ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಕಮತಗಿಯ ಯುವ ಮುಖಂಡರಾದ ಹೊಳಬಸು ಶೆಟ್ಟರ ರವರು ನಿನ್ನೆ ಕಮತಗಿಯ ಹುಚ್ಚೇಶ್ವರ ಮಠಕ್ಕೆ ಭೇಟಿ ನೀಡಿ ಸಂಸ್ಥೆಯ ಪೂಜ್ಯರಾದ ಶ್ರೀ ಹೊಳೆಹುಚ್ಚೇಶ್ವರ ಮಹಾಸ್ವಾಮಿಗಳ ಪಟ್ಟಾಧಿಕಾರದ ರಜತ ಮಹೋತ್ಸವದ ನಿಮಿತ್ತ ಸಂಸ್ಥೆಯ ವತಿಯಿಂದ ಶ್ರೀ ಗಳ ಆರ್ಶಿವಾದ ಪಡೆದು ಶ್ರೀ ಗಳಿಗೆ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಶಂಕರ ಮಂಕಣಿ, ಯಲ್ಲಪ್ಪ ವಡ್ಡರ, ನಬೀ ವಕೀಲರು, ಸಿದ್ದು ಕುಂಬಾರ, ಯಲ್ಲಪ್ಪ ಮನ್ನಕೇರಿ ,ಅನಿಲ ಹುಚ್ಚೇಶ್ವರಮಠ ಉಪಸ್ಥಿತರಿದ್ದರು.
ವರದಿ : ಅಬ್ದುಲಸಾಬ ನಾಯ್ಕರ
