ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅನಾಥ ಸ್ಥಿತಿಯಲ್ಲಿದ್ದ ದಂಪತಿಗಳನ್ನು ರಕ್ಷಿಸಿ ಆಶ್ರಮಕ್ಕೆ ಕರೆ ತಂದು ಆಶ್ರಯ ನೀಡಿದ‌ ಡಾ. ನಾಗರಾಜ ನಾಯ್ಕ

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪಟ್ಟಣದ ಹಳೆ ಬಸ್ ನಿಲ್ದಾಣದ ಪಕ್ಕದ ನಗರಸಭೆ ಕಾಂಪ್ಲೆಕ್ಷ್ ನಲ್ಲಿ ಹಲವು ದಿನಗಳಿಂದ ಅನಾರೋಗ್ಯ ಪೀಡಿತರಾಗಿ ಮಲಗಿಕೊಂಡು ಅನಾಥ ಸ್ಥಿತಿಯಲ್ಲಿರುವ ದಂಪತಿಗಳನ್ನು ಶಿರಸಿ ನಗರ ಠಾಣೆಯ ಪೋಲೀಸರ ಸಹಾಯದಿಂದ ರಕ್ಷಿಸಿ ಆಶ್ರಮಕ್ಕೆ ಸೇರಿಸಿಕೊಳ್ಳಲಾಗಿದೆ.

ಕೆಲವು ತಿಂಗಳುಗಳಿಂದ ಶಿರಸಿ ಪಟ್ಟಣದ ಹಳೆ ಬಸ್ ನಿಲ್ದಾಣದ ಪಕ್ಕದ ನಗರಸಭೆ ಕಾಂಪ್ಲೆಕ್ಸ್ ನಲ್ಲಿ ಅನಾರೋಗ್ಯ ಪೀಡಿತರಾಗಿ ಮಲಗಿಕೊಂಡಿದ್ದ ದಂಪತಿಗಳಿಬ್ಬರು ಅನಾಥ ಸ್ಥಿತಿಯಲ್ಲಿ ಇರುವ ಬಗ್ಗೆ ಶಿರಸಿ ನಗರ ಠಾಣೆಯ ಪೋಲೀಸರಿಗೆ ಸಾರ್ವಜನಿಕರು ಮಾಹಿತಿ ನೀಡಿದ್ದು ಅನಾಥ ಸ್ಥಿತಿಯಲ್ಲಿರುವ ದಂಪತಿಗಳನ್ನು ಗಮನಿಸಿದ ಶಿರಸಿ ನಗರ ಠಾಣೆಯ ಪೋಲೀಸರು ನನಗೆ ಕರೆ ಮಾಡಿ ನಮ್ಮ ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮದಲ್ಲಿ ಸೇರಿಸಿಕೊಳ್ಳುವಂತೆ ಕೋರಿಕೊಂಡ ಹಿನ್ನೆಲೆಯಲ್ಲಿ ನಾನು ಹೋಗಿ ಈ ದಂಪತಿಗಳನ್ನು ಶಿರಸಿ ನಗರ ಠಾಣೆಯ ಪೋಲೀಸರ ಸಹಕಾರದಿಂದ ನಮ್ಮ ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮಕ್ಕೆ ಕರೆದುಕೊಂಡು ಬಂದಿರುತ್ತೇನೆ ಇವರ ಹೆಸರು ರವಿ ನಾರಾಯಣ ಗಾಂವಕರ್ ಹಾಗೂ ಆತನ ಪತ್ನಿ ಜ್ಯೊತಿ ಗಾಂವಕರ್ ಎಂದು ತಿಳಿದು ಬಂದಿದೆ ಶಿರಸಿ ಪಡ್ತಿಗಲ್ಲಿ ನಿವಾಸಿಗಳಾದ ಇವರು ಶಿರಸಿ ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರು ಹಾಗೂ ಬೇರೆ ಬೇರೆ ಕೆಲಸಗಳನ್ನು ಮಾಡಿ ಜೀವನ ನಿರ್ವಹಿಸುತ್ತಿದ್ದರು ದುಶ್ಚಟಕ್ಕೆ ಬಲಿಯಾಗಿ ಅನಾರೋಗ್ಯ ಪೀಡಿತರಾದ ಮೇಲೆ ಬಾಡಿಗೆ ಮನೆಯು ಸಿಗದೆ ಕೆಲವು ತಿಂಗಳುಗಳಿಂದ ಶಿರಸಿ ಪಟ್ಟಣದ ಹಳೆ ಬಸ್ ನಿಲ್ದಾಣದ ಪಕ್ಕದ ನಗರಸಭೆ ಕಾಂಪ್ಲೆಕ್ಸ್ ನಲ್ಲಿ ಮಲಗುತ್ತಿದ್ದರು. ಇದರಿಂದಾಗಿ ಕಿರಿಕಿರಿ ಅನುಭವಿಸುತ್ತಿದ್ದ ಸಾರ್ವಜನಿಕರು ಪೋಲಿಸರಿಗೆ ಮಾಹಿತಿ ನೀಡಿದ್ದರು ಎಂದು ಡಾ. ನಾಗರಾಜ ನಾಯ್ಕ
ಮುಖ್ಯಸ್ಥರು, ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಶ್ರಮ ದೇವಸ್ಥಲ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಶಿರಸಿ ನಗರ ಠಾಣೆಯ ಪಿ ಎಸ್ ಐ ನಾಗಪ್ಪ ಬಿ ರವರು ಉಪಸ್ಥಿತರಿದ್ದರು.
ಇಂತಹ ಮಾನವೀಯ ಸೇವೆಗೆ ಸಹಾಯ ಮಾಡಲು ಆಸಕ್ತಿ ಇರುವವರು ಈ ಕೆಳಗಿನ ಖಾತೆ ಸಂಖ್ಯೆಗೆ ಸಹಾಯ ಮಾಡಬೇಕಾಗಿ ವಿನಂತಿ.
PUNITH RAJKUMAR ASHRAYADHAMA ANATHASHRAMA SEVA SAMITI
A/C NO : 40918142470
IFSC CODE : SBIN0040131
BANK NAME : STATE BANK OF INDIA
BRANCH : SIDDAPUR
UPI ID : 9481389187@ybl

PHONE PAY :9481389187

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
ಡಾ. ನಾಗರಾಜ ನಾಯ್ಕ
ಮುಖ್ಯಸ್ಥರು
ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮ ದೇವಸ್ಥಳ, ಮುಗದೂರು, ಪೊ. ಕೊಂಡ್ಲಿ, ತಾ. ಸಿದ್ದಾಪುರ, (ಉಕ) – 581355
ಮೊ. 9481389187, 8073197439

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ