ಮತವೆಂಬುದು ನಮ್ಮೆಲ್ಲರ ಸ್ವತ್ತು ಒಂದೊಂದು ಮತವೂ ಬಹು ಅಮೂಲ್ಯವಾದುದು ನಮ್ಮ-ನಮ್ಮ ಆಲೋಚನೆ ಮೇರೆಗೆ ಹಾಕಿದ ಪ್ರತಿ ಮತವು ನಮ್ಮ ದೇಶದ ಮುಂದಿನ ಭವಿಷ್ಯವನ್ನು ನಿರ್ಧರಿಸುತ್ತದೆ.
ಇಂತಹ ಅತೀ ಅಮೂಲ್ಯವಾದ ಮತವನ್ನು ಚುನಾವಣಾ ಹಿಂದಿನ ದಿನವೇ ಕ್ಷಣಿಕದ ದುಡ್ಡಿನ ಆಸೆಗೆ ಮಾರಿದರೆ ಮುಂದಿನ ಐದು ವರ್ಷ ಸಜ ಅನುಭವಿಸುವೆವು ಎಂಬುದನ್ನು ಮರೆತಿರುತ್ತೇವೆ.
ನೀರು ಪೋಲು ಮಾಡಿದಲ್ಲಿ ಎಚ್ಚರಗೊಳ್ಳುವ ನಾವು, ಮತ ದುಡ್ಡಿನ ಪಾಲು ಆಗುವಾಗ ಏಕೆ ಎಚ್ಚರಗೊಳ್ಳುವುದಿಲ್ಲ ?
ನಮ್ಮ ಮತ ನಮ್ಮದೇ ಅಲ್ಲವೇ ?
ಒಬ್ಬ ಒಳ್ಳೆ ರಾಜಕಾರಣಿಯನ್ನು ಆಯ್ಕೆ ಮಾಡಬೇಕಾದಲ್ಲಿ ” ಅವರ ಜಾತಿ , ವರ್ಗ, ವರ್ಣ,ಪರಿಶಿಷ್ಟವಾದವನೋ ಎಂದು ನೋಡುವ ಬದಲು ಆ ರಾಜಕಾರಣಿ ಕಲಿತವನೇ! ನಮ್ಮೂರಿನ ನಮ್ಮ ರಾಜ್ಯದ ಸಮಸ್ಯೆ ಬಗೆಹರಿಸಬಲ್ಲನೆ ಎಂಬುದನ್ನು ಗಮನಿಸಬೇಕಾಗುತ್ತದೆ.
ಹೀಗೊಂದು ನಡೆದರೆ ?
ಚುನಾವಣಾ ಪ್ರಣಾಳಿಕೆ ಇಲ್ಲದೆ ನಮ್ಮ ದೇಶದಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಸಿದರೆ,
ನಮ್ಮ ರಾಜ್ಯಕ್ಕೂ ಹಾಗೂ ದೇಶಕ್ಕೂ ಒಬ್ಬ ಒಳ್ಳೆಯ ನಿಷ್ಟಾವಂತ ನಾಯಕ ಸಿಗಬಹುದು ಹೀಗಾದರೆ ನಮ್ಮ ಜನರ ನಮ್ಮ ಸ್ವಂತಿಕೆ ಉಪಯೋಗಿಸಿ ತಮ್ಮ ತಮ್ಮಲ್ಲಿನ ಆಲೋಚನೆಯನ್ನು ಜನರು ಬೆಳಕಿನ ಕಡೆ ಬೀರಿ ಸರಿಯಾದ ನಾಯಕನನ್ನು ಆಯ್ಕೆ ಮಾಡುವರು ಅಲ್ಲವೇ ? ಜನರು ಅವರ ಬಣ್ಣದ ಮಾತಿಗೆ ಮಾರುಹೋಗುವುದು ತಪ್ಪಿ ಅಭ್ಯರ್ಥಿಯ ಬಗ್ಗೆ ತಿಳಿದು ಮತ ಚಲಾಯಿಸಬಹುದು.
ಒಬ್ಬ ಮಂತ್ರಿ ಕನಿಷ್ಟ ಪಕ್ಷ ಒಂದು ವೋಟಿಗೆ ಜಾಸ್ತಿ ಎಂದರೆ ಒಂದರಿಂದ ಎರಡು ಸಾವಿರ ನೀಡಬಹುದು. ಒಂದು ವರ್ಷಕ್ಕೆ 365 ದಿನ 5 ವರ್ಷಕ್ಕೆ 1825 ದಿನ. ಪ್ರತಿ ದಿನ ನಾವು 1.25 ರೂಪಾಯಿಗೆ ನಮ್ಮ ಮತವನ್ನು ಮಾರಿಕೊಳುತ್ತಾ ಇದೀವಿ ಈ ರೀತಿ ದುಡ್ಡು ಕೊಟ್ಟು ಅವರ ಪರವಾಗಿ ಮತ ಚಲಾಯಿಸಿ ನಮ್ಮ ಕೆಲಸವನ್ನು ಮಾಡಲು ಅವರ ಮುಂದೆ ನಾವೇ ಅಂಗಲಾಚಬೇಕೆ? ಇದರ ಅರ್ಥ ನಮ್ಮಲ್ಲಿನ ಜ್ಞಾನ ಕತ್ತಲಿನಲ್ಲಿ ಇದೆ ಎಂದು ಕತ್ತಲಿಂದ ಆಚೆ ಬಂದು ತಿಳಿ ಸತ್ಯದೆಡೆಗೆ ಆಲೋಚನೆ ಬೀರೋಣ ಒಳ್ಳೆ ಅಭ್ಯರ್ಥಿಗೆ ನಮ್ಮ ಮತವನ್ನು ನೀಡೋಣ ದುಡ್ಡಿನ ಬಲೆಗೆ ಬೀಳದೆ ಕೆಲಸ ಮಾಡುವ ರಾಜಕಾರಣಿಗೆ ಮತ ಚಲಾಯಿಸೋಣ. ಆಯ್ಕೆ ನಿಮ್ಮ ಕೈಲಿ ಇದೆ ಯೋಚಿಸಿ ಮತ ಚಲಾಯಿಸಿ.
- ರಕ್ಷಿತ್ ಆರ್. ಪಿ
ಎಂಜಿಎಂ ಕಾಲೇಜ್