ಬಾಗಲಕೋಟೆ/ಹುನಗುಂದ : ಬಾಗಲಕೋಟೆ ಜಿಲ್ಲಾ ಆಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಮುಧೋಳದ ರನ್ನ ಪ್ರತಿಷ್ಠಾನ ಇದೇ ತಿಂಗಳ ದಿ. 22, 23 ಮತ್ತು 24ರಂದು 2025 ರಂದು ಆಯೋಜಿಸಿರುವ ಕವಿ ಚಕ್ರವರ್ತಿ ರನ್ನ ಕ್ರೀಡಾಂಗಣ ಮುಧೋಳದಲ್ಲಿ ಜರುಗಲಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಾಜ್ಯದ ರಾಜ್ಯಧಾನಿ ಬೆಂಗಳೂರಿನಿಂದ ಅಲ್ಲಿಯ ವಿಧಾನಸೌಧದ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ದಿನಾಂಕ 20.02.2025 ರಂದು ಬುಧವಾರ ದಿವಸ ಹುನಗುಂದ ಪಟ್ಟಣಕ್ಕೆ ಆಗಮಿಸಿತು.
ಈ ಸಂದರ್ಭದಲ್ಲಿ ನಿಂಗಪ್ಪ ಬಿರಾದಾರ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಸ್ ಕಟ್ಟಿಮನಿ ಪುರಸಭೆ ಅಧ್ಯಕ್ಷ ಶ್ರೀಮತಿ ಭಾಗ್ಯಶ್ರೀ ಬಸವರಾಜ ರೇವಡಿ ಉಪಾಧ್ಯಕ್ಷೆ ರಾಜಮ್ಮ ಹನುಮಪ್ಪ ಬದಾಮಿ ಕಸಪಕಾರದೇಶಿ ಶಿಕ್ಷಕ ಲಿಂಗರಾಜ ಗದ್ದನಕೇರಿ ಕಂದಾಯ ಇಲಾಖೆಯ ಶಿರಸದಾರ್ ಶ್ರವಣ್ ಕುಮಾರ ಮುಂಡೆವಾಡಿ ಕಂದಾಯ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಸೋಮಲಿಂಗಪ್ಪ ಸಂಗಪ್ಪ ಅಂತರರದಾನಿ, ಸೇರಿದಂತೆ ಪುರಸಭೆ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು ಮಿನಿ ವಿಧಾನಸೌಧದ ಬಳಿ ಆಗಮಿಸಿದ ಸಂದರ್ಭದಲ್ಲಿ ಸ್ವಾಗಸಿದರು.
ರಥಯಾತ್ರೆ ಜೊತೆಯಲ್ಲಿ ಬಂದ ಕಲಾವಿದ ಡಿ.ಕೆ ರವಿ ಮಾತನಾಡಿ ಬೆಂಗಳೂರಿನಿಂದ ಪ್ರಾರಂಭಗೊಂಡ ಈ ರಥವು ವಿವಿಧ ವಿವಿಧ ಜಿಲ್ಲೆಗಳಲ್ಲಿ ಅಲ್ಲಿಯ ಕಂದಾಯ ಇಲಾಖೆ ಹಾಗೂ ಪುರಸಭೆ ನಗರಸಭೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸ್ವಾಗತಿಸುವೆ ಎಂದರಲ್ಲದೆ ಇಂದು ಹುನಗುಂದ ಪಟ್ಟಣಕ್ಕೆ ತಲುಪಿದೆ ಎಂದರು ದಿನಾಂಕ 21ರಂದು ಮುಧೋಳವನ್ನು ತಲುಪಲಿದೆ ಎಂದು ಅವರು ತಿಳಿಸಿದರು ಪುರಸಭೆ ಅಧ್ಯಕ್ಷರು ಮತ್ತು ಇತರ ಗಣ್ಯರು ಹಾಗೂ ಸಿಬ್ಬಂದಿಗಳು,
ಹುನುಗುಂದ ಪಟ್ಟಣಕ್ಕೆ ರಥ ಆಗಮಿಸಿದ ಸಂದರ್ಭದಲ್ಲಿ ಸ್ವಾಗತ ಕೋರುವ ಕಾರ್ಯಕ್ರಮದಲ್ಲಿ ಹುನಗುಂದದ ತಹಶೀಲ್ದಾರ ನಿಂಗಪ್ಪ ಬಿರಾದಾರ ಪುರಸಭೆ ಅಧ್ಯಕ್ಷ ಭಾಗ್ಯಶ್ರೀ ಬಸವರಾಜ ಬಿರಾದಾರ, ಇತರ ಗಣ್ಯರು ಹಾಗೂ ಸಿಬ್ಬಂದಿಗಳು ಗದೆಯನ್ನು ಎತ್ತುವುದರ ಮೂಲಕ ಸಾರ್ವಜನಿಕರ ಗಮನ ಸೆಳೆದರು.
