
ಯಾದಗಿರಿ: ವಡಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕೋರ ಗ್ರೀನ್ ಸಕ್ಕರೆ ಕಾರ್ಖಾನೆ ಯಲ್ಲಿ ವಡಗೇರಾ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಸಾಚಾರಣೆ ಹಾಗೂ ಸಂಚಾರ ನಿಯಮಗಳ ಪಾಲನೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಕಾರ್ಖಾನೆಯ ಎಲ್ಲಾ ಕಬ್ಬಿನ ಲಾರಿ ಚಾಲಕರಿಗೆ / ವಾಹನ ಮಾಲಿಕರಿಗೆ ಹಾಗೂ ಸಿಬ್ಬಂದಿಯವರಿಗೆ ಸಂಚಾರ ನಿಯಮಗಳ ಕುರಿತು ಈ ಕೆಳಕಂಡ ಅಂಶಗಳನ್ನು ತಿಳಿಸಲಾಯಿತು.
1) ವಾಹನ ಚಾಲಕರು ಕಡ್ಡಾಯವಾಗಿ ಪರವಾನಿಗೆ, ವಿಮೆ, ಫಿಟ್ನೆಸ್ ಹೊಂದಿರಬೇಕು
2) ವಾಹನದ ಎರಡು ಬದಿಯಲ್ಲಿ ರೇಡಿಯಂ ಕಡ್ಡಾಯವಾಗಿ ಹಾಕಿಕೊಳ್ಳಬೇಕು
3) ERSS 112 ವಾಹನವನ್ನು ಸದ್ಬಳಕೆ ಮಾಡಿಕೊಳ್ಳುವುದು
4) Cyber crime ಅಪರಾಧ ಕುರಿತು ಜಾಗೃತಿ ಮೂಡಿಸಲಾಯಿತು.
5) ಸಂಶಯಾಸ್ಪದ ವ್ಯಕ್ತಿ ಗಳು ಕಂಡು ಬಂದರೆ ಮಾಹಿತಿ ತಿಳಿಸುವುದು.. ಇತ್ಯಾದಿ.
ಈ ಸಮಯದಲ್ಲಿ ಮಾನ್ಯ ಅರುಣಕುಮಾರ ಜಿ. ಕೊಳ್ಳುರ DSP ಯಾದಗಿರಿ, ಸುನಿಲ ಮೂಲಿಮನಿ CPI Town ಯಾದಗಿರಿ, ಮೆಹಬೂಬ ಅಲಿ PSI ವಡಿಗೇರ ಠಾಣೆ, ಜಗದೀಶ ಪೋಲಿಸ್ ಹಾಗೂ ಸಿದ್ದು ಮುನಮುಟ್ಟಗಿ ಸಕ್ಕರೆ ಕಾರ್ಖಾನೆಯ ಅಧಿಕಾರಿ ಸಿಬ್ಬಂದಿಯವರು ಹಾಜರಿದ್ದರು.
ವರದಿ: ಶಿವರಾಜ ಸಾಹುಕಾರ್ ವಡಗೇರಾ
