ಯಾದಗಿರಿ/ಶಹಾಪುರ:ಹೋತಪೇಟ ಗ್ರಾಮದ ಪ್ರೌಢ ಶಾಲೆಯ ಅಡುಗೆ ಸಹಾಯಕಿ ಜ್ಯೋತಿ ಅಂದು ಎಂದಿನಂತೆ ಶಾಲೆಯ ಮಕ್ಕಳಿಗೆ ಅಡುಗೆ ಮಾಡಲು ಶಾಲೆಗೆ ಬಂದ ಅಡುಗೆ ಸಹಾಯಕಿ ಜ್ಯೋತಿ ದಿನ ನಿತ್ಯ ಕುಕ್ಕರ್ ಇಟ್ಟು ಅಡುಗೆ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕುಕ್ಕರ್ ಸ್ಪೋಟಗೊಂಡಿತು ಅಲ್ಲೇ ಇದ್ದ ಮುಖ್ಯ ಗುರುಗಳಾದ ರಾಜೇಶ್ವರಿ ಹಾಗೂ ಶಿಕ್ಷಕರು ಸಿಬ್ಬಂದಿಗಳು ಗಾಯಗೊಂಡ ಅಡುಗೆ ಸಹಾಯಕಿ ಜ್ಯೋತಿ ಮಾನವಿಯತೆ ತೋರಿಸಬೇಕಾದ ಮುಖ್ಯ ಗುರುಗಳು ಮತ್ತು ಶಾಲೆ ಶಿಕ್ಷಕರು ಕಾಟಾಚಾರಕ್ಕೆ ಎಂಬಂತೆ ಉಪಚಾರ ಮಾಡಿ ಏನೂ ಆಗುವುದಿಲ್ಲ ಎಂದು ಮನೆಗೆ ಕಳಿಸುತ್ತಾರೆ.
ಅಡುಗೆ ಸಹಾಯಕಿ ಜ್ಯೋತಿ ಮನೆಯಲ್ಲೆ ಗಾಯಗೊಂಡು ಜ್ಯೋತಿಯ ಮುಖದ ಚರ್ಮ ಸುಟ್ಟು ಕಳಿಚಿದೆ ಕಾಲಿಗೆ ಗುಳ್ಳೆಗಳು ಬಂದರೂ ಅಂದಿನಿಂದ ಮೂರು ದಿನಗಳು ಆದರೂ ಇದುವರೆಗೆ ಮುಖ್ಯ ಶಿಕ್ಷಕಿ ರಾಜೇಶ್ವರಿ ನಿರ್ಲಕ್ಷ್ಯ ವಹಿಸಿದ್ದು ಎದ್ದು ಕಾಣುತ್ತಿದೆ. ತೀರಾ ನೋವಿನಿಂದ ಬಳಲುತ್ತಿದ್ದರೂ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ರಾಜೇಶ್ವರಿ ಅಡುಗೆ ಸಹಾಯಕಿ ಜ್ಯೋತಿ ಆರೋಗ್ಯ ಕುರಿತು ಕ್ರಮ ಕೈಗೊಳ್ಳಬೇಕಾಗಿತ್ತು. ಇಷ್ಟೆಲ್ಲಾ ಆದರೂ ಮೇಲಧಿಕಾರಿ ಗಮನಕ್ಕೆ ತರದೆ ಬೇಜವಾಬ್ದಾರಿ ತೋರಿದ್ದಾರೆ.
ಕಾಟಾಚಾರಕ್ಕೆ ಎಂಬಂತೆ ವಿಷಯ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ ಮುಖ್ಯ ಶಿಕ್ಷಕಿ ಎಚ್ಚೆತ್ತುಕೊಂಡು.
ಜ.೬ ರಂದು ಸರ್ಕಾರಿ ಆಸ್ಪತ್ರೆ ಕರೆತಂದು ಉಪಚಾರಕ್ಕೆ ಮುಂದಾಗಿದ್ದು ಬೇಜವಾಬ್ದಾರಿ ಕಾರಣ ಎನ್ನುವುದು ಸ್ಪಷ್ಟವಾಗಿ ಎದ್ದು ಕಾಣುತ್ತದೆ.
ಕ್ಷೇತ್ರ ಶಿಕ್ಷಣಾಧಿಕಾರಿ ಬೇಜವಾಬ್ದಾರಿತನದಿಂದ ಮಾತನಾಡಿದ್ದಾರೆ
ನಾನು ಅಂದು ಹೋತಪೇಟ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದೆ ಸಮಗ್ರ ಶಿಕ್ಷಣದ ಪ್ರಗತಿ ಕುರಿತು ಪರಿಶೀಲನೆ ಮಾಡಿದ್ದರೂ ಅಲ್ಲಿನ ಮುಖ್ಯ ಶಿಕ್ಷಕಿ ರಾಜೇಶ್ವರಿಯವರು ನಮ್ಮ ಗಮನಕ್ಕೆ ತಂದಿರುವುದಿಲ್ಲ
ನೀವುಗಳು ಹೇಳಿದಲ್ಲೆ ಮಾತ್ರ ನನಗೆ ಗೊತ್ತಾಗಿದೆ. ಹೋತಪೇಟಿ ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮುಖ್ಯ ಶಿಕ್ಷಕಿಯಾದ ರಾಜೇಶ್ವರಿ ಕೂಡಲೇ ಅಮಾನತು ಮಾಡಿ ಎಂದು ಮನವಿ ಮಾಡಿದರು.
ಮಾನ್ಯ ಜಿಲ್ಲಾಧಿಕಾರಿಗಳಿಗೆ ಅವರಿಗೂ ಕೂಡಾ ಹೇಳುವುದು ಇಷ್ಟೇ ಹೋತಪೇಟ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕುಕ್ಕರ್ ಸ್ಫೋಟ ಪ್ರಕರಣ ಗಂಭೀರವಾಗಿ ಪರಿಗಣಿಸಬೇಕು ಮುಖ್ಯ ಶಿಕ್ಷಕಿ ರಾಜೇಶ್ವರಿ ಅವರಿಗೆ ಶಾಲೆಯಿಂದ ಅಮಾನತು ಮಾಡಿ ಎಂದು ಗ್ರಾಮಸ್ಥರು ಕೇಳಿಕೊಳ್ಳುತ್ತಾರೆ.
ವರದಿ-ರಾಜಶೇಖರ ಮಾಲಿ ಪಾಟೀಲ ಶಹಾಪುರ