ದೆಹಲಿ : ಭಾರತೀಯ ದಿವ್ಯಾಂಗ ಎಂಪೋವೆರ್ಮೆಂಟ್ ಅಸೋಸಿಯೇಷನ್ (ನೋಂದಾಯಿತ) ಇದರ ಸ್ಥಾಪಕ ಅಧ್ಯಕ್ಷರಾದ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರನ್ನು ದಿವ್ಯಾoಗ ವ್ಯಕ್ತಿಗಳ ಬಗೆಗಿನ ಕಾಳಜಿಗಾಗಿ ಹಾಗೂ ಅತ್ಯುತ್ತಮ ಸೇವೆಗಳಿಗಾಗಿ “2025 ರ ಪ್ರತಿಷ್ಠಿತ ಸಾಧನೆ ಶ್ರೇಷ್ಠತೆ” ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ನವದೆಹಲಿಯ ಪ್ರಮುಖ ಪ್ರಕಾಶಕರಿಂದ ಇದೀಗ ಮಾಹಿತಿ ಬಂದಿದೆ ಎಂದು ಪ್ರಕಟಣೆ ತಿಳಿಸಿದೆ.
