಾಜು,ವಿಜಯಕುಮಾರ್ , ಗೋವಿಂದರಾಜು ಸ್ವಾಮಿ ಸುಭಾಷ್ ಸ್ವಾಮಿ ಅಜಯ್ ಸ್ವಾಮಿ ಪಳನಿ ಸ್ವಾಮಿ ಸೇರಿದಂತೆ ಇನ್ನಿತರ ಮಾಲಾಧಾರಿಗಳು ಯಾತ್ರೆಗೆ ತೆರಳಿದರು.
ವರದಿ ಉಸ್ಮಾನ್ ಖಾನ್