ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನಡೆದಾಡುವ ದೇವರಿಗೆ ನುಡಿ ನಮನ


ನಂತಕಾಲ ಗತಿಸಿದರೂ ಇವರು ಅಜರಾಮರ
ನಂದದಿಂದ ಬದುಕುವ ದಾರಿ ತೋರಿದ ಆಧ್ಯಾತ್ಮರತ್ನ
ರುಳಿನಂತಹ ಅಜ್ಞಾನದ ಪರದೆಯ ಸರಿಸಿದ ಇಹಲೋಕದ ಸಂತ
ರ್ಷೆಯಿಂದ

ಸದಾ ದೂರವಿರೆಂದ ಈಶ್ವರನ ಪ್ರತಿರೂಪ
ತ್ತಮ ನಾಡಿಗಾಗಿ ಸದಾ ಮಿಡಿದ ಉನ್ನತ ಶಿಖರ
ರುಗೋಲಾಗಿ ಸಮಾಜದ ಅಂಕು ಡೊಂಕು ತಿದ್ದಿದ ಊರ್ಜಿತ ಮುನಿ
ಷಿ, ಸಾಧುಸಂತರ ನೀತಿಭೋದೆ ಜಗದಗಲ ಪಸರಿಸಿದ ಸಂಚಾರಿ ಮುನಿ
ಚ್ಚರಿಕೆಯ ನುಡಿಗಳಿಂದ ಜನರ ಜೀವನಮಟ್ಟ ಎತ್ತರಿಸಿದರು
ರಳಿತಗಳನ್ನು ಸಮನಾಗಿ ಸ್ವೀಕರಿಸಿದ ಮಹಾಗುರು
ಸಿರಿ ಎಂದರೆ ಮುಖದ ಮೇಲಿನ ನಗು ಎಂದವರು
ಲವಿನಿಂದ ಜನರ ಮನವ ಗೆಲ್ಲುವ ದಾರಿತೋರಿದಾತರು
ಓಂ ಕಾರ ಮಂತ್ರದ ಅರ್ಥ ತಿಳಿಸಿದ ಓಜಸ್ವಿ
ದಾರ್ಯತೆಯಿಂದ ಜ್ಞಾನ ಪಸರಿಸಿದ ಮಹಾಂತ
ಅಂ ಧಕಾರ ಅಳಿಸಿದ ಈ ಶತಮಾನದ ಬೆಳಕು
ಅಂ ತಃ ಕರಣದಿ ನಡೆದಾಡುವ ದೇವರಾಗಿದ್ದರು ಶ್ರೀಗಳು
ರುನಾಡಿನ ಹೆಮ್ಮೆಯ ಸ್ವಾಮಿಜೀಗಳು
ಚಿತವಾಗಿ ನಡೆ ನುಡಿಗಳೊಂದಾಗಿ ಬಾಳಿದ ಮಹಾನುಭಾವರು
ಗನದ ರವಿ ಶಶಿಯಂತೆ ಜಗವ ಬೆಳಗಿದವರು
ಘಂ ಟೆ ಜಾಗಟೆಗಳ ಹಂಗಿಲ್ಲದ ನಿಜ ತಪಸ್ವಿ
ಚಿಂ ತನಾ ಮಂಥನಗಳಿಂದ ಅರಿವು ಮೂಡಿಸಿ,
ತ್ರಪತಿಗಳಿಂದ ಅಂತರ ಕಾಯ್ದುಕೊಂಡ ವಿರಾಗಿ.
ನಾನುರಾಗಿಯಾಗಿ ಆಡಿದ ಮಾತುಗಳು
ಝೇಂ ಕಾರವಾಗಿ ಜನರ ಮನವ ಗೆದ್ದರು
ಟಂ ಕಸಾಲೆಗಳು ಬೇಕಿರಲಿಲ್ಲ
ರಾವು ಬರೆದು ಜಗದ ಸಂತೆ ಮುಗಿಸಿದರು
ಡಂ ಬಾಚಾರ ಮಾಡಲಿಲ್ಲ, ಕಿಸಿಯಿಲ್ಲದ ಉಡುಗೆ ತೊಟ್ಟರು
ಢೋಂ ಗಿತನ ಇವರ ಬಳಿ ಸುಳಿಯಲಿಲ್ಲ.
ತ್ವಶಾಸ್ತ್ರಜ್ಞರಾಗಿ ನೀತಿಭೋಧನೆ ಗೈದು,
ಣಿವರಿಯದೆ ಪ್ರಕೃತಿಯ ಸೇವೆ ಮಾಡಿ,
ರೆಯ ಮೇಲಿನ ಸಕಲ ಜೀವಿಗಳಿಗೆ ಲೇಸ ಬಯಸಿ,
ಗುಮೊಗದಿ ಕರ್ತವ್ಯ ಪಾಲಿಸಿದ ಕರ್ಮಯೋಗಿ.
ಪಂ ಡಿತ ಪಾಮರರೆಂಬ ಬೇಧ ಮಾಡದೆ ಸ್ಥಿತಪ್ರಜ್ಞ
ಕೀರರಂತೆ ಬಾಳ ಬಂಡಿ ನೂಕಿದ ಮಹಾಯೋಗಿ
ಹು ಭಾಷಾ ಪಂಡಿತರಾಗಿದ್ದ ಜ್ಞಾನರತ್ನ
ರತಖಂಡದ ಎರಡನೇ ಸ್ವಾಮಿ ವಿವೇಕಾನಂದ
ಮಾ ನವಿಯ ಮಹಲು ಕಟ್ಟಲು ಹಗಲಿರುಳು ಶ್ರಮಿಸಿದ ಮೇಧಾವಿ
ಯಾ ವ ಪದವಿ ಪ್ರಶಸ್ತಿಗೆ ಅಂಟಿಕೊಳ್ಳದೇ
ರಾ ಗ ದ್ವೇಷ ಅಳಿದು ರಾರಾಜಿಸಿದ ಶಿವಯೋಗಿ
ಕ್ಷೋಪಲಕ್ಷ ಜನರಿಗೆ ಆದರ್ಶಪ್ರಾಯರಾಗಿ,
ರಗುರು ಮಲ್ಲಿಕಾರ್ಜುನರ ಕೃಪೆಯಂತೆ,
ಶಿ ವ ಮಂತ್ರವ ನುಡಿದ ಬಸವನಾಡಿನ ನಿರ್ಮೋಹಿ
ಡ್ಗುಣಗಳ ಮಹತ್ವವನ್ನು ಸಾರಿ ಹೇಳಿ,
ರಳತೆಯ ಸಾಕಾರ ಮೂರ್ತಿಯಾಗಿ, ಸಪ್ತಸಾಗರದಾಚೆಗೆ ಜ್ಞಾನ ಬಿತ್ತಿದ ಜ್ಞಾನಜ್ಯೋತಿ
ಠಯೋಗದಿಂದ ಜ್ಞಾನ ಸಿದ್ಧಿಸಿಕೊಂಡ ಸಿದ್ಧಿ ಪುರುಷ
ನಿಷ್ಕ ಳಂ ಕಿತರಾಗಿ ಸರ್ವಧರ್ಮಿಯರ ಅಂತರಾತ್ಮದಿ ನೆಲೆಯಾದ ಜಂಗಮ.
ಬಯಲಲ್ಲಿ ಬಯಲಾಗಿ ನಿರ್ಮಲರಾಗಿ ಪಂಚಭೂತಗಳಲ್ಲಿ ಲೀನವಾದ ಶ್ರೀಗಳ ಗುಣಗಾನ ಮಾಡಲು ಪದಗಳು ಸಾಲುತ್ತಿಲ್ಲ.
ಮರಣವೇ ಮಹಾನವಮಿ ಎನ್ನುವಂತೆ ಲಕ್ಷಾಂತರ ಜನ ಶಾಂತಚಿತ್ತದಿಂದ ಅಂತಿಮ ದರ್ಶನ ಪಡೆದು ಪುಣಿತರಾದರು. ಬುದ್ಧ, ಬಸವ, ವಿವೇಕಾನಂದ, ಕಭೀರ, ಅರಿಸ್ಟಾಟಲ್, ಕನ್ಫ್ಯೂಷಿಯಸ್, ಏಸು, ಪೈಗಂಬರ್ ರಂತಹ ಅನೇಕ ದಾರ್ಶನಿಕರ ಪ್ರತಿರೂಪದಂತೆ ಬಾಳಿದ ಈ ಶತಮಾನದ ವೀರ ಸನ್ಯಾಸಿ ಸಿದ್ದೇಶ್ವರ ಶ್ರೀಗಳು ಇರುವಷ್ಟು ಕಾಲ ಸಂಚಾರ ಮಾಡುತ್ತಾ ಮಧುರ ಮಾತುಗಳಿಂದ ಜನರ ಮನಃಪರಿವರ್ತನೆ ಮಾಡಿ ಶಾಸ್ವತವಾಗಿ ಮೌನಕ್ಕೆ ಶರಣಾದರು. ಅವರ ಒಂದಿಷ್ಟು ಆದರ್ಶ ಪಾಲಿಸುತ್ತಾ ಸಮಸಮಾಜದ ನಿರ್ಮಾಣದಲ್ಲಿ ಪಾಲ್ಗೊಳ್ಳೋಣ.
ಓಂ ಶಾಂತಿ ಶಾಂತಿ ಶಾಂತಿ

-ರಾಜಶೇಖರ ಮಾಲಿ ಪಾಟೀಲ ಶಹಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ