ಲಿಂಗಸುಗೂರು(ಹಟ್ಟಿ)
ಬುರ್ರಕಥಾ, ಜನಪದ ಕಲಾ ಟ್ರಸ್ಟ್ (ರಿ),
ಹಟ್ಟಿ ಪಟ್ಟಣ ವತಿಯಿಂದ ಇಂದು ಮಧ್ಯಾಹ್ನ ಬಹಳ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಧಾರವಾಡದ ಜಿಲ್ಲಾಸ್ಪತ್ರೆಯ ಪ್ಯಾರಾಮೆಡಿಕಲ್ ಕಾಲೇಜ್ ಆಫೀಸ್‌ನಲ್ಲಿ Smile Talk Paramedical ಚಾನೆಲ್ ನ Youtuber ಹಾಗೂ ಜಿಲ್ಲಾಸ್ಪತ್ರೆಯ ಪ್ಯಾರಾಮೆಡಿಕಲ್ ಶಿಕ್ಷಕರಾದ ಶ್ರೀ ಇಸ್ಮಾಹಿಲ್ ತಹಸೀಲ್ದಾರ್ ಅವರಿಗೆ ವಿದ್ಯಾರ್ಥಿಸ್ನೇಹಿ ಎಂದು ಬಿಜೆಪಿ ಯುವಮೋರ್ಚಾ ಯಾದಗಿರಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಸುರೇಶ ಕೋರಿ ಹಾಗೂ ಉದ್ಯಮಿಗಳಾದ ಶ್ರೀ ರಾಘವೇಂದ್ರ ಶೆಟ್ಟಿ ಅವರು ಅಭಿನಂದಿಸಿ, ಸನ್ಮಾನಿಸಿದರು.
ಸುರೇಶ ಕೋರಿ ಮಾತಾಡುತ್ತಾ, ತಮ್ಮ ಯೂಟ್ಯೂಬ್ ಮುಖಾಂತರ ನಿರಂತರವಾಗಿ ವಿದ್ಯಾರ್ಥಿ-ಪೋಷಕರಿಗೆ ಹಾಗೆಯೇ, SSLC-PUC ಮುಗಿಸಿದ ಬಡ ವಿದ್ಯಾರ್ಥಿಗಳಿಗೆ ಅರೆ ವೈದ್ಯಕೀಯ ಚಿಕಿತ್ಸೆ ಹಾಗೂ ನರ್ಸಿಂಗ್ ಶಿಕ್ಷಣ ಕಲಿಯುವಂತೆ ಪ್ರೇರೆಪಿಸುವ ಕೆಲಸದ ಜೊತೆಗೆ ತಾವು ಸಹ ವೈದ್ಯಕೀಯ ಸೇವೆಯನ್ನು ಮಾಡಲು ವೈದ್ಯಕೀಯ ವಿಭಾಗಕ್ಕೆ ಬರಬೇಕೆಂದು ಸರಕಾರಿ ಕೋಟಾದಡಿಯಲ್ಲಿ ಅದರಲ್ಲೂ ಖಾಸಗಿ ಕಾಲೇಜ್‌ಗಳಲ್ಲಿ ಸರ್ಕಾರಿ ಸೀಟ್‌ಗಳನ್ನು ಯಾವ ರೀತಿ ಪಡೆದುಕೊಳ್ಳಬೇಕೆಂದು ನಿರಂತರವಾಗಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಮಾಹಿತಿಯನ್ನು ನೀಡುವ ಕೆಲಸ ಮಾಡುತ್ತಿದ್ದಾರೆ ಅವರಿಗೆ ಬುರ್ರಕಥಾ,ಜನಪದ ಕಲಾ ಟ್ರಸ್ಟ್ ಅಭಿನಂದಿಸುತ್ತಿರುವುದಕ್ಕೆ ಎಲ್ಲರ ಪರವಾಗಿ ಹಾಗೂ ವೈಯಕ್ತಿಕವಾಗಿಯೂ ಅಭಿನಂದನೆಗಳು ಸಲ್ಲಿಸುತ್ತೇನೆ ಎಂದರು.
ಕಾರ್ಯದರ್ಶಿ ಶಿವರಾಜ್ ಮೋತಿ ಮಾತಾಡುತ್ತಾ, ಸಮಾಜಮುಖಿಗಾಗಿ ವಿದ್ಯಾರ್ಥಿಸ್ನೇಹಿಯಿಂದ ಕೆಲಸ ಮಾಡುತ್ತಿರುವ ಶ್ರೀಇಸ್ಮಾಹಿಲ್ ತಹಸೀಲ್ದಾರ್ ಅವರ ಈ ನಿಸ್ವಾರ್ಥ ಸೇವೆಗೆ ನಮ್ಮ ಟ್ರಸ್ಟ್ ವತಿಯಿಂದ ಇದೊಂದು ಚಿಕ್ಕ ಸನ್ಮಾನ ಎಂದು ತಿಳಿಸುತ್ತಾ, ಇವರಿಂದ ಅಂದರೆ ಇವರು ನೀಡುವ ಮಾಹಿತಿಯಿಂದ ಇಂದು ರಾಜ್ಯದ ಎಷ್ಟೋ ಬಡ ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿಯಲ್ಲಿ ಅರೆ ವೈದ್ಯಕೀಯ ಹಾಗೂ ನರ್ಸಿಂಗ್ ಕಲಿಯುತ್ತಿದ್ದಾರೆ ಎಂಬ ಮಾಹಿತಿ ನಮ್ಮ ಗಮನಕ್ಕೆ ಬಂದಿದೆ ಹಾಗಾಗಿ ಇನ್ನೂ ಹೆಚ್ಚಿನ ಸ್ಫೂರ್ತಿಯಾಗಿ ಕೆಲಸ ಮಾಡಲೆಂದು ತಮ್ಮ ಯೂಟ್ಯೂಬ್ ಮುಖಾಂತರ ಮಾಹಿತಿ ನೀಡುವುದನ್ನು ಯಾವುದೇ ಕಾರಣಕ್ಕೂ ನಿಲ್ಲಿಸದೇ ಇನ್ನೂ ಹೆಚ್ಚು ಕ್ರಿಯಾಶೀಲತೆಯಿಂದ ಕಾರ್ಯನಿರತರಾಗಲೆಂದು ಆಶಿಸುತ್ತಾ, ಆಸಕ್ತರು Smile Talk Paramedical ಯೂಟ್ಯೂಬ್ ಚಾನೆಲ್‌ನ್ನು ವೀಕ್ಷಿಸಬಹುದೆಂದರು.
ಈ ಸಂದರ್ಭದಲ್ಲಿ ಗುತ್ತಿಗೆದಾರ ಶ್ರೀ ಶಿವಕುಮಾರ ದೇವರಮನಿ ಹಾಗೂ ವಕೀಲರಾದ ಶ್ರೀ ವಿಜಯಕುಮಾರ್, ಗಣೇಶ ಕುಮಾರ್, ಹೇಮಂತ್ ಕುಮಾರ್, ಫಕೀರೇಶ (ಡಯಾಲಿಸಸ್ ಟೆಕ್ನಿಷಿಯನ್) ಇನ್ನೂ ಮುಂತಾದವರು ಉಪಸ್ಥಿತರಿದ್ದರು.
-ರವಿಕುಮಾರ್ ಪಾಟೀಲ್