ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅಭಿಮಾನಿಯ ಅಭಿಮಾನ…

ಮನುಷ್ಯ ಎಂದಿಗೂ ಶಾಶ್ವತವಲ್ಲ ಆದರೆ ಆತನ ಹೆಸರು ಮತ್ತು ಚಿಂತನೆಗಳು ಎಲ್ಲರ ಮನಸ್ಸಲ್ಲೂ ಉಳಿದು ಬಿಡುತ್ತದೆ. ಅದಕ್ಕೆ ಮೂಲ ಸಾಕ್ಷಿ ಎಂದರೆ – ಸುಶಾಂತ್ ಸಿಂಗ್ ರಜಪೂತ್. ವ್ಯಕ್ತಿ ಜೀವಂತ ಇಲ್ಲದೆ ಹೋದರು ಮನಸೆಂಬ್ಬ ಹೊಲದಲ್ಲಿ ಹೆಸರನ್ನು ನಾಟಿ ಮಾಡಿ ಹೋದ ಮಹಾನ್ ಕಲಾವಿದ !

ಮನ್ಸೂರ್ ಖಾನ್ನ ಜೀವನ ಕಥೆ
ಬದುಕಿನ ಬವಣೆಯಲ್ಲಿ ಒಂದು ಸಣ್ಣ ತಿರುವು.

ಮನುಷ್ಯನ ಹುಟ್ಟು ಸಾವಿನ ಏಳಿಗೆಯಲ್ಲಿ ೫೦ ಭಾಗದಷ್ಟು ಜನರು ಏನನ್ನು ಸಾಧಿಸದೆ ಅವರ ಹೆಸರಿಗೆ ಹಾಗೂ ಉಸಿರಿಗೆ ಬೆಲೆ ಇಲ್ಲದೆ ಮರಣ ಹೊಂದುವರು. ಆದರೆ ಸತ್ತ ಮೇಲೂ ಈ ಗೊಳಕಾರದ ಮೇಲೆ ಹೆಸರು ನೆಟ್ಟು ಹೋಗವಲ್ಲಿ ಯಶಸ್ವಿಯಾದರು ಸುಶಾಂತ್ ಸಿಂಗ್ ರಜಪೂತ್.

ಜನವರಿ 21-1986 ಬಿಹಾರ್ ರಾಜ್ಯದ ಪಾಟ್ನಾದಲ್ಲಿ ಇವರ ಜನನ. ಇವರ ತಂದೆ ಕೃಷ್ಣ ಕುಮಾರ್ ಹಾಗೂ ತಾಯಿ ಉಷಾ ಸಿಂಗ್. ಕೃಷ್ಣ ಕುಮಾರ್ ಅವರು ನಿವೃತ್ತ ತಾಂತ್ರಿಕ ಅಧಿಕಾರಿ ಹಾಗೂ ಪಾಟ್ನಾದ ಬಿಹಾರ ರಾಜ್ಯದ ಕೈಮಗ್ಗ ಕಾರ್ಪೋರೇಷನ್ ನಲ್ಲಿ ಕೆಲಸ ಮಾಡುತಿದ್ದರು. ಕೃಷ್ಣ ಕುಮಾರ್ ಅವರಿಗೆ ಒಟ್ಟು 5 ಜನ ಮಕ್ಕಳು ಇದರಲ್ಲಿ ಕೊನೆಯ ಮಗ ಸುಶಾಂತ್ ಸಿಂಗ್ ರಜಪೂತ್ ಇವರು ಗುಲ್ಮನ್ ಎಂಬ ಅಡ್ಡ ಹೆಸರು ಕೂಡ ಹೊಂದಿದ್ದರು. ಇವರ ತಾಯಿ ಮರಣದ ನಂತರ ಇವರ ಪೂರ್ತಿ ಕುಟುಂಬವು ದೆಹಲಿಗೆ ಸ್ಥಳಾಂತರಗೊಂಡಿತ್ತು. ದೆಹಲಿಯಲ್ಲಿ ಹಂಸರಾಜ್ ಮಾದರಿ ಶಾಲೆಯಲ್ಲಿ ಮಧ್ಯಂತರ ಅಧ್ಯಯನಕ್ಕಾಗಿ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು.
ದೆಹಲಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಕೋರ್ಸ್ ಅನ್ನು ತೊರೆದು ಅಲ್ಲಿಂದ ನೇರ ಮುಂಬೈಯಿಗೆ ಹೊರಟರು.

ಬೆನ್ನಟಿದ್ದ ಕನಸು ಒಂದೇ …!
ಮುಂಬೈ ನಮ್ಮ – ನಿಮ್ಮೆಲ್ಲರ ಅಳತೆಗೂ ಮೀರಿದ ದೊಡ್ಡ ಸಾಮ್ರಾಜ್ಯ. ಇಲ್ಲಿ ನಮಗೆ ನಿಮಗೆ ಅನ್ನೋದಕ್ಕಿಂತ ಎಲ್ಲವೂ ನನಗೆ ಬೇಕು ಎಂದು ಹೇಳುವವರ ಕೈ ಮೇಲೆ ಇರುತ್ತದೆ.
ಇಂತಹ ದೊಡ್ಡ ಸಮುದ್ರದಲ್ಲಿ ಇವರು ಇನ್ನೂ ಚಿಕ್ಕ ಮೀನು. ಎಲ್ಲಾ ಮೀನುಗಳು ಗಾಳಕ್ಕೆ ಸಿಲುಕಿ ಸತ್ತು ಹೋದರೆ ಈ ಮೀನು ರವೀಂದ್ರ ಗೌತಮ್ ಎಂಬ ಡೈರೆಕ್ಟರ್ ಗಾಳಕ್ಕೆ ಸಿಲುಕಿ ಹೊಸ ಬದುಕೇ ಆರಂಭವಾಯಿತು.
ಇತನ ಅಭಿನಯ ಮೆಚ್ಚಿ ಆತನ ನಿರ್ದೇಶನದಲ್ಲಿ ಬರುತ್ತಿರುವ ‘ ಪವಿತ್ರಾ ರಿಶ್ತಾ ‘ ಎಂಬ ಧಾರಾವಾಹಿಯಲ್ಲಿ ಮುಖ್ಯ ಪಾತ್ರ ವಹಿಸಿಕೊಟ್ಟರು. ಈ ಪಾತ್ರದ ಪ್ರಚಾರದ ಮೂಲಕ ಸಾಕಷ್ಟು ದೂರದರ್ಶನ ಅಕಾಡೆಮಿ ಪ್ರಶಸ್ತಿಗಳು ದೊರೆತವು ಹಾಗೂ 2010 ರಲ್ಲಿ ಅತ್ಯುತ್ತಮ ನಟ ಎಂಬ ಪ್ರಶಸ್ತಿ ದೊರೆಯಿತು. ಇವರ ಮೊದಲ ಚಲನಚಿತ್ರ ‘ ಕೈ ಪೋ ಚೇ ‘ ಈ ಸಿನೆಮಾ ಸ್ನೇಹಿತರು ಎಂದರೆ ಹೇಗೆ ಇರಬೇಕು ಅವರ ಇಬ್ಬರ ನಡುವಿನ ಸಂಬಂಧ ಹೇಗೆ ಇರಬೇಕು ಎಂಬುದನ್ನು ಬಹು ಮಾರ್ಮಿಕವಾಗಿ ತೋರಿಸಿದ್ದರು. ಈ ಸಿನೆಮಾ ನೋಡಿ ಎಂತಹ ಮನುಷ್ಯ ಬೇಕಾದರೂ ಇವರ ವ್ಯಕ್ತಿತ್ವಕ್ಕೆ ಅಭಿಮಾನಿ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಹೇಳಲು ಹೊರಟರೆ ಮುಗಿಯದ ಯಾನ.
ಸಾಲದು ನಿಮ್ಮ ಸಾಧನೆಗೆ ನನ್ನ ಈ ಅಭಿಮಾನ.

ದಾಖಲೆಗಳನ್ನು ಮುರಿಯುವುದು ಇವರ ಹವ್ಯಾಸ.
ಬಾಲಿವುಡ್ ಬಾಕ್ಸಾಫೀಸಿನಲ್ಲಿ ‘ ಎಂ ಸ್ ಧೋನಿ ದೀ ಉಂತೋಲ್ಡ್ ಸ್ಟೋರಿ ‘ ಈ ಸಿನೆಮಾದ ಮೂಲಕ ಎಲ್ಲರ ಗಮನ ತನ್ನತ್ತ. ಈ ಸಿನೆಮಾವು 2016 ರಲ್ಲಿ ಬಿಡುಗಡೆಗೊಂಡಿದ್ದು ಸರಿ ಸುಮಾರು 1.1 ಬಿಲಿಯನ್ ಅಷ್ಟು ಗಳಿಕೆ ಪಡೆಯಿತು ಹಾಗೂ 2016 ರಲ್ಲಿ ಈ ಸಿನೆಮಾ ಎಲ್ಲಾ ಸಿನೆಮಾಗಳ ದಾಖಲೆ ಮುರಿಯುವುದರಲ್ಲಿ ಯಶಸ್ವಿ ಗೊಂಡಿತ್ತು .
ಎಷ್ಟೋ ನಟರು ಉನ್ನತ ಶಿಕ್ಷಣ ಮುಗಿಸದೆ 10 – 12 ನೆಯ ತರಗತಿ ಮುಗಿಸಿ ರಂಗ ಭೂಮಿಗೆ ಪ್ರವೇಶ ಮಾಡುವರು ಆದರೆ ಸುಶಾಂತ್ ಸಿಂಗ್ ರಜಪೂತ್ ವಿಷಯದಲ್ಲಿ ನೋಡೋದು ಸಂಪೂರ್ಣ ವಿಭಿನ್ನ. ಎಲ್ಲರೂ ಈ ವ್ಯಕ್ತಿಯನ್ನು ಕೇವಲ ಒಬ್ಬ ನಟ ಎಂದು ಭಾವಿಸಿದರೆ ಅದು ಖಂಡಿತಾ ತಪ್ಪು..!
ಇವರ ಕೇವಲ ಒಬ್ಬ ನಟ ಮಾತ್ರವಲ್ಲ
ಒಬ್ಬ ಅತ್ಯುತ್ತಮ ವಿದ್ಯಾರ್ಥಿಯೂ ಹೌದು ಎಂದರೆ ತಪ್ಪಾಗದು.
ಇವರ ಸಾಧನೆಗಳ ಸುರಿಮಳೆ ಯಾವುದೇ ಬೇರೆ ನಟರಿಗೆ ಮುರಿಯಲು ಖಂಡತಾ ಸಾದ್ಯವಿಲ್ಲ.
ಅಂತ ಸಾಧನೆ ಇವರು ಏನು ಮಾಡಿದರೆ ಎಂದು ನೀವು ಯೋಚನೆ ಮಾಡುತ್ತಿರಬಹುದು ? ಅದುವೇ ಸುಶಾಂತ್ ಸಿಂಗ್ ರಜಪೂತ್ ಅವರು – ” ಭೌತಶಾಸ್ತ್ರ ದಲ್ಲಿ ರಾಷ್ಟ್ರೀಯ ಮಟ್ಟದ ಒಲಿಂಪಿಯಾಡ್ ವಿಜೇತರು ಹಾಗೂ ೧೧ ಬಾರಿ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ಉತ್ತರ್ಣರಾಗಿದ್ದರು. ದೆಹಲಿಯ ಸ್ಕೂಲ್ ಆಫ್ ಎಂಜಿನಿಯ ರಿಂಗ್ ನಲ್ಲಿ 3 ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಅವರು ನಟನಾಗುವ ಕನಸನ್ನು ಬೆನ್ನಟ್ಟಲು ಮುಂದಾದರು”.
ಚಿಚೋರೆ, ಕೇದಾರನಾಥ್, ಡ್ರೈವ್, ಅರ್ಥ ಗರ್ಭಿತ ಸಿನೆಮಾ ಮಾಡಿ ಎಲ್ಲಾರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾದರು.

ಇವರ ಕೊನೆಯ ಸಿನೆಮಾ ‘ದಿಲ್ ಬೇಚಾರ ‘ ಪ್ರತಿಯೊಂದು ಸಿನೆಮಾದಲ್ಲೂ ಯಾವುದೋ ಒಂದು ರೀತಿಯಲ್ಲಿ ಮನುಷ್ಯನ ಮನ ಮುಟ್ಟುವ ಈ ವ್ಯಕ್ತಿ ಈಗ ನಮ್ಮ ಬಳಿ ಇಲ್ಲ.
ಇವರು ಮಾಡಿರುವ ಎಲ್ಲಾ ಚಲನ ಚಿತ್ರದಲ್ಲೂ ಸಮಾಜಕ್ಕೆ ಹಾಗೂ ಮನುಷ್ಯನ ಸ್ವಹಾಭವ ಒಂದು ಉತ್ತಮ ಸಂದೇಶ ನೀಡುತ್ತದೆ.
ಇಷ್ಟೆಲ್ಲಾ ಸಾಧನೆಗೈದ ಒಬ್ಬ ನಟ ನಮ್ಮ ಭರತ ಭೂಮಿ ಯಲ್ಲಿ ಜೀವಂತವಿಲ್ಲ

ವೆಂದರೆ ಖಂಡಿತಾ ಇದು ಬೇಸರದ ಸಂಗತಿ.
ಪ್ರತಿಯೊಂದು ಸಿನೆಮಾದಲ್ಲೂ ನಾವು ನೀವುಗಳು ಒಂದೊಂದು ಗುಣಗಳನ್ನು ಅಳಪಡಿಸಿಕೊಳ್ಳಬಹುದು.
ಸಮಾಜಕ್ಕೆ ಹಾಗೂ ಒಬ್ಬ ಮನುಷ್ಯನ ಮೇಲೆ ತುಂಬಾ ಪ್ರಭಾವ ಬಿರುವಂತಹ ಚಲನ ಚಿತ್ರಗಳು ಇವರ ಮಡಿಲಿನಲ್ಲಿ ಸಾಕಷ್ಟು ಇತ್ತು ಆದರೆ ಅದನ್ನು ಪರಿಪೂರ್ಣಗೊಳಿಸುವುದು ದೇವರಿಗೂ ಅಷ್ಟು ಇಷ್ಟ ಆಗಿಲ್ಲ ಅನ್ಸುತ್ತೆ. ಇಂತಹ ಒಬ್ಬ ನಟ ನಮ್ಮ ಬಳಿ ಇಲ್ಲ ಎಂಬುದು ಒಂದು ಬೇಸರದ ಸಂಗತಿ ಆದರೆ ಅವರು ಮಾಡಿರುವ ಎಷ್ಟೋ ಆದರ್ಶನಿಯ ಸಿನೆಮಾಗಳು ಪ್ರತಿ ಒಬ್ಬ ಮಾನವನ ಜೀವನ ಶೈಲಿಯನ್ನು ಬದಲಾಯಿಸುತ್ತದೆ.
ವ್ಯಕ್ತಿ ಜೀವಂತ ಇಲ್ಲದೆ ಹೋದರು ಆತನ ವ್ಯಕ್ತಿವ ಪ್ರತಿ ದಿನ ಜೀವಂತ.

-ರಕ್ಷಿತ್.ಆರ್.ಪಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ