ತುಮಕೂರು ಜಿಲ್ಲೆಯ ಪಾವಗಡ:ಮಾದಿಗ ಸಮುದಾಯದಲ್ಲಿ ಜಾಗೃತಿ ವಿಚಾರ ಸಂಕಿರ್ಣ ಸಮಾವೇಶದಲ್ಲಿ ಒಗ್ಗಟ್ಟಿ ಮಂತ್ರ ಜಪಿಸಿದ ಮುಖಂಡರು” ಪಾವಗಡ ಪಟ್ಟಣದ ಡಾ”ಬಿ.ಅರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಮ್ಮಿಕೊಂಡ ಮಾದಿಗ ಸಮುದಾಯದಲ್ಲಿ ಜಾಗೃತಿ ವಿಚಾರ ಸಂಕಿರ್ಣ ಸಮಾವೇಶ ಮತ್ತು ತಾಲ್ಲೂಕು ಮಾದಿಗ ದಂಡೋರ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕರು ಹಾಗೂ ತುಮಕೂರು ಜಿಲ್ಲಾ ಮಾದಿಗ ದಂಡೋರ ಅಧ್ಯಕ್ಷರು ಆದ ವೈ.ಎಚ್ ಹುಚ್ಚಯ್ಯ ರವರು ಮಾತನಾಡುತ್ತಾ ಜನಾಂಗೀಯ ಸರ್ವಾಂಗೀಣ ಜಾಗೃತಿಯ ದೃಷ್ಟಿಯಿಂದ ಈ ಸಭೆ ನಡೆಸಲಾಗುತ್ತಿದೆ ಈ ಪಾವಗಡ ಕ್ಷೇತ್ರದಲ್ಲಿ ಮಾದಿಗ ಸಮುದಾಯವು ಅತಿ ಹೆಚ್ಚು ಜನಸಂಖ್ಯೆ ಹೊಂದಿರುತ್ತದೆ ಅದ್ದರಿಂದ ಈ ಕ್ಷೆತ್ರ ಎಸ್ಸಿ ಮೀಸಲು ಕ್ಷೇತ್ರವಾಗಿದೆ ಅದರೆ 75ವರ್ಷಗಳಿಂದ ನಾವೆ ಅಧಿಕಾರವನ್ನು ನಡೆಸುತ್ತಿದ್ದೆವೆ ನಾವು ಎಷ್ಟೋ ಅಭಿವೃದ್ಧಿಯನ್ನು ಕಾಣಬಹುದಿತ್ತು ಅದರೆ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಟಿತವಾಗಿದೆ ಮತ್ತು ನಾನು ಜಿಲ್ಲಾ ಪಂಚಾಯತಿ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಈ ಕ್ಷೇತ್ರದ ಗಂಗಾ ಕಲ್ಯಾಣ ಯೋಜನೆಯ ಪಟ್ಟಿ ಕಳುಹಿಸಲು ವಿಳಂಬವನ್ನು ಮಾಡಿದ್ದರು ಆಗ ನಾನು ಸಂಭವಿಸಿದ ಅಧಿಕಾರಿಗಳಿಗೆ ಕರೆಸಿಕೊಂಡು ಪಟ್ಟಿಯನ್ನು ತರೆಸಲು ಆದೇಶಿಸಲಾಯಿತು ನಂತರ ಕಳುಹಿಸಿದ ಪಟ್ಟಿ ನೋಡಿದರೆ ಅದರಲ್ಲಿ 20ಕ್ಕೆ ಕೇವಲ 2 ಮಾತ್ರ ನಮ್ಮ ಮಾದಿಗ ಸಮುದಾಯದ ಫಲಾನುಭವಿಗಳು ಇದ್ದದ್ದು ಇದನ್ನು ನೋಡಿ ನಾನು ಆ ಪಟ್ಟಿಯನ್ನು ವಾಪಸ್ಸು ಕಳುಹಿಸಿ ಪಟ್ಟಿ ಸರಿಯಾಗಿ ಮಾಡಲು ಹೇಳಿದರೂ ಅದು ಪ್ರಯೋಜನವಾಗಲಿಲ್ಲ ಅದ್ದರಿಂದ ಜನಾಂಗೀಯ ಅಭಿವೃದ್ಧಿ ಹೊಂದ ಬೇಕು ಎಂದರೆ ರಾಜಕೀಯ ಅಧಿಕಾರ ನಮ್ಮ ಕೈಯಲ್ಲಿ ಇರಬೇಕು ರಾಜಕೀಯ ಹಕ್ಕು ಇಲ್ಲದಿದ್ದರೆ ನಾವು ಅಭಿವೃದ್ಧಿ ಹೋಂದಲು ಸಾದ್ಯವಿಲ್ಲ ಹಾಗೆ ಬದುಕಿನಲ್ಲಿ ಬಡತ ಇರುವುದರಿಂದ ನಾಮಗೆ ನಾವು ಮೋಸ ಮಾಡಿಕೊಂಡು ಮತ ಮಾರಿಕೊಳ್ಳುತ್ತಿದ್ದೇವೆ ಎಂದು ತನ್ನ ಸಮಾಜವನ್ನು ಹೆಚ್ಚರಿಸಿ ಮತದಾನದ ಮಹತ್ವವನ್ನು ತಿಳಿಸಿದರು ಹಾಗೆ ಜನಾಂಗೀಯ ಮುಖಂಡರು ಬುದ್ದಿ ಹೆಚ್ಚಿಸಿಕೊಂಡು ದುರಹಾಂಕರವನ್ನು ಕಡಿಮೆ ಮಾಡಿಕೊಂಡು ಒಗ್ಗಟ್ಟನ್ನು ಪ್ರದರ್ಶಿಸಿಸಬೇಕು ಎಂದು ಎಚ್ಚರಿಸುತ್ತಾ ಅಧಿಕಾರ ಪಡೆದ ತಕ್ಷಣ ಗುಡಿಸಲಿನಲ್ಲಿ ವಾಸವಿರುವವರ ಕಡೆ ಗಮನ ಹರಿಸಿ “ಪ್ರಜಾಪ್ರಭುತ್ವದಲ್ಲಿ ರಾಜಕಾರಣವೇ ಮೇರು ಪರ್ವತ ಎಂದು ತನ್ನ ಸಮಾಜಕ್ಕೆ ಹಿತ ಬೋಧನೆ ಮಾಡಿದರು ಈ ಸಮಾವೇಶದಲ್ಲಿ ಭಾಗವಹಿಸಿದ ತಾಲ್ಲೂಕಿನ ಮಾಜಿ ಶಾಸಕರು ಆದ ತಿಮ್ಮರಾಯಪ್ಪನವರು ಮಾತನಾಡುತ್ತಾ ಈಗಿನ ತಾಲ್ಲೂಕಿನ ಪ್ರತಿನಿಧಿಯಾದವರು ತಾಲ್ಲೂಕಿನ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವುದರಲ್ಲಿ ಇಲ್ಲಿನ ಶಾಸಕರು ವಿಫಲವಾಗಿದ್ದಾರೆ ಹಾಗೆಯೇ ನನ್ನ ಅವದಿಯಲ್ಲಿ ತಾಲ್ಲೂಕಿನಲ್ಲಿ 120 ಕ್ಕೂ ಅಧಿಕ ಸಮುದಾಯ ಭವನಗಳನ್ನು ಮಾಡಿದ್ದೇನೆ ಹಾಗೆ 8 ರೆಸಿಡೆನ್ಸಿ ಹಾಸ್ಟೆಲ್ ತಂದಿದ್ದೆನೆ 2000 ಎಕರೆ ಜಮೀನು ಭೂ ಒಡೆತನದ ಯೋಜನೆಯನ್ನು 300ಎಕರೆಯಂತೆ ಮಂಜೂರು ಮಾಡಿಸಿದ್ದೆನೆ ಹಾಗೆ ನನ್ನ ಅವದಿಯಲ್ಲಿ ಏನೇನು ಕೆಲಸವನ್ನು ಮಾಡಿದ್ದೆನೆಂದು ಮುಂದಿನ ದಿನಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ಬರುತ್ತೇನೆ ಆಗ ನೀವೇ ತೀರ್ಮಾನ ಮಾಡಿ ಎಂದರು ನಂತರ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ರಾಜ್ಯ ಮಾದಿಗ ದಂಡೋರ ಸಮಿತಿಯ ಅಧ್ಯಕ್ಷರಾದ ಶಂಕರಪ್ಪ ನವರು ಮಾತಾಡುತ್ತಾ ಪಾವಗಡಕ್ಕೆ 75 ವರ್ಷಗಳಿಂದಲೂ ಮೀಸಲು ಕ್ಷೇತ್ರವಾಗಿ ಮುಂದುವರೆಯುತ್ತಿದೆ ಅದರೆ ಇಲ್ಲಿ ಜನಾಂಗದ ಮತಗಳು ಅತೀ ಹೆಚ್ಚು ಇದ್ದರೂ ಕೂಡಾ ನಮ್ಮ ಜನಾಂಗದ ಒಬ್ಬ ಶಾಸಕರನ್ನು ಆಯ್ಕೆ ಮಾಡಲು ಅಗಲಿಲ್ಲ ಎಂದರೆ ನಾಚಿಕೆಯಾಗಬೇಕು ಮತ್ತು ರಾಜ್ಯದಲ್ಲಿ ಕೂಡಾ 1.20ಲಕ್ಷ ದಲಿತ ಮತದಾರರು ಇದ್ದರು ನಾಮಗೆ ನಮ್ಮ ದಲಿತರನ್ನು ಮುಖ್ಯಮಂತ್ರಿ ಮಾಡಲು ಅಗುತ್ತಿಲ್ಲ ಕಾರಣ ನಮ್ಮಲ್ಲಿ ಒಗ್ಗಟ್ಟಿನ ಕೋರತೆ ಹಾಗೆಯೇ ಸಮಾಜದಲ್ಲಿ ಯಾವಗ ಹೆಣ್ಣು ವಿದ್ಯಾ ಬುದ್ದಿ ಜ್ಞಾನ ಸಂಸ್ಕಾರ ಹೋಂದುತ್ತದೆಯೋ ಆ ಸಮಾಜ ಕಂಡಿತ ಉದ್ದರವಾಗುತ್ತದೆ ಎಂದರು ಹಾಗೆ ಒಂದು ಮಗು 5ವರ್ಷ ಪೂರ್ಣವಾಗುತ್ತಲೇ ಅವರನ್ನು ವಸತಿ ಶಾಲೆಗಳಿಗೆ ಸೇರಿಸಿ ಆಗಾ ಮಾತ್ರ ಮಕ್ಕಳು ವಿದ್ಯಾವಂತರಾಗುತ್ತರೆ ಹಾಗೆ ನಮ್ಮಲ್ಲಿ ಒಗ್ಗಟ್ಟು ಇಲ್ಲದಿದ್ದರೆ ಏನೆಲ್ಲಾ ನಷ್ಟಗಳು ಅವಮಾನಗಳು ಅಗುತ್ತವೆ ಎಂದು ಸಮಾಜದ ಬಗ್ಗೆ ಹೇಳುತ್ತಾ ಭಾವುಕಾದರು ಹಾಗೆ ಈಗಿನ ಸ್ಥಿತಿಯಲ್ಲಿ ಮಾದಿಗರಿಗೆ ರಾಜಕೀಯ ಅಧಿಕಾರ ಇದ್ದರೂ ಅವರಿಗೆ ಸ್ವತಂತ್ರ ಇರುವುದಿಲ್ಲ ಎಂದು ಅವರು ಕಳವಳವನ್ನು ವ್ಯಕ್ತಪಡಿಸಿದರು,ನಂತರ ತಾಲ್ಲೂಕಿನ ದಂಡೋರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ದಂಡೋರ ಉಪಾಧ್ಯಕ್ಷರಾದ ವಳ್ಳುರು ನಾಗೇಶ,ಮಾಜಿ ಶಾಸಕರಾದ ಗಂಗಾಹನುಮಯ್ಯ,ಸಮಾಜ ಸೇವಕರಾದ ನಾಗೇಂದ್ರ ಕುಮಾರ್ ,ಸಾಕೆಲ್ ಶಿವಕುಮಾರ್,ವಕೀಲರು ಆದಿನಾರಾಯಣಪ್ಪ.ಶಿವಪ್ಪ ವೈ ಎನ್ ಹಳ್ಳಿ ,ರಾಮಾಂಜಿನಪ್ಪ ಮಾಜಿ ಅಧ್ಯಕ್ಷರು, ಇನ್ನು ಆನೆಕ ಸಮಾಜದ ಮುಖಂಡರು ಮತ್ತು ಮಾದಿಗ ಸಮಾಜದ ಬಂಧುಗಳು ಪಾಲ್ಗೊಂಡಿದ್ದರು
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.