ಶರಣರ ಸಗರನಾಡಿನಲ್ಲಿ ಶರಣರಾಗಿ ಸಂತರಾಗಿ ನಡೆದಾಡುವ ದೇವರಾಗಿ ಸರಳ ಸ್ವಭಾವದ ಸಾದಾಸೀದಾ ಹಳ್ಳಿಯ ದೇವರು ಸಾವಿರಾರು ಸಂತರಲ್ಲಿ ಕೋಟಿಗೊಬ್ಬ ಸಂತನಾಗಿ ಸಾರಿದ ನುಡಿಗಳು ಕೇಳಿ ಜಗವೆಲ್ಲ ವಿಸ್ಮಯಗೊಂಡಿತು ಸುಂದರವಾದ ಬಿಳಿ ಬಟ್ಟೆ ತೊಟ್ಟು ಬೆಳದಿಂಗಳ ಚಂದಿರನಾಗಿ ಹೊಳೆದು ತಾವು ತೊಟ್ಟಿರುವ ಬಟ್ಟೆಗೆ ಒಂದು ಕಿಶೆ ಇಲ್ಲದೆ ಜ್ಞಾನಕ್ಯನ ಕಮ್ಮಿ ಇಲ್ಲ ಈ ಭೂಮಿಯ ಮೇಲೆ ಸ್ವಾರ್ಥಿ ಆಗದೆ ಎಲ್ಲವೂ ಜ್ಞಾನಕ್ಕಾಗಿ ಹಗಲು ಇರಳು ದುಡಿದವರು ಸಿದ್ಧಿಯಲ್ಲಿ ಬುದ್ದಿವಂತರು ಹೋರಾಟ ಮಾಡಲಿಲ್ಲ ಯುದ್ಧಮಾಡದೆ ಕೋಟಿ ಕೋಟಿ ಜನರನ್ನು ಸಂಪಾದನೆ ಮಾಡಿದರು ಅವರೇ ನನ್ನ ಗುರು ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ
-ಮಹಾಂತೇಶ ಖೈನೂರ