ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಲೋಕೋಪಯೋಗಿ ವಸತಿಗೃಹದಲ್ಲಿ
ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರಕವಿ ಜ್ಞಾನಪೀಠ ಪುರಸ್ಕೃತ
ಕುವೆಂಪುರವರ ಜಯಂತಿಗೆ ಹಿರಿಯ ಅಧಿಕಾರಿಗಳು ಗೈರಾಗುವ ಮೂಲಕ ಕಿರಿಯ ಅಧಿಕಾರಿಗಳು ಕಾಟಾಚಾರಕ್ಕೆ ಆಚರಿಸಿದ್ದಾರೆ ಗುರುವಾರ ರಾಷ್ಟ್ರಕವಿ ಕುವೆಂಪುರವರ 119ನೇ ಜಯಂತಿ ಆಚರಣೆ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮಕ್ಕೆ ತಹಸಿಲ್ದಾರ್
ಆನಂದಯ್ಯರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ
ಜರುಗಬೇಕಿತ್ತು ಆದರೆ ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ಕಾರಣ ಗ್ರೇಡ್ 2 ತಹಸಿಲ್ದಾರ್ ಧನಂಜಯ್ ರವರಿಗೆ ಉಸ್ತುವಾರಿ ನೀಡಲಾಗಿತ್ತು.ಈ ಹಿನ್ನೆಲೆ ಗುರುವಾರ 10:30 ಸಮಯಕ್ಕೆ ಕುವೆಂಪು ಜಯಂತಿ ನಿಗದಿ ಮಾಡಲಾಗಿತ್ತು ಕಾರ್ಯಕ್ರಮಕ್ಕೆ ಪಟ್ಟಣ ಪಂಚಾಯಿತಿ
ಉಪಾಧ್ಯಕ್ಷ ಗಿರೀಶ್,ಸದಸ್ಯ ಹರೀಶ್,ಸುದೇಶ್
ಮುಖಂಡರುಗಳಾದ ನಟರಾಜು, ಸಿದ್ದೇಗೌಡ ಆಗಮಿಸಿ ಅಧಿಕಾರಿಗಳ ಬರುವಿಕೆಗೆ ಕಾದು ಕುಳಿತಿದ್ದರು. 11. 20 ಸಮಯ
ಆದರೂ ಸಹ ಗ್ರೇಡ್ 2 ತಹಸಿಲ್ದಾರ್ ಹಾಜರಾಗಿರಲಿಲ್ಲ.
ಇದರಿಂದ ಅಸಮಾಧಾನಗೊಂಡ ಪಟ್ಟಣ ಪಂಚಾಯಿತಿ
ಉಪಾಧ್ಯಕ್ಷ ಗಿರೀಶ್ ರವರು ಅಧಿಕಾರಿಗಳನ್ನು ತರಾಟೆಗೆ
ತೆಗೆದುಕೊಂಡ ನಂತರ ಶಿರಸ್ತಿದಾರ್ ಶ್ರೀನಿವಾಸ್
ತರಾತುರಿಯಲ್ಲಿ ಪೂಜೆ ಮಾಡಿಸಿ ಜಯಂತಿ ಆಚರಿಸಿದರು.
ರಾಷ್ಟ್ರಕವಿ ಕುವೆಂಪುರವರಿಗೆ ಜನ್ಮದಿನದಂದು ಗೌರವನೀಡುವ
ಬದಲು ಅಗೌರವ ತೋರಿಸಿರುವುದಕ್ಕೆ ಅಧಿಕಾರಿಗಳ ವಿರುದ್ಧ
ಪ್ರಜ್ಞಾವಂತ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
-ಉಸ್ಮಾನ್ ಖಾನ್