ರಾಯಚೂರು ಜಿಲ್ಲೆಯ ಸಿಂಧನೂರಿಗೆ ಡಿ.29 ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ರಾಜನಳ್ಳಿ ಜಗದ್ಗುರು ಶ್ರೀ ಪ್ರಸನ್ನಾಂದಪುರಿ ಸ್ವಾಮೀಜಿಯವರು ಆಗಮಿಸಿದ್ದರು.ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ನೂತನ ರಥ ಲೋಕಾರ್ಪಣೆಯ ಬಗ್ಗೆ ಲಿಂಗೈಕ್ಯ ಜಗದ್ಗುರು ಶ್ರೀ ಪುಣ್ಯಾನಂದಪುರಿ ಮಹಾಸ್ವಾಮೀಜಿಯವರ 16ನೇ ವರ್ಷದ ಪುಣ್ಯರಾಧನೆ,ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿಯವರ 15ನೇ ವರ್ಷದ ಪಟ್ಟ ಅಧಿಕಾರ ಮಹೋತ್ಸವ ದಿನಾಂಕ 8 ಮತ್ತು 9 ಫೆಬ್ರವರಿ 2023 ರಂದು ಜರುಗಲಿದೆ ಎಂದು ವಾಲ್ಮೀಕಿ ಸಮಾಜದ ಮುಖಂಡರಿಗೆ ತಿಳಿಸಿದರು ಹಾಗೂ ವಾಲ್ಮೀಕಿ ಸಮಾಜವನ್ನು ಅಭಿವೃದ್ಧಿಗೊಳಿಸಲು ಕಠಿಣವಾದ ಸತ್ಯಾಗ್ರಹ ಕೂರಲು ಸಿದ್ದ ಮತ್ತು ನಕಲಿ ಜಾತಿ ಪ್ರಮಾಣ ಪತ್ರದ ಬಗ್ಗೆ ಅರಿವನ್ನು ಮೂಡಿಸಿದರು ಮತ್ತು 7.5 ಎಸ್ ಸಿ ಎಸ್ ಟಿ ಒಳ ಮೀಸಲಾತಿಯ ಬಗ್ಗೆ ಹೋರಾಟದ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಹಾಗೂ ನಮ್ಮ ಸಮುದಾಯದ ನಾಯಕರಿಗೆ ಬುದ್ದಿ ಬರಬೇಕು.ಒಬ್ಬರಿಗೂ ಸಮುದಾಯದ ಹಿತದ ಬಗ್ಗೆ ಕಾಳಜಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಸಿಂಧನೂರು ತಾಲೂಕಿನ ವಾಲ್ಮೀಕಿ ಸಮಾಜದ ಅಧ್ಯಕ್ಷರ ಬಳಗ,ಸಿಂಧನೂರು ತಾಲೂಕಿನ DYSP ವೆಂಕಟಪ್ಪ ನಾಯಕ ಹಾಗೂ ಸಮಾಜದ ಮುಖಂಡರಾದ ವಿಶ್ವನಾಥ್ ನಾಯಕ್ ಮದಕರಿ ನಾಯಕ ಸಂಘದ ಅಧ್ಯಕ್ಷ, ಮಲ್ಲಯ್ಯ ನಾಯಕ್ ವಕೀಲ ಗೋನವಾರ,ಓಬಳೇಶ್ ನಾಯಕ್ ಶ್ರೀ ವಾಲ್ಮೀಕಿ ಟ್ರಸ್ಟ್ ಅಧ್ಯಕ್ಷ ಗ್ರಾಮೀಣ ಘಟಕ ಗೊರೆಬಾಳ,ಶಿವಣ್ಣ ನಾಯಕ ಪಲ್ಲದಿನ್ನಿ, ಪಂಪಾಪತಿ ನಾಯಕ್ ನಗರಸಭೆ ಎಸ್ ಟಿ ಘಟಕದ ಅಧ್ಯಕ್ಷ,ನಾಗರಾಜ್ ನಾಯಕ್ ದೇವರಗುಡಿ,ಯಲ್ಲಪ್ಪ ನಾಯಕ ಹುಲಿಯಾಪುರ,ಮೌನೇಶ್ ನಾಯಕ್ ರಾಗಿ ಕ್ಯಾಂಪು ಹಾಗೂ ಇನ್ನೂ ಹಲವಾರು ಸಮಾಜದ ಮುಖಂಡರು ಪೂರ್ವಸಭೆಯಲ್ಲಿ ಭಾಗವಹಿಸಿದ್ದರು
ವರದಿ:ವೆಂಕಟೇಶ.ಹೆಚ್.ಬೂತಲದಿನ್ನಿ
Show quoted text