ಶಹಾಪುರ:ಆರ್ ಟಿ ಐ,ಸಾಮಾಜಿಕ ಕಾರ್ಯಕರ್ತ ಮತ್ತು ಜೆಡಿಎಸ್ ಮುಖಂಡ ಬಸವರಾಜ ಅರುಣಿ ಅವರನ್ನು ವಿಶ್ವನಾಥ್ ರೆಡ್ಡಿಯವರ ಮನೆಗೆ ಕರಿಸಿಕೊಂಡು ಹಲ್ಲೆ ಮಾಡಿದ್ದಾರೆ ಎಂದು ಅರುಣಿ ಹೇಳಿದರು.
ವಿಶ್ವನಾಥ್ ರೆಡ್ಡಿಯವರ ಮನೆಗೆ ನಾನು ಹೋದೆ ಅವರೇ ಸಿಹಿ ಬಾಕ್ಸ್ ತರಿಸಿದರು ಬಾಕ್ಸ್ ನಲ್ಲಿ ಇದ್ದ ಸ್ವೀಟ್ (ಪೇಡಾ) ನನ್ನ ಕೈಗೆ ಕೊಟ್ಟರು ನಾನು ಅದನ್ನು ತಿನ್ನಿಸಲು ಹೋದೆ ಅವರು ಏನೋ ವಾಸನೆ ಬರುತ್ತಿದೆ ಎಂದು ಕೇಳಿದರು ಅದಕ್ಕೆ ನನಗೆ ಏನೂ ಗೊತ್ತಿಲ್ಲ ಅಂದೆ ಏಕಾಏಕಿ ನನ್ನ ಮೇಲೆ ಮಗನೇ ಇದಕ್ಕೆ ವಿಷ ಬೆರೆಸಿದೀಯಾ ಎಂದು ಕೇಳಿದರು ನಾನು ವಿಷ ಬೆರೆಸಿಲ್ಲ
ಅಂದ್ರು ಕೇಳಲಿಲ್ಲ ವಿಶ್ವನಾಥ್ ರೆಡ್ಡಿ ಮನೆಯಲ್ಲಿ ಇದ್ದ ಜನರು ಸೇರಿ ಮನಸಿಗೆ ಬಂದಹಾಗೇ ಒಬ್ಬರು ಹೊಟ್ಟೆಗೆ,
ಬೆನ್ನಿಗೆ ಒದೆಯುತ್ತಾ ಎಲ್ಲರೂ ಸೇರಿ ಬಟ್ಟೆ ಬಿಚ್ಚಿ ಮಾನಸಿಕವಾಗಿ ದೈಹಿಕವಾಗಿ ಅರೆಬೆತ್ತಲೆ ಮಾಡಿದ್ದೂ ಅಲ್ಲದೆ ಸಾಮಾಜಿಕ ಜಾಲ ತಾಣಗಳಲ್ಲಿ ನನ್ನ ಅರೆಬೆತ್ತಲೆ ಫೋಟೋಗಳು ಹಾಕಿ ಶಹಾಪುರ ನಗರದ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ ಎಂದು ಬಸವರಾಜ ಅರುಣಿ ಹೇಳಿದರು.
ವಿಶ್ವನಾಥ್ ರೆಡ್ಡಿ ಅವರ ಹೇಳಿಕೆ
ನಮ್ಮ ಮನೆಗೆ ಬಂದು ನಿಮ್ಮಿಬ್ಬರ ಮಧ್ಯೆ ನಡೆದಿರುವ ಹಲವಾರು ಮನಸ್ತಾಪ ಮರೆತು ಸಂಧಾನ ಮಾಡಿಕೊಳ್ಳುವ ನೆಪದಲ್ಲಿ ವಿಷ ಬೆರೆಸಿದ ಸ್ವೀಟ್ (ಪೇಡಾ) ತಂದು ನನಗೆ ತಿನ್ನಿಸಿ ಕೊಲೆ ಮಾಡಲು ಮುಂದಾಗಿದ್ದ ಎಂದು ಕಾಂಗ್ರೆಸ್ ಮುಖಂಡ ವಿಶ್ವನಾಥ್ ರೆಡ್ಡಿ (ಮಾಸ್ಟರ್) ದರ್ಶನಾಪುರ ದೂರು ದಾಖಲಿಸಿದ್ದಾರೆ.ಪ್ರಭಾವಿಯಾದ ಕಾಂಗ್ರೆಸ್ ಪಕ್ಷದ ಮುಖಂಡ ದರ್ಶನಾಪುರ ಅವರು ನನ್ನ ಮೇಲೆ ಆರೋಪ ಮಾಡಿ ದೂರು ಸಲ್ಲಿಸಿದ್ದಾರೆ.ಅಷ್ಟುಕ್ಕೂ ಸ್ವೀಟ್ ತಂದುಕೊಟ್ಟವರು ಯಾರು? ಅಷ್ಟಕ್ಕೂ ಸ್ವೀಟ್ ಬಾಕ್ಸ್ ನಲ್ಲಿ ವಿಷ ಬೆರಸಲಾಗಿತ್ತೇ? ಬೆರೆಸಿದವರು ಯಾರು? ಎಂಬ ಕೂತೂಹಲಕಾರಿ ಪ್ರಶ್ನೆ ಶಹಾಪುರ ನಗರದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ
ಪ್ರತ್ಯೇಕ ಎರಡು ಪ್ರಕರಣ ದಾಖಲು
ಸಂಧಾನದ ಮೂಲಕ ಬಗೆ ಹರೆಯದಂತಾದಾಗ ಪ್ರಕರಣ ೪೮ ಗಂಟೆಗಳ ಬಳಿಕ ಶಹಾಪುರ ಪೋಲಿಸ್ ಠಾಣೆಯಲ್ಲಿ ಇಬ್ಬರೂ ಆರೋಪಿಗಳಿಂದ ಪ್ರತ್ಯೇಕ ದೂರು ದಾಖಲಿಸಿಕೊಂಡಿದ್ದಾರೆ.ಜೀವ ಬೇದರಿಕೆ ಹಾಕಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ಪ್ರಭಾವಿ ಕಾಂಗ್ರೆಸ್ ಮುಖಂಡ ವಿಶ್ವನಾಥ್ ರೆಡ್ಡಿ ದರ್ಶನಾಪುರ ಮತ್ತು ಬಿಸಿಎಂ ಇಲಾಖೆಯ ಅಧಿಕಾರಿ ಶರಣಪ್ಪ ಬಳಬಟ್ಟಿ , ಜಗನ್ನಾಥ ದರ್ಶನಾಪುರ,ಶರಣುಗೌಡ ದರ್ಶನಾಪುರ, ಶಿವಶಂಕರ್ ಸೇರಿದಂತೆ ಇನ್ನಿತರ ೮,೧೦ ಜನರ ವಿರುದ್ಧ ಕಲಂ ೧೪೩,೧೪೭,೩೨೪,೩೦೭,೫೦೪,೫೦೬ ಸಂಗಡ ೧೪೯ ಐಪಿಸಿ ಸೆಕ್ಷನ್ ಅಡಿಯಲ್ಲಿ ಆರ್ ಟಿ ಐ ಸಾಮಾಜಿಕ ಕಾರ್ಯಕರ್ತ ಬಸವರಾಜ ಅರುಣಿ ಪ್ರಕರಣ ದಾಖಲಿಸಿದ್ದಾರೆ ಮತ್ತು ಬಸವರಾಜ ಅರುಣಿ ಅವರ ವಿರುದ್ಧ ಕಲಂ ೩೦೭,೫೦೬ ಐಪಿಸಿ ಸೆಕ್ಷನ್ ಅಡಿಯಲ್ಲಿ ವಿಶ್ವನಾಥ್ ರೆಡ್ಡಿ ದರ್ಶನಾಪುರ ಸಹ ಶಹಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳಿಗೆ ಮಂಪರು ಪರೀಕ್ಷೆ?
ಸದ್ಯ ಈ ಪ್ರಕರಣ ಪೋಲಿಸರಿಗೆ ತಲೆ ನೋವಾಗಿ ಪರಿಣಮಿಸಿದೆ.ಇದಕ್ಕೆಲ್ಲಾ ಉತ್ತರ ಸಿಗಬೇಕೆಂದರೆ ಆರೋಪಿಗಳಿಗೆ ಮಂಪರು ಪರೀಕ್ಷೆಗೊಳಪಡಿಸಿ ಬೇಕು. ಅಂದಾಗ ಮಾತ್ರ ಸತ್ಯ ಹೊರಗೆ ಬರಲು ಸಾಧ್ಯವೆಂಬುದ ಕಾನೂನು ತಜ್ಞರ ಸಲಹೆಯಾಗಿದೆ. ಪೋಲಿಸ್ ಇಲಾಖೆ ಆರೋಪಿಗಳನ್ನು ಬಂಧಿಸಿ ಆದಷ್ಟು ಬೇಗನೆ ಮಂಪರು ಪರೀಕ್ಷೆಗೆ ಒಳಪಡಿಸಿ ಶಹಾಪುರ ಜನತೆಗೆ ಸತ್ಯ ತಿಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವವರೇ ಎಂದು ಕಾದು ನೋಡಬೇಕಾಗಿದೆ.
ವರದಿ-ರಾಜಶೇಖರ ಮಾಲಿ ಪಾಟೀಲ್ ಶಹಾಪುರ