ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕರಡಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಕರಡಿ ದೇವರಾಜು ಅವರು ಸತತ 5ನೇ ಬಾರಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಕೆ .ಆರ್. ದೇವರಾಜು, ಸಂಘದ ಸದಸ್ಯರು ನಮ್ಮ ಮೇಲೆ ಅಭಿಮಾನವಿಟ್ಟು ಆಡಳಿತ ಮಂಡಳಿಗೆ ಬಹುಮತದಿಂದ ಆಯ್ಕೆ ಮಾಡಿದ್ದು ಅವರೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ಹಾಗೆಯೇ ನಮ್ಮಗಳ ಸಹಕಾರಿ ಮುಖಂಡರಾದ ಸಹಕಾರ ಸಚಿವರಾದ ಶ್ರೀ ಕೆ ಎನ್ ರಾಜಣ್ಣನವರ ಮಾರ್ಗದರ್ಶನದಲ್ಲಿ ಸದಸ್ಯರಿಗೆ ಹಾಗೂ ರೈತ ಬಾಂಧವರಿಗೆ ಹೆಚ್ಚಿನ ಸೇವೆ ಸಲ್ಲಿಸುವುದಾಗಿ ತಿಳಿಸಿದರು ಹಾಗೂ ನಮ್ಮ ಸಂಘದ ರೈತರಿಗೆ ಹೆಚ್ಚಿನ ಸಾಲ ಸೌಲಭ್ಯ ಹಾಗೂ ನೆರವನ್ನು ನೀಡುವಂತೆ ಸಹಕಾರ ಸಚಿವರು ಹಾಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಕೆ ಎನ್ ರಾಜಣ್ಣನವರನ್ನು ಈ ಸಂದರ್ಭದಲ್ಲಿ ಕೋರಿಕೊಂಡರು.
ಉಪಾಧ್ಯಕ್ಷರಾಗಿ ನ್ಯಾಕೇನಹಳ್ಳಿ ವೀರಣ್ಣ ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಸಂಘದ ನೂತನ ನಿರ್ದೇಶಕರುಗಳಾದ ಕರುಡಾಳು ಬಸವರಾಜು, ಕೊಟ್ಟಿಗೆಹಳ್ಳಿ ಶಿವಮೂರ್ತಿ, ಉಪ್ಪಿನಳ್ಳಿ ಜಯಣ್ಣ, ಕಟ್ಟೆಹಳ್ಳಿ ದೊಡ್ಡಲಿಂಗಯ್ಯ, ಶಿವಪುರ ಶೇಷಣ್ಣ, ಮಲ್ಲಿಪಟ್ಟಣ ಅಮೃತ ಶ್ರೀ, ಕೊಂಡ್ಲಿಘಟ್ಟ ಭಾರತಿ, ಮಲ್ಲಿಪಟ್ಟಣ ಮಲ್ಲೇಶಯ್ಯ, ಅಣ್ಣ ಮಲ್ಲೇನಹಳ್ಳಿ ಕೃಷ್ಣಯ್ಯ, ಶಿಡ್ಲೆಹಳ್ಳಿ ಜಯಣ್ಣ, ಡಿ.ಸಿ.ಸಿ ಬ್ಯಾಂಕಿನ ಮೇಲ್ವಿಚಾರಕರಾದ ಟಿ.ಪಿ ಉಮಾಶಂಕರ್ ಸೇರಿದಂತಹ ಸಂಘದ ಸದಸ್ಯರು ಹಾಜರಿದ್ದರು.
ಚುನಾವಣಾ ಅಧಿಕಾರಿಯಾಗಿ ಸಹಕಾರ ಇಲಾಖೆಯ ಶ್ರೀರಂಗನಾಥ್ ಕರ್ತವ್ಯ ನಿರ್ವಹಿಸಿದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮನು ಎಸ್ ಎಂ ಹಾಗೂ ಸಿಬ್ಬಂದಿ ವರ್ಗ ಚುನಾವಣೆಯಲ್ಲಿ ಕಾರ್ಯನಿರ್ವಹಿಸಿದರು.
