ದಾವಣಗೆರೆ ಜಿಲ್ಲೆಯ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನಲ್ಲಿ ಸುಗ್ಗಿಯ ಕಾಲ, ಅಂದರೆ ರೈತರು ಬೆಳೆದ ಭತ್ತದ ಬೆಳೆ ಕಟಾವಿಗೆ ಬಂದಿದೆ ಆದರೆ ಈ ವರ್ಷ ಮಳೆ ಸತತವಾಗಿ ಸುರಿದ ಕಾರಣ ಭತ್ತದ ಬೆಳೆ ಇಳುವರಿಯು ಕಮ್ಮಿಯಾಗಿದೆ
ರೈತರ ಭತ್ತ ಕಟಾವಿಗಿಂತ ಮೊದಲು ಆರ್ ಎನ್ ಆರ್ ಸಣ್ಣಭತ್ತ 2,700 ರೂ ಖರೀದಿ ಮಾಡುತ್ತಿದ್ದರು ಆದರೆ ರೈತರ ಬೆಳೆ ಕಟಾವು ಮಾಡಲು ಪ್ರಾರಂಭವಾದ ದಿನದಿಂದ ಈ ಭತ್ತದ ನಿಗದಿತ ಬೆಲೆ 2,300ಕ್ಕೆ ಇಳಿದಿದೆ
ಇವೆರಡರ ನಡುವೆ ರೈತರಿಗೆ ಇನ್ನೊಂದು ದೊಡ್ಡ ಆಘಾತವೆಂದರೆ ಭತ್ತ ಕಟಾವು ಮಾಡುವ ಯಂತ್ರ
ಕಟಾವು ಮಾಡುವ ಯಂತ್ರವು ನಮ್ಮ ಪಕ್ಕದ ರಾಜ್ಯವಾದ ತಮಿಳುನಾಡಿನಿಂದ ನಮ್ಮ ರಾಜ್ಯಕ್ಕೆ ಬಂದು ಸ್ಥಳೀಯ ಏಜೆಂಟರುಗಳ ಮುಖಾಂತರ ರೈತರ ಜಮೀನುಗಳಿಗೆ ಬೆಳೆ ಕಟಾವ್ ಮಾಡಲು ಬಿಡುತ್ತಾರೆ
ಒಂದು ಗಂಟೆಗೆ ಚೈನಿನ ಮಿಷನ್ ಬೆಲೆ ರೂ.3,000, ಟೈಯರ್ ಗಾಲಿಯ ಮಿಷನ್ ಬೆಲೆ ಒಂದು ಗಂಟೆಗೆ 2300 ರೂಗಳಂತೆ ನಿಗದಿ ಮಾಡಿ ಏಜೆಂಟರಗಳು ರೈತರ ಗದ್ದೆಗಳಿಗೆ ಕಳಿಸುತ್ತಾರೆ ಇದರಲ್ಲಿ ಬಹು ದೊಡ್ಡ ಜಾಲವೇ ನಿರ್ಮಾಣವಾದಂತೆ ಒಂದು ಗಾಡಿಗೆ ಎರಡು ಮೂರು ಜನರಂತೆ ಹಳ್ಳಿಯಲ್ಲಿ ಏಜೆಂಟರಗಳು ಇರುತ್ತಾರೆ ಒಂದು ಗಂಟೆಗೆ ಈ ಏಜೆಂಟರುಗಳಿಗೆ 200 ರಿಂದ 300 ರವರೆಗೆ ಕಮಿಷನ್ ಬರುತ್ತದೆ ಈ ಕಮಿಷನ್ ಅನ್ನು ರೈತರ ಸುಲಿಗೆ ಮಾಡಿ ಮಿಷನ್ ನವರು ಕೊಡುತ್ತಾರೆ ಒಂದು ಎಕರೆಯನ್ನು ಒಂದು ತಾಸಿಗೆ ಕಟಾವ್ ಮಾಡುವ ಸಾಮರ್ಥ್ಯವು ಆ ಯಂತ್ರಗಳಿಗೆ ಇರುತ್ತದೆ ಆದರೆ ಏಜೆಂಟರುಗಳು ಒಂದು ಎಕರೆಯನ್ನು ಎರಡು ತಾಸಿನಲ್ಲಿ ಕಟಾವು ಮಾಡುವಂತೆ ಯಂತ್ರದ ಚಾಲಕರಿಗೆ ತಾಕೀತು ಮಾಡಿರುತ್ತಾರೆ ಆದ್ದರಿಂದ ರೈತರಿಗೆ ಇದು ದೊಡ್ಡ ಮೋಸವೇ ಆಗಿದೆ.
ಇದನ್ನು ಪ್ರಶ್ನೆ ಮಾಡಿದ ರೈತರ ಹೊಲಗಳಿಗೆ ಭತ್ತ ಕಟಾವು ಯಂತ್ರವನ್ನು ಏಜೆಂಟರುಗಳು ಕಳಿಸುವುದಿಲ್ಲ ಹಾಗಾಗಿ ರೈತರು ಯಾವುದೇ ರೀತಿ ಸುಲಿಗೆಯಾದರೂ ಅವರಿಗೆ ಎದುರು ಮಾತನಾಡದೆ ಬಂದ ಬೆಳೆಯನ್ನು ಕಟಾವು ಮಾಡಿದರೆ ಸಾಕು ಎಂಬಂತೆ ಆಗಿದೆ
ಆದ್ದರಿಂದ ತಾಲೂಕು ದಂಡಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ಜಿಲ್ಲಾಧಿಕಾರಿಗಳು ಮೊದಲು ರಾಜ್ಯಕ್ಕೆ ಬರುವ ಭಕ್ತ ಕಟಾವು ಯಂತ್ರದ ಮಾಲೀಕರನ್ನು ಸಭೆ ಕರೆದು ಒಂದು ಸರಿಯಾದ ದರವನ್ನು ನಿಗದಿ ಮಾಡಿ ಕಟಾವು ಮಾಡಲು ತಿಳಿಸಬೇಕು ಇಲ್ಲದಿದ್ದರೆ ರೈತನಿಗೆ ಮೋಸ ಆಗುವುದು ಈ ಏಜೆಂಟರುಗಳಿಂದ ಈ ಏಜೆಂಟರ ರೈತರ ಮಕ್ಕಳೇ ಹಾಗೂ ಇವರು ರೈತರೇ ಆದರೆ ಇವರು ಹಣದ ವ್ಯಾಮೋಹಕ್ಕೆ ಬಲಿಯಾಗಿ ತನ್ನ ಗ್ರಾಮದ ರೈತನ ಸುಲಿಗೆ ಮಾಡಲು ಹೊರಟಿದ್ದಾರೆ ನಮ್ಮ ತಾಲೂಕಿನಲ್ಲಿ ಇರುವಂತ ಎಲ್ಲಾ ಹಳ್ಳಿಗಳಲ್ಲೂ ಇದೆ ಪರಿಸ್ಥಿತಿ ಆದ್ದರಿಂದ ಮುಂದಿನ ದಿನಗಳಲ್ಲಿ ಇಂಥ ಏಜೆಂಟರುಗಳಿಗೆ ಕಡಿವಾಣ ಹಾಕಬೇಕೆಂದು ನೊಂದ ರೈತರು ಪತ್ರಿಕೆಯೊಂದಿಗೆ ತಮ್ಮ ನೋವನ್ನು ಹೇಳಿಕೊಂಡರು ನಾವು ಪತ್ರಿಕೆಯ ಮುಂದೆ ನಮ್ಮ ಹೆಸರನ್ನು ಸೂಚಿಸಿದರೆ ಮುಂದಿನ ದಿನಗಳಲ್ಲಿ ನಮ್ಮ ಭತ್ತದ ಕಟಾವು ಮಾಡಿಸದೆ ಹೋಗುತ್ತಾರೆ ಏಜೆಂಟರಗಳು ಹಾಗಾಗಿ ನಾವು ಪತ್ರಿಕೆಯವರಿಗೆ ಹೆಸರನ್ನು ಸೂಚಿಸದೆ ನಮ್ಮ ನೋವನ್ನು ಹೇಳಿಕೊಂಡಿದ್ದೇವೆ ಎಂದರು.
ಹಾಗೆಯೇ ಭತ್ತದ ಹುಲ್ಲನ್ನು ಪೆಂಡಿ ಕಟ್ಟುವ ಟ್ರಾಕ್ಟರ್ ನವರು ಒಂದು ಪೆಂಡಿಗೆ ರೂ. 30 ರಿಂದ 40 ರೂ. ತೆಗೆದುಕೊಳ್ಳುತ್ತಾರೆ ಇದರಲ್ಲಿ ಏಜೆಂಟರುಗಳಿಗೆ ಒಂದು ಪೆಂಡಿಗೆ 5 ರೂಪಾಯಿ ಸಿಗುತ್ತದೆ.
ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ವಿಪ ವಿಭಾಗ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ತಾಲೂಕು ದಂಡಾಧಿಕಾರಿಗಳು ಇದರ ಬಗ್ಗೆ ಕ್ರಮ ಕೈಗೊಂಡು ರೈತರಿಗೆ ಆಗುವ ಮೋಸವನ್ನು ಮತ್ತು ಶೋಷಣೆಯನ್ನು ತಪ್ಪಿಸಬೇಕೆಂದು ಸ್ಥಳೀಯ ರೈತರು ಕೇಳಿಕೊಳ್ಳುತ್ತಿದ್ದಾರೆ.
ವರದಿ ಪ್ರಭಾಕರ್ ಡಿ ಎಂ ದಿಡಗೂರು