ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ ದೇವಸ್ಥಾನದ ಹುಂಡಿಯಲ್ಲಿ 1.94 ಕೋಟಿ ರೂ. ಸಂಗ್ರಹ
ಹನೂರು ತಾಲೂಕಿನ ಪ್ರಸಿದ್ದ ಧಾರ್ಮಿಕ ಪುಣ್ಯ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟ ಮಾದಪ್ಪನ ದೇವಾಲಯದಲ್ಲಿ ಗುರುವಾರ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು 28 ದಿನಗಳ ಅಲ್ಪ ಅವಧಿಯಲ್ಲಿ 1.94 ಕೋಟಿ ರೂ.ಗಳ ಸಂಗ್ರಹಣೆ ಮೂಲಕ ಮತ್ತೆ ಮಾದಪ್ಪ ಕೋಟಿ ಒಡೆಯನಾಗಿದ್ದಾನೆ.
ಮಾದಪ್ಪ ಕೋಟಿ ಒಡೆಯನಾದರೂ ಕ್ಷೇತ್ರದ ಶ್ರೀ ಸಾಮಾನ್ಯನ ಕಷ್ಟಕರ ಬದುಕು ಮುಖ್ಯ ಮಂತ್ರಿಗಳು ಸಚಿವ ಸಂಪುಟ ಸಭೆಗೆ ಬಂದಾಗ ಕ್ಷೇತ್ರದ ವಿದ್ಯಾವಂತ ಯುವಕರಿಗೆ ಕ್ಷೇತ್ರದಲ್ಲೇ ಕೆಲಸ ಸಿಗುವ ಹಾಗೆ ಮಾಡುವ ದೃಷ್ಟಿ ಇಂದ ನಮ್ಮ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿ ಕಾರ್ಖಾನೆಗಳು ನಿರ್ಮಿಸಿ ಕ್ಷೇತ್ರದ ಯುವಕರು ಕ್ಷೇತ್ರದಲ್ಲೇ ದುಡಿದು ತಿನ್ನುವ ಹಾಗೆ ಆಗಬೇಕು ಇದರಿಂದ ಯುವಕರು ವಲಸೆ ಹೋಗುವುದು ತಪ್ಪುತ್ತದೆ ಹಾಗೆಯೇ ಸ್ವಾಭಿಮಾನದ ಬದುಕು ಯುವಕರು ಕಂಡುಕೊಳ್ಳುವಂತಾಗುತ್ತಾರೆ ಎಂದು ಸಾರ್ವಜನಿಕರ ಮನವಿ.
ಶ್ರೀ ಸಾಲೂರು ಬೃಹನ್ಮಠಾಧ್ಯಕ್ಷ ಶ್ರೀ
ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು ದಿವ್ಯ ಸಾನ್ನಿಧ್ಯದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ಗುರುವಾರ ಬೆಳಿಗ್ಗೆ ಮಲೆ ಮಾದಪ್ಪನ ಬೆಟ್ಟ ಖಾಸಗಿ ಬಸ್ ನಿಲ್ದಾಣದ ವಾಣಿಜ್ಯ ಸಂಕಿರ್ಣದಲ್ಲಿ ಸಿಸಿ ಟಿ.ವಿ. ಕಣ್ಗಾವಲಿನಲ್ಲಿ ಜರುಗಿತು.
28 ದಿನಗಳಲ್ಲಿ ಒಟ್ಟು ಮೊತ್ತ 1,94,49,243 ರೂ. (ಹುಂಡಿ ಮತ್ತು ಇ-ಹುಂಡಿ ಸೇರಿ) ಹಾಗೂ ಚಿನ್ನ 63.6 ಗ್ರಾಂ, ಬೆಳ್ಳಿ 1.5 ಕೆ.ಜಿ ಹುಂಡಿಯಲ್ಲಿ ದೊರೆತಿದೆ. ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಜಿ.ಎಲ್.ಚಂದ್ರಶೇಖರ್, ಲೆಕ್ಕಾಧೀಕ್ಷಕರಾದ ಗುರುಮಲ್ಲಯ್ಯ, ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾದ ಗಂಗನ ತಿಮ್ಮಯ್ಯ, ಭಾಗ್ಯಮ್ಮ, ಮಹದೇವಪ್ಪ, ಮರಿಸ್ವಾಮಿ ಹಾಗೂ ಚಾಮರಾಜನಗರ ಜಿಲ್ಲಾಡಳಿತ ಕಚೇರಿಯ ಮಧುಕರ್, ಪ್ರಾಧಿಕಾರದ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಕೊಳ್ಳೇಗಾಲದ ಬ್ಯಾಂಕ್ ಆಫ್ ಬರೋಡಾ ಮುಖ್ಯ ವ್ಯವಸ್ಥಾಪಕರು, ಸಿಬ್ಬಂದಿ ಇದ್ದರು.
ವರದಿ : ಉಸ್ಮಾನ್ ಖಾನ್
