ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

40 ಲಕ್ಷ ರೂಪಾಯಿಗಳಲ್ಲಿ 55 ತ್ರಿಚಕ್ರ ವಾಹನ ವಿತರಣೆ :ವಿಶ್ವ ವಿಕಲಚೇತನರ ದಿನಾಚರಣೆಯ ಸಮಾರಂಭದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಭರವಸೆ

ಇಂಡಿ : ವಿಕಲಚೇತನರಲ್ಲಿ ಅದ್ಭುತ ಚೇತನವಿರುತ್ತದೆ. ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು. ಶಾಸಕರ ಅನುದಾನದಲ್ಲಿ ತ್ರಿಚಕ್ರ ವಾಹನ ಒದಗಿಸಿಕೊಡಬೇಕೆಂಬ ಉದ್ದೇಶದಿಂದ 2 ವರ್ಷ ಅವರಿಗಾಗಿ ಮೀಸಲಿರಿಸಿದ.₹40 ಲಕ್ಷಗಳಲ್ಲಿ 55 ತ್ರಿಚಕ್ರ ವಾಹನವನ್ನು ಬರುವ ಗಣರಾಜ್ಯೋತ್ಸವದಂದು ವಿತರಣೆ ಮಾಡಲಾಗುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಪಟ್ಟಣದ ಖೇಡ ಕಾಲೇಜ ಆವರಣದಲ್ಲಿ ಶನಿವಾರ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ತಾಲೂಕು ಘಟಕ ಇಂಡಿ ಹಾಗೂ ಬಿಜಾಪುರ ಜಿಲ್ಲಾ ಅಂಗವಿಕಲಕರ ಕ್ಷೇಮಾಭಿವೃದ್ಧಿ ಸಂಘ, ಎಂ ಆರ್‌ ಡಬ್ಲ್ಯು, ವಿ ಆರ್‌ ಡಬ್ಲ್ಯು ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ . ವಿಶ್ವ ವಿಕಲಚೇತನರ ದಿನಾಚರಣೆ ಉದ್ಘಾಟಿಸಿ, ಮಾತನಾಡಿದ ಅವರು, ವಿಕಲ ಚೇತನರು ಆತ್ಮಸ್ಥೆರ್ಯದಿಂದ ಬದುಕು ಸಾಗಿಸುತ್ತಿ ದ್ದಾರೆ. ಸಮಾಜದಲ್ಲಿ ಸ್ವಾವಲ೦ಬಿಗಳಾಗಿ ಸದೃಢವಾಗಿ ಜೀವನ ನಡೆಸುವಂತೆ ಅವರಿಗೆ ಸ್ಫೂರ್ತಿ ತುಂಬಬೇಕು. ಅಂಗವೈಕಲ್ಯ ಮೆಟ್ಟಿ ನಿಲ್ಲಬೇಕು. ಹೃದಯ ಶ್ರೀಮಂತಿಕೆ ಇರುವವರು ವಿಕಲಚೇತನರಲ್ಲಿ ಸಾಮಾನ್ಯರಿಗಿಂತ ವಿಕಲಚೇತನರು ವಿಶ್ವಮಟ್ಟದಲ್ಲಿ ಅಸಮಾನ್ಯ ಸಾಧನೆ ಮಾಡಿದ ಉದಾಹರ ಣೆಗಳಿವೆ ವಿಶ್ವದ ಶ್ರೇಷ್ಠ ವಿಜ್ಞಾನಿ ಐನ್‌ಸ್ಟಿನ್ ಅವರು ಕೂಡ ಒಬ್ಬ ವಿಕಲಚೇತನರು,

ಪ್ರತಿಯೊಬ್ಬರು ಅರ್ಥಪೂರ್ಣ ಮತ್ತು ಪರಿಪೂರ್ಣ ಬದುಕು ನಡೆಸಬೇಕು. ಬೌದ್ಧಿಕ ಹಾಗೂ ಭಾವನಾತ್ಮಕ ಬೆಸೆಯುವ ಕೆಲಸವಾಗಬೇಕು ವಿಕಲತೆ ಶರೀರಕ್ಕೆ ಹೊರತು ಮನಸ್ಸಿಗಲ್ಲ. ಎಲ್ಲರಂತೆ ವಿಕಲಚೇತನರು ಸರಿಸಮಾನರು ಎ೦ದರು.

ವಿಕಲಚೇತನರಿಗೂ ಸ್ವಾಭಿಮಾನದಿಂದ ಬದುಕುವ ಹಕ್ಕಿದೆ. ಅವರು ಸಮಾಜದ ಮುಖ್ಯವಾಹಿನಿಗಳಲ್ಲಿಎಲ್ಲರೂ ಎಲ್ಲರ ಜೊತೆ ಸಹಮತ, ಮಾನವೀಯತೆಯಿ೦ದ ಅವರ ಜೊತೆ ಇರುವುದು,ಅವರಿಗೆ
ಗುರುತಿಸಿಕೊಳ್ಳಬಲ್ಲರು. ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಮಾಹಿತಿ ತಂತ್ರಜ್ಞಾನ, ಮನೋ ರ೦ಜನೆ ಮುಂತಾದ ಕ್ಷೇತ್ರದಲ್ಲಿ ಗುರುತಿಸಬಲ್ಲರು. ಸಮಾಜದಲ್ಲಿ ಅವರ ಮಹತ್ವ ಗೊತ್ತಾಗಬೇಕು ಎಂಬ ಉದ್ದೇಶದಿಂದಲೇ ವರ್ಷದ ಒ೦ದು ದಿನ ಅವರಿಗಾಗಿ ಮೀಸಲಿರಿಸಲಾಗಿದೆ ಎ೦ದು ತಿಳಿಸಿದರು.

ಆತ್ಮಸ್ಥೆರ್ಯ ತುಂಬುವುದು ನಾಗರಿಕ ಸಮಾಜದ -ಕರ್ತವ್ಯ ವಿಕಲಚೇತನರಿಗೆ ಪೋಷಣೆ ಮಾಡುವ ಎಲ್ಲಪಾಲಕ ಬ೦ಧುಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರ ಅಮೋಘ ಸೇವೆಯ ಜೊತೆ, ಪ್ರೀತಿ, ವಿಶ್ವಾಸ ನಿಮ್ಮಲ್ಲಿ ಸದಾ ಇರಲಿ ಎಂದು ಹಾರೈಸಿದರು.

ಅಂಗವಿಕಲತೆ ಹೊಂದಿ ಜಿಲ್ಲೆ ಇತರೆ ಜಿಲ್ಲೆಯಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪನೆ ಮಾಡಿ ಸಾಧನೆ ಮಾಡಿದ ಎ೦.ಎಸ್.ಖೇಡ ಅವರ ಆದರ್ಶ ಬದುಕು ಇತರರಿಗೆ ಮಾದರಿ. ಅಂಗವಿಕಲರ ಬಗ್ಗೆ ಕಾಳಜಿ ಹೊಂದಿ, ತಮ್ಮ ತಂದೆಯ ನೋವು ಇತರರಲ್ಲಿ ಕಂಡುಕೊಂಡು ಅವರ ಸಹಾಯಕ್ಕೆ ನಿಂತಿರುವ ವಿನೋದ ಬೇಡ ಅವರ ಸಾಮಾಜಿಕ ಕಳಕಳಿ ಶ್ಲಾಘನೀಯ ಎ೦ದರು.

ಅಂಗವಿಕಲರು ಹಾಗೂ ಪಾಲಕರ ಒಕ್ಕೂಟದ ಜಿಲ್ಲಾಧ್ಯಕ್ಷ ವಿನೋದ ಖೇಡ ಅಧ್ಯಕ್ಷತೆ ವಹಿಸಿದ್ದರು. ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾಧಿಕಾರಿ ರಾಜಶೇ ಖರ ದೈವಾಡಿ, ಪ್ರಾಚಾರ್ಯ ಶಿವರಾಜ ಹೊನ್ನಕಟ್ಟಿ, ಮಲ್ಲಿಕಾರ್ಜುನ ಉಮರಾಣಿ, ಪರಶುರಾಮ ಬೊನ್ನೆ ವಿಕಾಶ ಬೇಡ, ಪ್ರಕಾಶ ಐರೋಡಗಿ, ಸಂಘದ ತಾಲೂಕು ಅಧ್ಯಕ್ಷ ಸರ್ಪರಾಜ ಮಕಾನ ದಾರ, ಉಪಾಧ್ಯಕ್ಷ ನಿಂಗರಾಜ ಬಿಸನಾಳ, ಕಾರ್ಯ ದರ್ಶಿ ಶಿವಲಿಂಗಪ್ಪನಾಯೊಡಿ, ಸುಮಯ್ಯ ಮೋಮಿ ನ, ಬಾಬು ಸಂಗೋಗಿ, ಭೀಮಣ್ಣ ಗುಡ್ಡೆವಾಡಿ, ಸಿದ್ದಪ್ಪ ಗುಲೆ, ಮಹಾನ೦ದಾ ಬಾಬುಶ್ಯಾ ಹೊಸಮನಿ, ಬಂಡಿವಡ್ಡರ, ಬರಮಲಿಂಗ ಪೂಜಾರಿ, ಕನ್ನಯ್ಯ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊ೦ಡಿದ್ದರು.

ವಿಕಲಚೇತನರ ತ್ರಿಚಕ್ರ ಬೈಕ್‌ ರಾಲಿಯನ್ನು ಪಟ್ಟಣದ ಹಳೆ ತಹಸೀಲ್ದಾರ್ ಕಚೇರಿಯಲ್ಲಿ ಸಿಪಿಐ ಮಹಾದೇವ ಶಿರಹಟ್ಟಿ ಹಾಗೂ ಜೆಡಿಎಸ ಮುಖಂಡ ಬಿ.ಡಿ.ಪಾಟೀಲ ಚಾಲನೆ ನೀಡಿದರು.

ವರದಿ.ಅರವಿಂದ್ ಕಾಂಬಳೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ