ತುಮಕೂರು:ಪಾವಗಡ ತಾಲ್ಲೂಕಿನ ಮರಿದಾಸಹಳ್ಳಿ ಗ್ರಾಮಪಂಚಾಯ್ತಿಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿದ್ದು ಈ ಪಂಚಾಯ್ತಿಯಲ್ಲಿ ಒಟ್ಟು 18 ಗ್ರಾಮಪಂಚಾಯ್ತಿ ಸದಸ್ಯರು ಇದ್ದು ಈ ಪೈಕಿ ಜೆಡಿಎಸ್ ಬೆಂಬಲಿತ ಸದಸ್ಯರು 13 ಜನ ಇದ್ದು ಮೊದಲು ಮಾತು ಕಥೆಯಂತೆ ಮೊದಲು ಮಹಿತರವರನ್ನು ಉಪಾಧ್ಯಕ್ಷ ರನ್ನಾಗಿ ಅಯ್ಕೆ ಮಾಡಿದ್ದು ಅವರ ಅವಧಿ ಮುಗಿದ ಬಳಿಕ ಇದೀಗ ಸರಸ್ವತಿ ಮಲ್ಲಿಕಾರ್ಜುನರವರನ್ನು ಚುನಾವಣೆ ಅಧಿಕಾರಿಗಳು,ತಾಲ್ಲೂಕು ದಂಡಾಧಿಕಾರಿಗಳಾದ ವರದರಾಜುರವರ ಮತ್ತು ಗ್ರಾಮಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಾದ ಮುದ್ದಣ್ಣನವರ ಸಮ್ಮುಖದಲ್ಲಿ ಮರಿದಾಸನಹಳ್ಳಿ ಗ್ರಾಮಪಂಚಾಯ್ತಿ ಉಪಾಧ್ಯಕ್ಷರನ್ನಾಗಿ ಸರಸ್ವತಿ ಮಲ್ಲಿಕಾರ್ಜುನ ರವರನ್ನು ಅವಿರೋಧವಾಗಿ ಅಯ್ಕೆ ಮಾಡಲಾಯಿತು ಸರಸ್ವತಿಯವರನ್ನು ಹೊರತು ಪಡಿಸಿ ಬೇರೆ ಯಾರೂ ಕೂಡಾ ಉಮೇದುದಾರಿಕೆ ಸಲ್ಲಿಸದ ಕಾರಣ ಚುನಾವಣೆ ಅಧಿಕಾರಿಗಳು ಸರಸ್ವತಿರವರನ್ನು ಅವಿರೋಧವಾಗಿ ಅಯ್ಕೆಯಾಗಿದ್ದರೆಂದು ಘೋಷಿಸಿದರು ಈ ಸಂದರ್ಭದಲ್ಲಿ ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷರಾದ ವಿ.ಚಿಂತಲರೆಡ್ಡಿ ಮತ್ತು ಹಾಲಿ ಅಧ್ಯಕ್ಷರಾದ ಕುಮಾರ್ ಸದಸ್ಯರುಗಳಾದ ಶಿವಲಿಂಗಪ್ಪ ಮಹಾಲಿಂಗ ನಾಯಕ ಪಾರ್ವತಮ್ಮ, ಮಹಿತ ಶಿವಲಿಂಗಮ್ಮ,ಸನ್ನಪ್ಪ ಜೆಡಿಎಸ್ ಪಕ್ಷದ ಮುಖಂಡರುಗಳಾದ ಬಿ .ಅಂಜಿನಾಯಕ್ ,ಮಾಜಿ ಅದ್ಯಕ್ಷರಾದ ಮಲ್ಲಿಕಾರ್ಜುನ ಬಿ,ರಾಮಪ್ಪ,ಅಮರ್ ಸ್ವಾಮಿ ,ವಸಂತರೆಡ್ಡಿ ಉಪಸ್ಥಿತಿ ಇದ್ದರು
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.