ದೇವಾಲಯಗಳ ಚಕ್ರವರ್ತಿ ಎಂದೇ ಖ್ಯಾತಿ ಇರುವ ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಇಟಗಿಯ ಗ್ರಾಮದ ಮಹಾದೇಶ್ವರ ದೇವಾಲಯ
ನೋಡಲು ಸುಂದರವಾದ ಸ್ಥಳ ಇತ್ತಿಚಿಗೇ ಪ್ರವಾಸಿಗರನ್ನು ಆಕರ್ಷಿಸುತ್ತಿರು ಕರ್ನಾಟಕದ ಇದು ಒಂದು ಸ್ಥಳ ಪ್ರತಿ ದಿನಲೂ ಕೂಡ ಪ್ರವಾಸಿಗರ ಗಮನವನ್ನು ಸೆಳೆಯುತ್ತಿದೆ,ಇದು ಕಲ್ಯಾಣ ಚಾಲುಕ್ಯರ ದೊರೆ 6ನೇ ವಿಕ್ರಮಾದಿತ್ಯ ಮಾಹಾಮಂತ್ರಿ ಇಟಗಿ ದಂಡನಾಯಕ ಯುದ್ಧ ಜಯಿಸಿದ ಪ್ರತೀಕವಾಗಿ ನಿರ್ಮಿಸಲಾದ ಮಂದಿರ.
ಪ್ರತಿ ವರ್ಷದಂತೆ ಇಟಗಿ ಗ್ರಾಮದಲ್ಲಿ ಇಟಗಿ ಉತ್ಸವ ಸಾಂಸ್ಕೃತಿಕ ಸಮಿತಿ (ರಿ) ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರುರವರ ನೇತೃತ್ವದವಲ್ಲಿ 19ನೇ ಬಾರಿಗೆ ಇಟಗಿ ಉತ್ಸವ ಡಿಸೆಂಬರ್ 24ರಿಂದ 26 ದೇವಾಸ್ಥಾನದಲ್ಲಿ ಈ ಉತ್ಸವ ನಡೆಯುತ್ತಿದೆ
ಉತ್ಸವದಲ್ಲಿ ಶಾಲಾ ಮಕ್ಕಳ ಸಾಂಸ್ಕ್ರತಿಕ ಕಾರ್ಯಕ್ರಮ
ಭರತನಾಟ್ಯ,
ನೃತ್ಯರೂಪಕ
ಜನಪದ ನೃತ್ಯ
ಜನಪದ ಗಾಯನ
ಸುಗಮ ಸಂಗೀತ
ತತ್ವಪದ
ವಿವಿಧ ಸಂಸ್ಕ್ರತ ಕಾರ್ಯಕ್ರಮಗಳು ಜರುಗುತ್ತವೆ
ಇಟಗಿ ದೇವಾಲಯದ ಬಗ್ಗೆ ಮಾಹಿತಿ:-
ಇಟಗಿಯಲ್ಲಿರುವ ಮಹಾದೇವ ದೇವಾಲಯವನ್ನು ಕ್ರಿ.ಶ 1112 ರಲ್ಲಿ ಕಲ್ಯಾಣ ಚಾಲುಕ್ಯ ರಾಜ ವಿಕ್ರಮಾದಿತ್ಯ VI ನ ( ದಂಡನಾಯಕ ) ಮಹಾದೇವ ನಿರ್ಮಿಸಿದನು ಎಂದು ಹೇಳಲಾಗುತ್ತದೆ
ಇಲ್ಲಿ ಒಂದು ಗುಹೆ ಇದೆ ಇಟಗಿಯಿಂದ ನೇರವಾಗಿ ಹಂಪಿಗೆ ಹೋಗುವ ದಾರಿ ಎಂಬುದು ಮಾಹಿತಿ ಇದೇ ಆದರೆ ಇದುವರೆಗೂ ಯಾರು ಆ ಗುಹೆಯನ್ನು ಪ್ರವೇಶಸಿಲ್ಲಾ ಹಾಳಾಗಿರಬಹುದು ಎಂದು ಜನರ ನಂಬಿಕೆ ಮತ್ತು ನೋಡಲು ಸುಂದರವಾದ ಕೆತ್ತನೆಯ ನರ್ತಿಕಿಯರ ಚಿತ್ರಗಳು ಎಲ್ಲರ ಗಮನವನ್ನು ಸೆಳೆಯುತ್ತವೆ ಹಾಗು ಇಲ್ಲಿ ಒಂದು ದೊಡ್ಡದಾದ ಬಾವಿ ಅದಕ್ಕೆ ಸುತ್ತುವರೆದು ಮೆಟ್ಟಿಲುಗಳನ್ನು ಹಾಕಿಸಲಾಗಿದೆ ನೋಡಲು ಸುಂದರವಾಗಿದೆ ವಿಶೇಷ ಏನೆಂದರೆ ಅದರಲ್ಲಿ ಇರುವ ನೀರನ ಉದ್ದ(ಆಳ) ದ ಬಗ್ಗೆ ಮಾಹಿತಿ ಸಿಕ್ಕಿಲ್ಲಾ ಅದೇ ನೀರನ್ನು ಪಾರ್ಕ್ ಗಳಿಗೆ ಬಳಸುತ್ತಿದ್ದಾರೇ ಇದು ಇಂದಿಗೂ ಬತ್ತಿಲ್ಲಾ ಯಾವಾಗಲು ನೀರು ಇರುತ್ತೇ ಮತ್ತು ಮೀನುಗಳ ಸಾಕಣಿಕೆ ಮಾಡಲಾಗಿದೆ
ಒಳಗಡೆ ಎರಡು ಬಾವಿಗಳಿವೆ
ಉತ್ತಮವಾಗಿ ಕಾರ್ಯರೂಪಕ್ಕೆ ಬಂದ ಶಿಲ್ಪಗಳು, ಗೋಡೆಗಳು,ಕಂಬಗಳು ಮತ್ತು ಗೋಪುರದ ಮೇಲೆ ಉತ್ತಮವಾಗಿ ರಚಿಸಲಾದ ಕೆತ್ತನೆಗಳು ಇದು ಸಂಪೂರ್ಣ ಪಾಶ್ಚಾತ್ಯ ಚಾಲುಕ್ಯನ್ ಕಲೆಗೆ ಉತ್ತಮ ಉದಾಹರಣೆಯಾಗಿದೆ
ಮಹಾದೇವ ದೇವಸ್ಥಾನದಲ್ಲಿ ಲ್ಯಾಥ್ ತಿರುಗಿದ ಕಂಬಗಳನ್ನು ಹೊಂದಿರುವ ಮಂಟಪ ಇಟಗಿಯ ಮಹಾದೇವ ದೇವಸ್ಥಾನದಲ್ಲಿ ಅಲಂಕೃತ ಕಂಬಗಳು ಮತ್ತು ಡೊಮಿಕಲ್ ಸೀಲಿಂಗ್‌ನೊಂದಿಗೆ ಮುಖಮಂಟಪ ಪ್ರವೇಶದ್ವಾರವಿದೆ
ಮಹಾದೇವ ದೇವಸ್ಥಾನದ ಮುಖಮಂಟಪದಲ್ಲಿ ಡೋರ್ಜಾಂಬ್ ಅಲಂಕಾರ
ಇಟಗಿಯಲ್ಲಿರುವ ಮಹಾದೇವ ದೇವಸ್ಥಾನದ ಮುಚ್ಚಿದ ಮಂಟಪದ ಒಳಗೆ ಸಣ್ಣ ದೇಗುಲ ನಕ್ಷತ್ರಕಾರದ ಜಗುಲಿ,ವಿಭಿನ್ನವಾದ ಕೆತ್ತನೆಯನ್ನು ಒಳಗೊಂಡಿರುವ ಕಂಬಗಳು ರಂಗಮಂಟದಲ್ಲಿನ ಕಂಬಗಳು ಚನ್ನಕೇಶವ ಗುಡಿ ಮಾದರಿಯಲ್ಲಿ ಇವೇ ಗರ್ಭಗುಡಿ, ಸುಕನಾಸಿ, ನವರಂಗ ಮಂಟಪಗಳನ್ನು ಈ ದೇವಾಲಯ ಪರಿಪೂರ್ಣ ದೇವಾಲಯ ಎಂದೇ ಖ್ಯಾತಿ ಗೋಲಾಕರವಾಗಿ ತಗ್ಗಾಗಿರುವ ಈ ಭುವನೇಶ್ವರಿಯಲ್ಲಿ ಬೈರವ ಇದ್ದಾನೆ ಇಡಿ ದೇವಾಲಯದಲ್ಲಿ ಕುಸುರಿ ಕೆಲಸವೇ ತುಂಬಿಕೊಂಡಿದೆ
“ಇತಿಹಾಸಕಾರ ಹೆನ್ರಿ Cousens ಈ ಸ್ಮಾರಕ “ಅತ್ಯುತ್ತಮ ಎಂಬ ಕನ್ನಡ ನಂತರ ದೇಶದ ಹಳೇಬೀಡು*
ಕಲಾ ವಿಮರ್ಶಕ ಬ್ರೌನ್ ಅಭಿಪ್ರಾಯ ಪಟ್ಟಂತೆ “ಹಳೇ ಬಿಡು ಹೊಯ್ಸಳೇಶ್ವರ ದೇವಸ್ಥಾನ ಬಿಟ್ಟರೇ ಇದೇ ದೇವಾಲಯ ಶ್ರೇಷ್ಠ ವಾಗಿದೇ ಎಂದು ಹೇಳಿದ್ದಾರೆ ಗೋಪುರ ಕಂಬಗಳು ಮೇಲೆ ಮೇಣದಂತೆ ಅತಿ ಸರಾಗವಾಗಿ ಕೆತ್ತಲ್ಪಟ್ಟ ಚಿಕ್ಕ ಚಿಕ್ಕ ಗೊಂಬೆಗಳು, ಮೂರ್ತಿಗಳು, ಶಿಲಾಬಾಲಿಕೆರು, ಡೋಲು ಡಮುರುಗ ಹಿಡಿದು ನರ್ತಿಸುವ ನರ್ತಕಿಯರು ರಾಮಾಯಣ,ಮಾಹಾಭಾರತ ಸನ್ನಿವೇಶಗಳ ಕೆತ್ತನೆಗಳು ಮನೋಹರವಾಗಿ ಮೂಡಿಬಂದಿವೇ
ಕಲ್ಯಾಣ ಚಾಲುಕ್ಯರ ಬಗ್ಗೆ:-
ಕಲ್ಯಾಣ ಚಾಲ್ಯುಕ್ಯರು ಇವರು ರಾಷ್ಟ್ರಕೂಟರ ಸಾಮಂತರಾಗಿದ್ದರು
2 ನೇ ತೈಲಪ ಈ ಸಂತತಿಯ ಸ್ಥಾಪಕ, ಮಾನ್ಯಕೇಟ ಇವರ ಮೊದಲ ರಾಜಧಾನಿಯನ್ನು ಮಾಡಿಕೊಂಡಿದ್ದರು ನಂತರ
2 ಸೋಮವೇಶ್ವರ ರಾಜಧಾನಿಯನ್ನು ಕಲ್ಯಾಣಕ್ಕೆ(ಬಿದರ) ಇದನ್ನು ಬಸವ ಕಲ್ಯಾಣ ಎಂದೇ ಖ್ಯಾತಿ ವರ್ಗಾಹಿಸಿದನು.
6ನೇ ವಿಕ್ರಮಾದಿತ್ಯ(ಸಾ ಶ 1076-1126)
6ನೇ ವಿಕ್ರಮಾದಿತ್ಯ ಈ ವಂಶದ ಅತ್ಯಂತ ಪ್ರಮುಖ ಅರಸ .ಅವನು 50 ವರ್ಷಕಾಲ ಆಳಿದನು ಅವನು ಬನವಾಸಿಯಲ್ಲಿ ತನ್ನ ಸಹೋದರ ಜಯಸಿಂಹನ ದಂಗೆಯನ್ನು ಹತ್ತಿಕ್ಕಿದನು. ನಂತರ ಹೊಯ್ಸಳ ಅರಸರಾದ 1 ನೇ ಬಲ್ಲಾಳ ಮತ್ತು ವಿಷ್ಣುವರ್ಧನನ ದಂಗೆಯನ್ನು ಎದುರಿಸಬೇಕಾಯಿತು
ಇವನ ಪ್ರಸಿದ್ಧ ದಂಡನಾಯಕ “ಮಹಾದೇವ ದಂಡೇಶ”
ಕ್ರಿ ಶ 1112 ರಲ್ಲಿ ಇಟಗಿಯಲ್ಲಿರು ಮಾಹದೇವ ದೇವಾಲಯವನ್ನು” ( ದೇವಲಯ ಚಕ್ರವರ್ತಿ ) ಎಂದು ಕರೆಯುತ್ತಾರೆ
ಅವನು ಅಧಿಕಾರಕ್ಕೆ ಬಂದ ನೆನಪಿಗಾಗಿ ಸಾ,ಶ 1076 ರಲ್ಲಿ ವಿಕ್ರಮ ಶಕೆ ಆರಂಭಿಸಿದನು
6ನೇ ವಿಕ್ರಮಾದಿತ್ಯನ ರಾಣಿ ಚಂದ್ರಲೇಖ ನೃತ್ಯ,ಸಂಗೀತ ಮತ್ತು ಲಲಿತ ಕಲೆಗಳಲ್ಲಿ ಪ್ರವೀಣೆಯಾಗಿದ್ದಳು
ಆದರಿಂದ ಈಕೆಗೆ ‘ನೃತ್ಯ ವಿದ್ಯಾಧರಿ’ ಮತ್ತು ಅಭಿನಯ ಸರಸ್ವತಿ ಎಂಬ ಬಿರುದುಗಳಿವೆ.
ಗೋವಾದ ಕದಂಬರು ಮತ್ತು ಕರಾಡದ ಶಿಲಾಹರರ ದಂಗೆಗಳನ್ನು ಹತ್ತಿಕ್ಕುವಲಿ ಯಶಸ್ವಿಯಾದನು.
ಇವನ ಸಾಮ್ರಾಜ್ಯವು ಉತ್ತರದಲ್ಲಿ ನರ್ಮದ ನದಿಯಿಂದ ದಕ್ಷಿಣದಲ್ಲಿ ಕಡಪಾದವರೆಗೂ ಪೂರ್ವ ಮತ್ತು ಪಶ್ಚಿಮಗಳಲ್ಲಿ ಎರಡು ಸಮುದ್ರಗಳವರೆಗೂ ವಿಸ್ತರಿಸಿತ್ತು
ಬಿರುದುಗಳು
ತ್ರಿಭುವನ ಮಲ್ಲ
6 ನೇ ವಿಕ್ರಮಾಧಿತ್ಯನ ಸಾಹಸ ತಿಳಿಸುವ ಶಾಸನ-ಲಕ್ಷ್ಮೀಶ್ವರ ಶಾಸನ
ಇವರು ವೈಧಿಕ ದರ್ಮದ ಅನುಯಾಯಿಗಳ ಆಗಿದ್ದರು
ಗದಗ,ಇಟಗಿ,ಉಮಚ್ಚಗಿ,ನಾಗವಿ ಪ್ರಮುಖ ಶಿಕ್ಷಣದ ಕೇಂದ್ರಗಳು
ಕನ್ನಡದ ಪ್ರಸಿದ್ಧ ಕವಿ ರನ್ನನಿಗೆ ಸತ್ಯಾಶ್ರಯನು ಆಶ್ರಯ ನೀಡಿದ್ದನ್ನು
ಸಾಹಿತ್ಯ:
ರನ್ನನ-ಗಧಾ ಯುದ್ದ( ಸಾಹಸ ಭೀಮವಿಜಯ)
ಅಜಿತ್ ನಾಥ ಪುರಾಣ
ಕಲ್ಯಾಣ ಚಾಲ್ಯುಕ್ಯರ ಪ್ರಸಿದ್ದ ಅರಸನಾದ ಜಗದೇಕ ಮಲ್ಲನು ಸಂಗೀತ ಚೂಡಾಮಣಿಯನ್ನು ಬರೆದಿದ್ದಾನೆ
:ಮಾಹಿತಿ ಸಂಗ್ರಹ
ನಿಮ್ಮ ಜಿ ಕೆ (ಗವಿ,ಕೆರಳ್ಳಿ)