ವಿಜಯನಗರ/ಕೂಡ್ಲಿಗಿ :
19/01/2025 ರಂದು ಬೆಳಗ್ಗೆ 11-00 ಗಂಟೆಗೆ ಪ್ರವಾಸಿ ಮಂದಿರ ಕೂಡ್ಲಿಗಿಯಲ್ಲಿ ತಾಲೂಕಿನ ನಿವೃತ್ತ ನೌಕರರ ಸಂಘದ ವಾರ್ಷಿಕ ಮಹಾಸಭೆ ಜರುಗಿತು.
ಪ್ರಸ್ತುತ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಶ್ರೀ ಎ. ಎಂ ವೀರಯ್ಯನವರು ಸ್ವಇಚ್ಛೆಯಿಂದ ಪದಗ್ರಹ ಸ್ಥಾನಕ್ಕೆ ರಾಜೀನಾಮೆ ನೀಡಿದ ತೆರವಾದ ಕಾರ್ಯಕಾರಿ ಸಮಿತಿಯ ನಿರ್ದೇಶಕರ ಸ್ಥಾನಗಳನ್ನು ನೂತನವಾಗಿ ಆಯ್ಕೆ ಮಾಡುವ ಪ್ರಕ್ರಿಯೆ ಮಹಾಜನ ಸಭೆ ಏರ್ಪಡಿಸಿದ ಶ್ರೀ ರಾಮಪ್ಪ ಆಧ್ಯಕ್ಷರು, ವಿಜಯನಗರ ಜಿಲ್ಲಾ ನಿವೃತ್ತ ನೌಕರರ ಸಂಘ ಇವರ ನೇತೃತ್ವದಲ್ಲಿ ಸದರಿ ಸಭೆಯ ಅಧ್ಯಕ್ಷತೆಯನ್ನು ಶ್ರೀ ಜಿ.ಎಂ. ಬಸಣ್ಣ ವಹಿಸಿಕೊಂಡು ಎಲ್ಲಾ ನಿವೃತ್ತ ನೌಕರರ ಸಮಕ್ಷಮದಲ್ಲಿ 18 ಜನ ನಿರ್ದೇಶಕರನ್ನು ಅವಿರೋಧವಾಗಿ ಅಯ್ಕೆ ಮಾಡಲಾಯಿತು.
ನಾರಾಯಣಪ್ಪ ,ಜಿ,ಎಂ,ಬಸಣ್ಣ ಉಮಾಮಹೇಶ್, ತೋಟದ ಗೌಡ, ಮಖ್ದುಂಭಾಷಾ, ಕ್ಯಾರಿ ಚನ್ನಪ್ಪ, ಬಸವರಾಜ, ಚೌಡಮ್ಮ, ಗೌರಮ್ಮ, ಶ್ಯಾಮಸುಂದರ ಸಪಾರೆ, ಪರಮೇಶ್ವರಪ್ಪ, ಅಲ್ಲಾ ಭಕ್ಷಿ, ತಳವಾರ ಶರಣಪ್ಪ, ರುದ್ರಮುನಿ ಸ್ವಾಮಿ, ಸಿದ್ದಪ್ಪ, ಸತ್ಯನಾರಾಯಣ ರೆಡ್ಡಿ, ಸೋಮಶೇಖರ್, ಶಂಕರ್ ಇವರುಗಳನ್ನು ಸರ್ವಾನುಮತದಿಂದ ಅಂಗೀಕರಿಸಿ
ನಿರ್ದೇಶಕರುಗಳಾಗಿ ಆಯ್ಕೆ ಮಾಡಲಾಯಿತು.
ಸದರಿ ನಿರ್ದೇಶಕರ ಪೈಕಿ, ಅಧ್ಯಕ್ಷರಾಗಿ ಶ್ರೀ ತಳವಾರ ಶರಣಪ್ಪ, ಕಾರ್ಯದರ್ಶಿಗಳಾಗಿ ಶ್ರೀ ಉಮಾಮಹೇಶ , ಖಜಾಂಚಿಯಾಗಿ ಶ್ರೀ ರುದ್ರಮುನಿ ಸ್ವಾಮಿ ಇವರು ಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸದರಿ ಸಭೆಯಲ್ಲಿ, ಜಿಲ್ಲಾ ಅಧ್ಯಕ್ಷರು, ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರು, ಉಪಸ್ಥಿತರಿದ್ದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ
