ಬಳ್ಳಾರಿ/ ಕಂಪ್ಲಿ : ಪಟ್ಟಣದ ಅಭಿವೃದ್ಧಿಗೆ ಸಹಕಾರವಿದೆ ಆದರೆ ಇಲ್ಲಿನ ನಡುವಲ ಮಸೀದಿಯಿಂದ ಜೋಗಿ ಕಾಲುವೆವರೆಗಿನ ರಸ್ತೆಯ ಎರಡು ಕಡೆಗಳಲ್ಲಿ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ವಾಸಿಸುತ್ತಿದ್ದು ಅಭಿವೃದ್ಧಿ ಹೆಸರಿನಲ್ಲಿ ಪುರಸಭೆಯು ರಸ್ತೆ ಅಗಲೀಕರಣಕ್ಕೆ ಮುಂದಾಗಿರುವುದು ಸರಿಯಲ್ಲ. ಕೂಡಲೇ ರಸ್ತೆ ಅಗಲೀಕರಣ ವಿಷಯ ಕೈಬಿಡಬೇಕು ಎಂದು ಹಿರಿಯ ನಿವಾಸಿ ಕೆ ಅನಂತ ಪದ್ಮನಾಭಂ ಒತ್ತಾಯಿಸಿದರು.
ಪಟ್ಟಣದ ಶ್ರೀ ಅಮೃತ ಶಿಲಾ ರಾಮಚಂದ್ರ ದೇವಸ್ಥಾನದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿ ಇಲ್ಲಿನ ರಸ್ತೆಯ ಎರಡೂ ಕಡೆಗಳಲ್ಲಿ ಸಾಕಷ್ಟು ಕುಟುಂಬಗಳು 100 ರಿಂದ 150 ವರ್ಷಗಳಿಂದ ನೆಲೆಸುತ್ತಾ ಬಂದಿದ್ದಾರೆ. ಹಲವು ವರ್ಷಗಳಿಂದ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ ಕೆಲ ಮನೆಗಳು ಶೀತಲಗೊಂಡಿದ್ದು ಕೆಲವರು ಹೊಸ ಮನೆಗಳನ್ನು ಕಟ್ಟಿಕೊಂಡಿದ್ದಾರೆ ಪುರಸಭೆ ಯಾವುದೇ ಜಾಗ ಅತಿ ಕ್ರಮಿಸಿಕೊಂಡಿಲ್ಲ ನೊಂದಣಿ ಮಾಡಿಸಿಕೊಂಡ ಜಾಗದಲ್ಲಿ ವಾಸ ಮಾಡಲಾಗುತ್ತಿದೆ ಪುರಸಭೆಗೆ ತೆರಿಗೆಯನ್ನು ನೊಂದಣಿ ಪ್ರಕಾರ ಪಾವತಿಸಲಾಗುತ್ತಿದೆ 2006ರಲ್ಲಿ ರಸ್ತೆ ಅಗಲೀಕರಣ ಮಾಡಲು ತೀರ್ಮಾನಿಸಿದ್ದರು ಆದರೆ ಈ ದಿನದವರೆಗೂ ಇಲ್ಲಿ ನೆಲೆಸಿರುವ ಕುಟುಂಬಗಳಿಗೆ ಪುರಸಭೆಯಿಂದ ಯಾವುದೇ ನೋಟಿಸ್ ಬಂದಿಲ್ಲ. ಅಗಲೀಕರಣ ವಿಷಯ ಇಲ್ಲಿನ ನಿವಾಸಿಗಳ ಗಮನಕ್ಕೆ ಬಂದಿಲ್ಲ ಇತ್ತೀಚಿಗೆ ಪುರಸಭೆಯಿಂದ ನಡವಲ ಮಸೀದಿಯಿಂದ ಹಿಡಿದು ಜೋಗಿ ಕಾಲುವೆವರೆಗಿನ ರಸ್ತೆ ಮಧ್ಯದಿಂದ ಎರಡು ಕಡೆಗಳಲ್ಲಿ 30 : 30 ಅಡಿ ಅಳತೆ ಮಾಡಿ ಗುರುತು ಚಿಹ್ನೆ ಹಾಕಲಾಗಿದೆ ನಂತರ ಮಾನ್ಯ ಶಾಸಕರು ಸ್ಥಳ ವೀಕ್ಷಿಸಿ 15 : 15 ಅಡಿ ಅಗಲೀಕರಣಕ್ಕೆ ಅನುಮತಿ ನೀಡಲು ಕೋರಿದರು. ತದ ನಂತರ ಮಾರ್ಚ್ ಒಂದರಂದು ಪುರಸಭೆ ಸಿಬ್ಬಂದಿಗಳು ಬಂದು ಎರಡೂ ಕಡೆಗಳಲ್ಲಿ ತಲಾ 17ವರೆ ಅಡಿಯಷ್ಟು ಗುರ್ತಿಸಿದ್ದಾರೆ. ಇಲ್ಲಿನ ಕುಟುಂಬಗಳಿಗೆ ತಿಳಿಸದೆ ನಷ್ಟ ಪರಿಹಾರ ಇಲ್ಲದೆ ರಸ್ತೆ ಅಗಲೀಕರಣ ಮಾಡುವುದು ಯಾವ ನ್ಯಾಯ? ಎಂದು ಪ್ರಶ್ನಿಸುವ ಜೊತೆಗೆ ಇಲ್ಲಿನ ಕುಟುಂಬಗಳು ಸಂಪೂರ್ಣವಾಗಿ ಬಡತನದಲ್ಲಿ ಜೀವನ ನಡೆಸುತ್ತಿದ್ದಾರೆ ಪುರಸಭೆಯವರು ಮನೆಗಳನ್ನು ಹೊಡೆದರೆ ಪುನಃ ಮನೆ ಕಟ್ಟಿಕೊಳ್ಳುವುದಕ್ಕೆ ಆಗುವುದಿಲ್ಲ. ಅಲ್ಪ ಸ್ವಲ್ಪ ಜಾಗದಲ್ಲಿರುವ ಕುಟುಂಬಗಳು ಬೀದಿ ಪಾಲಾಗುತ್ತಾರೆ ಇಲ್ಲಿ 15 ರಿಂದ 25 ಬಾವಿಗಳಿವೆ. ಆದ್ದರಿಂದ ಅಗಲೀಕರಣ ಮಾಡಬಾರದು ಒಂದು ವೇಳೆ ರಸ್ತೆ ಅಗಲೀಕರಣ ತೆರವು ಮಾಡಿದರೆ ಪುರಸಭೆಯು ನೇರ ಹೊಣೆಗಾರರಾಗಬೇಕಾಗುತ್ತದೆ. ಹೀಗಾಗಿ ಇಲ್ಲಿನ ಕುಟುಂಬಗಳ ಅಳಲನ್ನು ಆಲಿಸಿ ರಸ್ತೆ ಅಗಲೀಕರಣ ರದ್ದು ಮಾಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ನಿವಾಸಿಗಳಾದ ಬಿ.ರಮೇಶ, ಅನಿಲ್ ಕುಮಾರ್, G. ಶಶಿಧರ, ವೆಂಕಟರೆಡ್ಡಿ, ಜಾಜಿ ಪಂಪಾಪತಿ, ಪ್ರಹ್ಲಾದ್ , ಗೋಪಾಲಕೃಷ್ಣ, ಗಿರಿರಾಜ, ಅನಂತಚಾರ್, ರುದ್ರಪ್ಪ ಆಚಾರ್ , ಕರಿಬಸಯ್ಯಸ್ವಾಮಿ , ಗಂಡಿ ಗಣೇಶ, ಸಂದೀಪ್ , ಪಂಪಣ್ಣ , ನಾಗರಾಜ , ಶ್ರೀನಿವಾಸ್ , ಶಿವರಾಜ್ , ರಾಘವೇಂದ್ರ ಶೆಟ್ಟಿ , ವಿಜಯಲಕ್ಷ್ಮಿ, ಜಯಶ್ರೀ, ಯು. ಅಮೃತ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ್