ಬೆಂಗಳೂರು : ಉತ್ತರ ಕನ್ನಡ ಜಿಲ್ಲೆ ಖ್ಯಾತ ಕಥೆಗಾರ, ಕಾದಂಬರಿಕಾರ ಶ್ರೀಧರ ಬಳಗಾರ ಅವರ ಕಥೆಗಳ ಮರು ಓದು ಕಾರ್ಯಕ್ರಮ ಇದೇ ಶನಿವಾರ 14-12-2024 ರಂದು ಬೆಂಗಳೂರಿನ ಆನಂದ್ ರಾವ್ ವೃತ್ತದ ಬಳಿ ಇರುವ ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘದ ಬೆಳ್ಳಿ ಭವನದಲ್ಲಿ ಏರ್ಪಡಿಸಲಾಗಿದೆ.
ಶ್ರೀಮತಿ ಎಂ ಎಸ್ ಆಶಾದೇವಿ, ಚಿಂತಾಮಣಿ ಕೊಡ್ಲೆಕೆರೆ, ಚ ಹ ರಘುನಾಥ, ಜಯಲಕ್ಷ್ಮಿ ಪಾಟೀಲ ಮುಂತಾದವರು ಉಪಸ್ಥಿತರಿರುವರು ಎಂದು
ವಿಶ್ವೇಶ್ವರ ಗಾಯತ್ರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ವಿ.ಸೂ.- ಅನಿವಾರ್ಯ ಕಾರಣಗಳಿಂದ ಆಮಂತ್ರಣ ಪತ್ರಿಕೆಯಲ್ಲಿರುವ ಓ ಎಲ್ ನಾಗಭೂಷಣ ಸ್ವಾಮಿ ಅವರ ಉಪಸ್ಥಿತಿ, ಬದಲಾವಣೆಯಾಗಿರುವದನ್ನು ಗಮನಿಸುವುದು.)
