ಕಾರಟಗಿ : 29. ಡಿಸೆಂಬರ್ ಗುರುವಾರದಂದು ಭಾರತ ಸೇವಾದಳ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಧ್ವಜಾರೋಹಣದ
ಮೂಲಕ ಕಾರ್ಯಕ್ರಮವು ಪ್ರಾರಂಭವಾಯಿತು.
ದ್ವಜ ಶಿಬಿರದ ಉದ್ಘಾಟನೆಯ ಮೂಲಕ ಸಪ್ತಾಹ ಕಾರ್ಯಕ್ರಮಕ್ಕೆ ಶ್ರೀ ಸುರೇಶ ಸಿಂಗನಾಳ ಅಧ್ಯಕ್ಷರು ಭಾರತ ಸೇವಾದಲ ತಾಲೂಕು ಗಂಗಾವತಿ ಸಮಿತಿ ಇವರು ಉದ್ಘಾಟಿಸಿ ಧ್ವಜ ಶಿಬಿರದ ಮೂಲಕ ಮಕ್ಕಳು ,ಶಿಕ್ಷಕರು ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರಪ್ರೇಮ ರಾಷ್ಟ್ರೀಯ ಐಕ್ಯತೆ ಬೆಳೆಸಿಕೊಳ್ಳಲು ಕರೆ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕೆಪಿಎಸ್ ಶಾಲೆಯ ಮುಖ್ಯೋಪಾಧ್ಯಾಯರಾದ ಶರಣಪ್ಪ ಸೋಮಲಾಪೂರ ರವರು ದ್ವಜಶಿಬಿರದ ಮೂಲಕ ವಿದ್ಯಾರ್ಥಿಗಳಲ್ಲಿ ರಾಷ್ಟ್ರಭಕ್ತಿ ರಾಷ್ಟ್ರಪ್ರೇಮ ಮತ್ತು ರಾಷ್ಟ್ರ ನಿಷ್ಠೆ ಬೆಳೆಸಿಕೊಳ್ಳುವ ಕುರಿತು ಮಾತನಾಡಿದರು. ಪ್ರಾಸ್ತಾವಿಕ ಮಾತುಗಳನ್ನು ಹೇಳಿದಂತಹ ಅಮರೇಶ ಮೈಲಾಪುರ, ಕಾರ್ಯದರ್ಶಿಗಳು ಭಾರತ ಸೇವಾದಳ ಸಮಿತಿ ಗಂಗಾವತಿ ಇವರು ಸೇವಾದಲ ನಡೆದು ಬಂದ ದಾರಿ ಮತ್ತು ಶಿಬಿರದ ಮಾಹಿತಿಯನ್ನು ನೀಡಿದರು. ಜಿಲ್ಲಾ ಸಂಘಟಿಕರಾದ ಬಸವರಾಜ ಗುರಿಕಾರ ಇವರು ರಾಷ್ಟ್ರಧ್ವಜ, ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆಯ ಕುರಿತು ಉಪನ್ಯಾಸವನ್ನು ಮತ್ತು ಪ್ರತ್ಯಕ್ಷತೆಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಕಾರಟಗಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸರ್ದಾರಲಿ ಹಾಗೂ ಕಾರ್ಯದರ್ಶಿ ತಿಮ್ಮಣ್ಣ ನಾಯಕ ಉಪಸ್ಥಿತರಿದ್ದರು. ತಾಲೂಕ ಅಧಿನಾಯಕ ಶಿವಾನಂದ ತಿಮ್ಮಾಪುರ ಸಮಿತಿ ಸದಸ್ಯರಾದ ಮಂಗಳ,ಸಂತೋಷ ಕುಮಾರ ಹಾಗೂ ವಿದ್ಯಾರ್ಥಿನಿಯರು ಸರ್ವಧರ್ಮ ಪ್ರಾರ್ಥನೆಯನ್ನು ನೆರವೇರಿಸಿದರು.
ಹಿರಿಯ ಶಿಕ್ಷಕರಾದ ತಿಮ್ಮಾರೆಡ್ಡಿ ಶಿಕ್ಷಕರು ರಾಷ್ಟ್ರಧ್ವಜದ ಶ್ರೇಷ್ಠತೆಯ ಕುರಿತು ಮಾತನಾಡಿದರು
ಗುರಪ್ಪಯ್ಯ ಹಿರೇಮಠ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳು
ಈ ಸಂದರ್ಭದಲ್ಲಿ ಕೆಪಿಎಸ್ ಶಾಲೆಯ ಶಿಕ್ಷಕರು ಶಕುಂತಲಾ, ದ್ರಾಕ್ಷಾಯಿಣಿ ಮತ್ತು ಶಾಲೆಯ ಎಲ್ಲಾ ಶಿಕ್ಷಕರು ಶಿಕ್ಷಕಿಯರು ಇದ್ದರು.