
ಕಲ್ಯಾಣ ಕರ್ನಾಟಕ (ಹೈದ್ರಾಬಾದ ಕರ್ನಾಟಕ) ದಲ್ಲಿ ಆಳಿ ಹೋದ ಸಂಸ್ಥಾನಗಳ ಅವಶೇಷಗಳನ್ನೊಳಗೊಂಡ ವಸ್ತು ಸಂಗ್ರಹಾಲಯ ಬೀದರ್ ಜಿಲ್ಲೆಯ ‘ಬಸವಕಲ್ಯಾಣ’ದಲ್ಲಿದೆ. ಬಸವಕಲ್ಯಾಣ ಬೀದರ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ ಬೀದರದಿಂದ ೮೫.ಕಿ.ಮಿ. ದೂರದಲ್ಲಿದ್ದು ಗುಲಬರ್ಗಾದಿಂದ ಉತ್ತರಕ್ಕೆ ೬೫.ಕಿ.ಮೀ. ದೂರದಲ್ಲಿ ಪೂರ್ವ – ಪಶ್ಚಿಮಕ್ಕೆ ೬೫ನೇ ರಾಷ್ಟ್ರೀಯ ಹೆದ್ದಾರಿ ಬರುತ್ತದೆ. ಇಲ್ಲಿಂದ ಪಶ್ಚಿಮದಲ್ಲಿದ್ದ ಸಸ್ತಾಪೂರ ಬಂಗ್ಲಾ ಎಂಬ ಗ್ರಾಮದಿಂದ ಉತ್ತರಕ್ಕೆ ೩ ಕಿ.ಮೀ. ಒಳಗೆ ಬಂದರೆ, ರಸ್ತೆ ಬಲಭಾಗಕ್ಕೆ ಬೃಹತ್ ಆಕಾರದ ಬಸವಣ್ಣ ಕುಳಿತಿರುವ ೧೦೮ ಅಡಿ ಇರುವ ಮೂರ್ತಿ ಕಾಣುತ್ತದೆ. ಎಡಭಾಗದ ಅಂದರೆ ಪಶ್ಚಿಮದಕಡೆ ಇರುವ ರಸ್ತೆ ಮುಖಾಂತರ ಬಂದರೆ ಎತ್ತರದ ಬೆಟ್ಟ ಏರಿ ಬಂದರೆ ನೂತನ ಅನುಭವ ಮಂಟಪ ಹಾಗೇ ಸ್ವಲ್ಪ ಬೆಟ್ಟದ ಇಳಿಜಾರಿನಲ್ಲಿ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಗವಿಮಠ ಇದೆ. ಇದು ಬಸವಕಲ್ಯಾಣ ತಾಲೂಕಿನ ತ್ರಿಪೂರಾಂತ ಗ್ರಾಮದಲ್ಲಿದೆ ಈಗ ಈ ಗ್ರಾಮ ಬೆಳೆದು ತಾಲೂಕಿನೊಳಗೆ ಸೇರಿಕೊಂಡಿದೆ.

ಈ ಪ್ರದೇಶಕ್ಕೆ ‘ಹೈದ್ರಾಬಾದ ಕರ್ನಾಟಕ’ ಎಂದು ಕರೆಯುತ್ತಿದ್ದರು. ಈ ಭಾಗಕ್ಕೆ ‘ಕಲ್ಯಾಣ ಕರ್ನಾಟಕ’ ಕರೆಯಬೇಕೆಂದು ಎಷ್ಟೋ ವರ್ಷಗಳ ಕಾಲ ಹೋರಾಡಿದ ಹಲವಾರು ಮಹನೀಯರ ಒತ್ತಾಸೆಯ ಮೇರೆಗೆ ಸನ್ಮಾನ್ಯ ಶ್ರೀ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ೨೦೧೯ ಸೆಪ್ಟೆಂಬರ್ ೧೭ರಂದು ಈ ಪ್ರದೇಶಕ್ಕೆ “ಕಲ್ಯಾಣ ಕರ್ನಾಟಕ’ವೆಂದು ಕರೆಯಬೇಕೆಂದು ಅಧಿಕೃತವಾಗಿ ಘೋಷಣೆ ಮಾಡಿದರು.
ಅಂದಿನಿಂದ ‘ಹೈದ್ರಾಬಾದ ಕರ್ನಾಟಕ’ ಬದಲಾಗಿ ‘ಕಲ್ಯಾಣ ಕರ್ನಾಟಕ’ ಎಂದು ಕರೆಯತೊಡಗಿದರು. ಕೆಲವು ಶಿಲ್ಪಕಲೆಗಳು ಮತ್ತು ವಿವಿಧ ಬಗೆಯ ವಸ್ತುಗಳು ಬಸವಕಲ್ಯಾಣ ವಸ್ತು ಸಂಗ್ರಹಾಲಯದಲ್ಲಿ ತಂದಿಡಲಾಗಿದೆ. ಇಡೀ ಬಸವಕಲ್ಯಾಣ ಹಾಗೂ ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಶಿವಶರಣರ ಸ್ಮಾರಕಗಳಿವೆ. ಅವುಗಳಲ್ಲಿನ ಒಂದನ್ನು ಸ್ಮಾರಕ ಆಯ್ದುಕೊಂಡು ಪರಿಚಯಸಿದ್ದೇನೆ.
ಅದುವೇ “ಶ್ರೀ ಗುರು ಘನಲಿಂಗ ರುದ್ರಮುನಿ ಗವಿಮಠ, ತ್ರಿಪೂರಾಂತ-ಬಸವಕಲ್ಯಾಣ
ಶ್ರೀ ಷ|| ಬ್ರ|| ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಗವಿಮಠ ಬಸವಕಲ್ಯಾಣ ಕಲ್ಯಾಣ ಕರ್ನಾಟಕದ ಬೀದರ ಜಿಲ್ಲೆಯ ಬಸವಕಲ್ಯಾಣ ನಾಡಿನ ಸಂತ , ನಡೆದಾಡುವ ದೇವರು , ಅತ್ಯಂತ ಸರಳ ಜೀವಿಗಳು ,ಸಿದ್ದಾಂತ ಸಿಖಾಮಣಿ ಮತ್ತು ವಚನ ಸಾಹಿತ್ಯ ಭೋದನೆ ಗೈಯುತ್ತಿರುವ ಬಸವಕಲ್ಯಾಣ ಗವಿಮಠದ ಪೀಠಾಧಿಪತಿಗಳಾದ ಶಿವಶರಣರ ದೀಕ್ಷಾ ಸ್ಥಳ ಶ್ರೇಷ್ಠ ಶ್ರೀ ಪ್ರಶಸ್ತಿ ಪುರಸ್ಕೃತರು ಪರಮ ಪೂಜ್ಯ ಶ್ರೀ ಷ|| ಬ್ರ|| ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ ಪರಿಚಯ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ತ್ರಿಪುರಾಂತ ಗ್ರಾಮದ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಗವಿಮಠ, ಗುರುಸ್ಥಲ ಮಠವಾಗಿದ್ದು ಅದರಲ್ಲಿ ಗವಿಮಠವು ಪುತ್ರವರ್ಗದ ಮಠವಾಗಿದ್ದು ರಂಭಾಪುರಿ ಪೀಠದ ಶಾಖಾ ಮಠವಾಗಿದೆ. ಈ ಮಠಕ್ಕೆ ಪೂಜ್ಯಶ್ರೀ ಷ.ಬ್ರ. ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರನ್ನು ಚಿಕ್ಕ ವಯಸ್ಸಿನಲ್ಲಿಯೇ ಪೀಠಾಧಿಪತಿಯಾಗಿ ನೇಮಿಸಲಾಯಿತು. ಇವರು ಭಕ್ತಾದಿಗಳಿಗೆ ಒಳ್ಳೆಯ ಮಾರ್ಗದರ್ಶನ ನೀಡುತ್ತಾ ವಿವಿಧ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಬರುತ್ತಿದ್ದಾರೆ.
ಇವರು ೧೯೮೬ ಸೆಪ್ಟೆಂಬರ್ ೨೮ ರಂದು ಚೆನ್ನಮ್ಮ, ರುದ್ರಮುನಿ ದಂಪತಿಗಳ ಉದರದಲ್ಲಿ ಜನಿಸಿದರು. ಇವರ ಜನ್ಮ ನಾಮ ಇವರಿಗೆ ದೀಪಯ್ಯ ಎಂದು ನಾಮಕರಣ ಮಾಡಲಾಯಿತು. ದೀಪಯ್ಯ ಅವರ ಪ್ರಾಥಮಿಕ ಶಿಕ್ಷಣ ಕಲಬುರಗಿಯ ಮಹಾಜನ ಮಠದಲ್ಲಿ ಮುಗಿಸಿ, ಪ್ರೌಢ ಶಿಕ್ಷಣ ” ಮಾಯಾ ಬಾಲ ವಿದ್ಯಾ ಮಂದಿರ” ಕಲಬುರಗಿಯಲ್ಲಿ ಮುಗಿಸಿದರು. ಘನಲಿಂಗ ರುದ್ರಮುನಿ ಗವಿ ಮಠಕ್ಕೆ “ ಮರಿದೇವ ಗುಡ್ಡ ” ಎಂತಲೂ ಕರೆಯುತ್ತಾರೆ.ಇದರಿಂದ ಬಹುಶಃ ಮಠದ ಪರಂಪರೆಯಲ್ಲಿ ಮರಿದೇವರೆಂಬುವರು ಇದ್ದಿರಬೇಕೆಂದು ತಿಳಿಯುತ್ತದೆ. ಆದ್ದರಿಂದ ದಿ. ೧೧-೦೯-೧೯೯೭ರಂದು ಸಾವಿರಾರು ಜನಸ್ತೋಮದಲ್ಲಿ ಶ್ರೀ ಮದ್ ರಂಭಾಪುರಿ, ಶ್ರೀಮದ್ ಕೇದಾರ ಜಗದ್ಗುರುಗಳ ನೇತೃತ್ವದಲ್ಲಿ, “ದೀಪಯ್ಯ” ಅವರಿಗೆ ಶ್ರೀ ಪಂಚಾಕ್ಷರಿ ಮರಿದೇವರೆಂದು ೧೧ನೇ ವಯಸ್ಸಿಗೆ ಮರು ನಾಮಕರಣ ಮಾಡಲಾಯಿತು. ಮುಂದೆ ರಂಭಾಪುರಿ ಪೀಠದಲ್ಲಿ ವೈದಿಕ ಅಭ್ಯಾಸ ಮಾಡಿದರು ತದ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹೊನ್ನಳ್ಳಿಯ ಹಿರೇಕಲ್ಮಠದಲ್ಲಿ ಪಿ.ಯು.ಸಿ ಯಲ್ಲಿ ಪ್ರವೇಶ ಪಡೆದು, ರಾಣೆಬೆನ್ನೂರಿನ ವಾಗೀಶ
ಪಂಡಿತಾರಾಧ್ಯ ಧಾರ್ಮಿಕ ಪಾಠ ಶಾಲೆಯಲ್ಲಿ ಜೋತಿಷ್ಯ ಶಾಸ್ತ್ರ ಮಾಡಿ, ಮೈಸೂರಿನ ಜೆ.ಎಸ್.ಎಸ್. ಮಹಾವಿದ್ಯಾಲಯದಲ್ಲಿ ಬಿ.ಎ. ಪದವಿ ಪಡೆದಿರುತ್ತಾರೆ. ಹಾಗೆ ಮೈಸೂರಿನಲ್ಲಿಯೇ ಸಂಸ್ಕೃತದಲ್ಲಿ ಸಾಹಿತ್ಯ ಅಭ್ಯಾಸ ಮಾಡಿದ್ದಾರೆ. ಹೀಗಾಗಿ ಶ್ರೀಗಳು ಶ್ರೀ ಭಾಷಾ ಜ್ಞಾನವನ್ನುಳ್ಳುವರಾಗಿದ್ದಾರೆ ಒಮ್ಮೆ ಜಗದ್ಗುರುಗಳೇ ಕರೆ ಮಾಡಿ ಬರುವ ಸೆಪ್ಟೆಂಬರ್ ೨೮ರಂದು ನಾನು ಬರುವೆ ಎಂದು ಸೂಚಿಸಿದರು. ದಿನಾಂಕ ಪಂಚಾಕ್ಷರಿ ಮರಿದೇವರು (ದೀಪಯ್ಯ) ನವರು ಹುಟ್ಟಿರುವ ದಿನಾಂಕವನ್ನೇ ನೇಮಿಸಿರುವುದು ತಿಳಿದು ಎಲ್ಲರೂ ಆಶ್ಚರ್ಯಗೊಂಡರು. ಜನ್ಮದಿನದಂದೇ ಪಟ್ಟಾಭಿಷೇಕ ಅಂದರೆ ಅದು ಅತೀ ಸಂತೋಷದ ವಿಷಯ
ಬೇಡಿದರೂ ದೊರಕದ ಭಾಗ್ಯ.
ಪೂಜ್ಯ ಶ್ರೀ ಷ.ಬ್ರ. ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಹುಟ್ಟಿದ್ದು ೧೯೮೬ ಸೆಪ್ಟೆಂಬರ್ ೨೮ ರಂದು ಪಟ್ಟಾಧಿಕಾರವಾದದ್ದು ೨೦೦೫ ಸೆಪ್ಟೆಂಬರ್ ೨೮ ರಂದು. ಇವರು ಧರ್ಮ ಚಿಂತಕರು, ಲಿಂಗ ಪೂಜೆ ನಿಷ್ಠರು, ಯೋಗಾಸನ, ಪ್ರಾರ್ಥನಾ, ಜಪ-ತಪ, ಅನುಷ್ಠಾನಗಳ ಇವರ ದಿನ ನಿತ್ಯದ ಚಟುವಟಿಕೆಗಳಾಗಿವೆ. ಪಟ್ಟಾಧಿಕಾರದ ನಂತರ ಗವಿಮಠದಲ್ಲಿ ೧೧ ದಿವಸ ಗವಿಮಠದಲ್ಲಿ ಅನುಷ್ಠಾನಕ್ಕೆ ಕುಳಿತಿರುವ ಅಭಿನವ ಶ್ರೀಗಳು ಹಾಗೂ ೨೦೧೪ ಶ್ರಾವಣ ಮಾಸದಲ್ಲಿ ೪೧ ದಿನಗಳ ಪರ್ಯಂತರ ಮೌನಾ ಅನುಷ್ಠಾನ ಗವಿಮಠದಲ್ಲಿ ಮಾಡಿದ್ದಾರೆ. ಪ್ರವಚನ, ಆಶೀರ್ವಚನ, ಧರ್ಮಸಭೆ, ಬಿನ್ನಾಹ, ಗ್ರಹಪ್ರವೇಶ, ಮದುವೆ ಸಮಾರಂಭ, ಶೈಕ್ಷಣಿಕ ಸಂಸ್ಕೃತಿಕ ಸಾಮಾಜಿಕ ವಿವಿಧ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಮುಂತಾದವುಗಳಲ್ಲಿ ಅವರ ವಾಕ್ ಚಾತುರ್ಯದಿಂದ ಸಂದರ್ಭಕ್ಕೆ ತಕ್ಕಂತೆ ಅದ್ಭುತ ಮಾತುಗಳಾಡುತ್ತಾ ಜನರ ಮನದಲ್ಲಿ ಮಹತ್ವದ ಪೂಜ್ಯ ಭಾವಗಳನ್ನು ಬಿತ್ತಿದ್ದಾರೆ, ಪ್ರತಿ ವರ್ಷ ಪಾಲ್ಗುಣ ಮಾಸ ಶುದ್ಧ ತ್ರಯೋದಶಿಯಂದು ಜಗದ್ಗುರು ರೇಣುಕಾಚಾರ್ಯ ಜಯಂತಿ ಮಹೋತ್ಸವ ಮತ್ತು ಚೈತ್ರ ಮಾಸ ಶುದ್ಧ ತ್ರಯೋದಶಿಯಂದು ಜಗದ್ಗುರು ಘನಲಿಂಗ ರುದ್ರಮುನಿ ಜಯಂತಿ ಮಹೋತ್ಸವ ಬಹಳ ವಿಜೃಂಬಣೆಯಿಂದ ನಡೆಯುತ್ತದೆ. ಈ ದಿನ ಹಲವಾರು ವೈಚಾರಿಕ, ಧಾರ್ಮಿಕ ಗೋಷ್ಠಿಗಳು ನಡೆಯುತ್ತವೆ. ಈ ಅದ್ಭುತವಾದ ಸಮಾರಂಭಗಳಲ್ಲಿ ಪ್ರತಿ ವರ್ಷ “ಅಭಿನವ ಘನಲಿಂಗ ಶ್ರೀ” ಪ್ರಶಸ್ತಿ ನೀಡಿ ಗೌರವಿಸುತ್ತಾರೆ ಮಠದ ಪಕ್ಕದಲ್ಲಿಯೇ ಪತ್ರಿವನದಲಿ ಹಲವಾರು ತರಹದ ಗಿಡಮೂಲಿಕೆಗಳಿವೆ.
೧೨ನೇ ಶತಮಾನದ ರೇವಣಸಿದ್ದರು ಮತ್ತು ಇವರ ಮಗ ರುದ್ರಮುನಿ ಮಹಾನ ಪವಾಡ ಪುರುಷರು. ಅನಾರೋಗ್ಯದಿಂದ ಬಳಲುತ್ತಿರುವರಿಗೆ ಗಿಡಮೂಲಿಕೆಗಳಿಂದ ಹಲವಾರು ಜನರಿಗೆ ಪವಾಡಗಳಿಂದ ಅವರನ್ನು ಗುಣಮುಖ ಮಾಡಿದ್ದಾರೆ. ಅವರಂತೆ ಇಂದಿನ ನೂತನವಾಗಿ ನಾಮಕರಣ ಮಾಡಲಾದ ಶ್ರೀ ಷ.ಬ್ರ. ಪೂಜ್ಯಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರಿಗೆ ಅವರಂತೆ ಇವರಿಗೂ ಕೂಡಾ ಇನ್ನಷ್ಟು ಪವಾಡಗಳು ಮಾಡುವ ದೈವಶಕ್ತಿ ಕೊಡಲೆಂದು ಆ ದೇವರಲ್ಲಿ ಸಕಲ ಸದ್ಭಕ್ತರ ನಮ್ಮ ನಿಮ್ಮೆಲ್ಲರ ವತಿಯಿಂದ ಪ್ರಾರ್ಥನೆ. ಪೂಜ್ಯರ ಇಂಥಹ ಹತ್ತು ಹಲವು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಕಲ್ಯಾಣ ಕಾಯಕ ಸಾಧನೆಯನ್ನು ಗುರುತಿಸಿ, ಬೆಂಗಳೂರಿನ ಆಧ್ಯಾತ್ಮ ವಿಶ್ವವಿದ್ಯಾಲಯವು ದಿ : ೨೫/೦೨/೨೦೨೧ ಗುರುವಾರದಂದು ಪೂಜ್ಯ ಶ್ರೀ ಷ. ಬ್ರ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಲಾಗಿದೆ.
ಪೂಜ್ಯಶ್ರೀ ಷ.ಬ್ರಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರಿಗೆ ಸಂದ ಗೌರವ ಪ್ರಶಸ್ತಿಗಳು
೧) ಶ್ರೀಮದ್ ರಂಭಾಪುರಿ ಪೀಠದವತಿಯಿಂದ ಶ್ರೀಶ್ರೀಶ್ರೀ ೧೦೦೮ ಜಗದ್ಗುರು ಡಾ.ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಬಾಳೆಹೊನ್ನೂರು ಇವರಿಂದ ಪೂಜ್ಯಶ್ರೀಗಳಿಗೆ “ಶಿವಶರಣರದೀಕ್ಷಾಸ್ಥಳ ಶ್ರೇಷ್ಠ ಶ್ರೀ’ ಪ್ರಶಸ್ತಿ – ೨೯-೦೩-೨೦೧೩
೨) “ಕರ್ನಾಟಕ ದರ್ಶನ’ ಮಾಸ ಪತ್ರಿಕೆ ಹುಬ್ಬಳ್ಳಿ ಅವರಿಂದ ರಾಷ್ಟ್ರೀಯ ವಿಶ್ವಜ್ಞಾನಿ’ ಪ್ರಶಸ್ತಿ – ೩೧-೧೨-೨೦೧೮
೩) ಬೆಂಗಳೂರಿನ ಆಧ್ಯಾತ್ಮ ವಿಶ್ವವಿದ್ಯಾಲಯ ಅವರಿಂದ “ಗೌರವ ಡಾಕ್ಟರೇಟ್” – ೨೫/೦೨/೨೦೨೧ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಗವಿಮಠದ ವಿಶೇಷತೆ ಪವಿತ್ರ ಪತ್ರಿವನದ ಬಗ್ಗೆ ಕವಿಗಾರನ ನುಡಿ
ಶ್ರೀ ಘನಲಿಂಗ ಅಜ್ಜನ ಆಲಯದೊಳಗೊಂದು ಕೇಳಿ, ಸಣ್ಣ ಸಣ್ಣ ಸಸಿಗಳು ಹೇಳಿದ ಮಾತೊಂದು
ಪವಿತ್ರ ಪತ್ರಿವನದ ಸಸಿಗಳ ನೊವೊಂದು ||
ಇಂದು ನಾವು ಸಸಿಗಳು ನಾಳೆ ನಾವೇ ಹೆಮ್ಮೆರಗಳು, ಇಂದು ನಮ್ಮಯ ಪೋಷಣೆ ನಿಮ್ಮ ಹೊಣೆ
ಮಾಡುವೆವು ನಾವು ಪರಿಸರ ಸಂರಕ್ಷಣೆ ||
ಹಕ್ಕಿ-ಪಕ್ಷಿಗಳಿಗೆ ಆಶ್ರಯದಾತರು ನಾವು , ದೇಹದ ಆರೋಗ್ಯಕ್ಕೆ ರಾಮ ಬಾಣವು ನಾವು
ಸೊಗಸು-ಸುಗಂಧಿ ಸೆವಿಸದೆ ಇರಕೂಡದ ನೀವು ||
ಕಲ್ಲು ಹೊಡೆದರೆ ಹಣ್ಣು ಕೊಡುವೆವು, ಮುಪ್ಪಾದರೆ ಮನೆಯ ಜಂತಿಯಾಗುವೆವು
ದಯಮಾಡಿ ಬೆಳೆಸಿರಿ ನನ್ನನು ನಿಮ್ಮ ಅನುಕುಲಕ್ಕೆ ಕೆಡಿಯದಿರಿ ನನನ್ನು ॥
ಶಿವನ ಪ್ರಿಯಕರು ನಾವೆಲ್ಲಾ , ನಿಮ್ಮ ಹಣೆಯ ವಿಭೂತಿ ಭಸ್ಮ ನಾವೆಲ್ಲಾ
ನಿಮ್ಮೊಂದಿಗೆ ನಾವು ಯಾವಾಗಲೂ ಇರುವೆವು ಕಡಿಯದಿರಿ ನಮ್ಮೆಲ್ಲಾ ||
ಅಜ್ಜನ ಆಲಯದಲ್ಲಿ ಮೌನ ಮುರಿದು ಮಾತು ಹೇಳಿದೆ, ನಿಮ್ಮನು ವಿನಂತಿಸುವೆ ಕಾಯಿರಿ ಕೆಲ ಕಾಲ ನಮ್ಮನ
ನಮ್ಮ ಸಂರಕ್ಷಣೆಯೆ ನಿಮ್ಮ ಕಾಯಕ ದಯಮಾಡಿ ಬೆಳೆಸಿರಿ ನನ್ನನು ನಿಮ್ಮ ಅನುಕೂಲಕ್ಕೆ ಕಡಿಯದಿರಿ ನನನ್ನು||
ಘನಲಿಂಗಜ್ಜನ ಆಸ್ಥಾನದ ಸೇವಕರು ನಾವೆಲ್ಲಾ ದಯಮಾಡಿ ಕಾಪಾಡಿಕೊಳ್ಳಿ ನಮ್ಮನ ಪವಿತ್ರ ಬಿಲ್ವ ಪತ್ರಿಗಳು ನಾವೆಲ್ಲಾ ||
ಬಸವಕಲ್ಯಾಣ ಗವಿಮಠ ಅಂದರೆ ಅದು ಒಂದು ಪವಿತ್ರ ಬಿಲ್ವಪತ್ರೆಯ ತಾಣವಾಗಿದೆ ೧೨ನೇ ಶತಮಾನದ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯರು ಮತ್ತು ರೇವಣಸಿದ್ದೇಶ್ವರರು ಮತ್ತು ಅನೇಕ ಬಸವಾದಿ ಶರಣರು ಪೂಜೆಗೈದ ಧಾರ್ಮಿಕ ಸ್ಥಳವಿದು ಈ ಸ್ಥಾನದ ಪವಿತ್ರತೆಯು ಪತ್ರಿವನದಿಂದ ಕಂಗೊಳಿಸುತ್ತೆ ಈ ಕವನದ ಮೂಲಕ ಪವಿತ್ರ ಪತ್ರಿ ಗಿಡಗಳು ಸಸಿಗಳು ಮರಗಳು ಘನಲಿಂಗ ಶಿವಾಚಾರ್ಯರ ಕರ್ತ ಗದ್ದುಗೆ ತಮ್ಮ ನೋವನ್ನು ಹೇಳಿಕೊಳ್ಳುತ್ತಿದ್ದಾವೆ.
ಘನಲಿಂಗ ಶಿವಾಚಾರ್ಯರ ತಾಣಕ್ಕೆ ಬಂದಿರುವಂತಹ ಅನೇಕ ಭಕ್ತರು ಜನಗಳು ಬಂದು ಪತ್ರಿ ಗಿಡಗಳ ರೆಂಬೆ ಕೊಂಬೆ ಕಡೆದು ಬಿಸಾಕುತ್ತಿರುವುದು ಅದನ್ನು ನೋಡಲಾಗದೆ ಕವಿಯು ಈ ಕವನದ ಮೂಲಕ ಪತ್ರಿವನದ ಬಗ್ಗೆ ಬರೆದಿರುವುದಿದ್ದಾರೆ. ಬಂದಿರುವ ಭಕ್ತರು ಭಕ್ತರಿಗೆ ತಿಳಿ ಹೇಳಿದರೂ ಭಕ್ತರು ಮನಸ್ಸಿಗೆ ಬಂದಂತೆ ಪತ್ರಿವನವನ್ನು ಹಾಳು ಮಾಡುತ್ತಿರುವುದು ಕಂಡು ಈ ಒಂದು ಸಾಹಿತ್ಯ ನೆನಪಾಗಿರುವುದು ಸಣ್ಣ ಸಣ್ಣ ಸಸಿಗಳು ಕಡಿದು ಬಿಸಾಕಿರುವುದು ಶಿವನ ಪೂಜೆಗೆಂದು ಬಿಲ್ವ ಪತ್ರಿಗಳು ಹರಿಯುವುದಲ್ಲದೆ ರೆಂಬೆ ಕೊಂಬೆಗಳನ್ನು ಕಡಿಯುತ್ತಿರುವುದು ನೋವಿನ ಸಂಗತಿ.
ಪವಿತ್ರ ಪತ್ರಿ ಗಿಡಗಳನ್ನು ಬೆಳೆಯಲು ಬಿಡದೆ ರೆಂಬೆ ಕೊಂಬೆ ಕಡಿದು ಗಿಡಗಳ ಬೆಳವಣಿಗೆ ಕುಗ್ಗಿಸುತ್ತಿರುವ ಭಕ್ತರಿಗೆ ಬಿಲ್ವ ಪತ್ರಿಗಿಡದ ಪರವಾಗಿ ಕವಿಯು ಭಕ್ತರಿಗೆ ಈ ಕವಿತೆಯ ಮೂಲಕ ಹೇಳುವ ಒಂದು ಕಿವಿ ಮಾತಾಗಿರುವುದು.
ಬಹಳ ಪ್ರಶಾಂತವಾಗಿರುವಂತಹ ತಾಣ ಬಸವಕಲ್ಯಾಣ ಗವಿಮಠ ಅನೇಕ ಪ್ರಾಣಿ ಪಕ್ಷಿಗಳು ಕುಣಿದು ಕುಪ್ಪಳಿಸುವಂತಹ ಸ್ಥಳವದು ಬಂದಂತಹ ಭಕ್ತರು ಪತ್ರಿ ಗಿಡಗಳ ಪಾಲನೆ ಪೋಷಣೆ ಮಾಡದೆ ಪತ್ರಿ ಗಿಡಗಳನ್ನು ಕಡಿದು ಬಿಸಾಕುತ್ತಿರುವುದು ನೋವಿನ ಸಂಗತಿ ಅದು ರಕ್ಷಿಸುವುದು ನಮ್ಮ ಕರ್ತವ್ಯವೆಂದು ಕವಿಯು ಈ ಕವಿತೆಯ ಮೂಲಕ ಬಣ್ಣಿಸಿದ್ದಾನೆ.
ಪತ್ರಿ ಗಿಡಗಳು ಹಕ್ಕಿ ಪಕ್ಷಿಗಳಿಗೆ ಆಶ್ರಯದಾತದಾತರು ಅದರ ಜೊತೆಗೆ ಜನರ ದೇಹದ ಆರೋಗ್ಯವು ಔಷಧೀಯ ಗುಣಗಳಿಂದ ಕೂಡಿದ ಬಿಲ್ವದ ಎಲೆಗಳಲ್ಲಿ ಟ್ಯಾನಿನ್, ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಮ್ಯಾಗ್ನೇಶಿಯಂ ಮುಂತಾದ ರಾಸಾಯನಿಕಗಳು ಕಂಡುಬರುತ್ತವೆ. ಬಿಲ್ವದ ಎಲೆಗಳು ದೃಷ್ಟಿ ಹೆಚ್ಚಿಸಲು, ಹೊಟ್ಟೆಯ ಹುಳುಗಳನ್ನು ಕೊಲ್ಲಲು ಮತ್ತು ಕ್ಯಾನ್ಸರ್ ತಡೆಗಟ್ಟುವಲ್ಲಿ ಬಹಳ ಉಪಯುಕ್ತವಾಗಿವೆ. ಬಿಲ್ವ ಎಲೆಗಳ ಸೇವನೆಯು ತ್ರಿದೋಷಗಳಿಂದ ಉಂಟಾಗುವ ರೋಗಗಳಿಂದ ರಕ್ಷಿಸುತ್ತದೆ ಅಂದರೆ ವಾತ (ವಾಯು), ಪಿತ್ತ (ಉಷ್ಣ), ಕಫ (ಶೀತ) ಮತ್ತು ಜೀರ್ಣಾಂಗ ವ್ಯವಸ್ಥೆಯ ದೋಷಗಳು ಇತ್ಯಾದಿ. ಇದು ಚರ್ಮ ರೋಗಗಳು ಮತ್ತು ಮಧುಮೇಹದ ಕೆಟ್ಟ ಪರಿಣಾಮಗಳನ್ನು ಹೆಚ್ಚಿಸದಂತೆ ತಡೆಯುತ್ತದೆ ಮತ್ತು ದೇಹದ ಜೊತೆಗೆ ಮನಸ್ಸನ್ನು ಸದೃಢವಾಗಿರಿಸುತ್ತದೆ.
ಶಿವನಿಗೆ ಪ್ರಿಯವಾದ ಬಿಲ್ವ ಮರದಲ್ಲಿ ಮಹಾಲಕ್ಷ್ಮಿ ದೇವಿಯೂ ನೆಲೆಸಿದ್ದಾಳೆ ಎಂದು ನಂಬಲಾಗಿದೆ. ಬಿಲ್ವ ವೃಕ್ಷವನ್ನು ನೆಟ್ಟ ಮನೆಯನ್ನು ಲಕ್ಷ್ಮಿಯ ವಾಸಸ್ಥಾನ ಎಂದು ಹೇಳಲಾಗುತ್ತದೆ. ಬಿಲ್ವ ವೃಕ್ಷದ ಎಲೆಗಳನ್ನು ಶಿವಲಿಂಗದ ಮೇಲೆ ಅರ್ಪಿಸಲಾಗುತ್ತದೆ. ಅದನ್ನು ಮನೆಯ ಬಳಿ ಪ್ರತಿಷ್ಠಾಪಿಸಿದ್ದರಿಂದ ಶಿವ ಸಂತಸಗೊಳ್ಳುತ್ತಾನೆ. ಬಿಲ್ವಪತ್ರೆಯ ಬೇರಿನ ನೀರನ್ನು ಹಣೆಯ ಮೇಲೆ ಹಚ್ಚುವುದರಿಂದ ಸಕಲ ತೀರ್ಥಯಾತ್ರೆಗಳ ಪುಣ್ಯ ಲಭಿಸುತ್ತದೆ. ಶಿವನಿಗೆ ಪ್ರಿಯವಾದ ಬಿಲ್ವಪತ್ರಿ ಇದ್ದು ಸುಟ್ಟ ನಂತರ ಬಸ್ಮ ರೂಪದಲ್ಲಿ ಹಣೆಯ ಮೇಲಿನ ವಿಭೂತಿಯಾಗಿರುತ್ತದೆ. ಪತ್ರಿ ಗಿಡಗಳು ತಮ್ಮ ನೋವನ್ನು ಈ ಕವನದ ಮೂಲಕ ಗವಿಮಠದ ಘನಲಿಂಗನ ಸನ್ನಿಧಾನದಲ್ಲಿ ಹೇಳಿಕೊಂಡಿದ್ದಾರೆ.
ಆದರೆ ಭಕ್ತರು ಪತ್ರಿ ಗಿಡದ ರೆಂಬೆ ಕೊಂಬೆ ಕಡಿಯದೆ ಬೇಕಾಗಿರುವ ಬಿಲ್ವಪತ್ರಿ ಮಾತ್ರ ಹರಿದು ಶಿವನಿಗೆ ಅರ್ಪಿತ ಮಾಡುವುದು ಬಹಳ ಖುಷಿಯ ವಿಚಾರ ರೆಂಬೆ ಕೊಂಬೆ ಕಡಿದಷ್ಟು ಗಿಡಕ್ಕೆ ಮುಳ್ಳುಗಳು ಜಾಸ್ತಿ ಆಗುವುದು ಭಕ್ತರು ಗಮನಿಸಬೇಕಾದ ವಿಷಯ ರಂಬೆ ಕೊಂಬೆ ಕಡಿದರೆ ಗಿಡದ ಕೈಕಾಲು ಕತ್ತರಿಸಿದಂತೆ ಎಂದು ಕವಿಯು ಬಣ್ಣಿಸಿದ್ದಾನೆ.
ಕೊನೆಯ ಸಾಲಿನಲ್ಲಿ ಬಿಲ್ವಪತ್ರೆಗಳು ನಾವೆಲ್ಲಾ ಘನಲಿಂಗ ಅಜ್ಜನ ಅಂದರೆ ಘನಲಿಂಗ ರುದ್ರಮನಿ ಗುರುಗಳ ಆಸ್ಥಾನದ ಸೇವಕರು ಎಂದು ಬಣ್ಣಿಸಿರುವುದು ಅದ್ಭುತ ವಿಚಾರ
ಬರುವ ಶಿವರಾತ್ರಿಯ ಭಕ್ತರು ಪತ್ರಿ ಗಿಡದ ರೆಂಬೆ ಕೊಂಬೆ ಕಡಿಯದೆ ಪತ್ರಿಯ ಎಲೆಗಳನ್ನು ಹರಿದು ಶಿವನಿಗೆ ಅರ್ಪಿತ ಮಾಡಿ ಎಂದು ನಾವು ಈ ಕವನದ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ.
– ಶ್ರೀನಿವಾಸ ಬಿರಾದಾರ
