ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಒತ್ತಡದ ಇಂದಿನ  ಸ್ಪರ್ಧಾತ್ಮಕ ಜೀವನ… ತರದಿರಲಿ ಮರಣ !

ವಿದ್ಯಾರ್ಥಿ, ಯುವಜನರಿಗೆ ಜೀವನದ ಆತ್ಮಸ್ಥೈರ್ಯ , ಕೌಶಲ್ಯ ತುಂಬುವ ನಿಟ್ಟಿನಲ್ಲಿ ಕಿರು ಲೇಖನ

ದೇಶದ ಭವಿಷ್ಯ ಯುವಜನರ ಮೇಲೆ ನಿಂತಿದೆ, ದೇಶ ಕಟ್ಟುವ ಯುವ ಜನತೆ ಇತ್ತೀಚಿಗೆ ತಮ್ಮ ವೈಯಕ್ತಿಕ ಜೀವನ ಕಟ್ಟಿಕೊಳ್ಳಲು ಹೆಣಗಾಡುತ್ತಿರುವುದು  ನೋವಿನ ಸಂಗತಿ! ನೌಕರಿ, ಉದ್ಯೋಗವೆಂಬ ಸ್ಪರ್ಧಾತ್ಮಕತೆಯ ಜಿಜ್ಞಾಸೆಗೆ ಬಿದ್ಧು ಮಾನವ ಬದುಕಿನ ನೈಜ ಸಂತಸವನ್ನು ಕಳೆದುಕೊಳ್ಳುತ್ತಿರುವುದು ಕಂಡು ಬರುತ್ತಿದೆ, ನಿಜ ಜೀವನ ಅನುಭವಿಸಲು ಮೌಲ್ಯಾತ್ಮಕ ಶಿಕ್ಷಣದ ಅವಶ್ಯವಿದೆ ಇಂದಿನ ಯುವ ಜನತೆ ಸಮರ್ಥ ಸದೃಢ ಸರ್ವತೋಮಕ ಏಳ್ಗೆಯ ಬದುಕನ್ನು ಕಟ್ಟಿಕೊಳ್ಳಬೇಕಿದೆ.

ಪರೀಕ್ಷೆ

ಶಾಲಾ ಹಂತಗಳಿಂದ ನೌಕರಿ ಹಂತದವರೆಗಿನವರೆಗೂ ಪರೀಕ್ಷೆಗಳು ನಡೆಯುತ್ತಿವೆ ,ಮೌಲ್ಯಮಾಪನಕ್ಕಾಗಿ ಪರೀಕ್ಷೆಗಳು ಅನಿವಾರ್ಯ ಆದರೇ ಪರೀಕ್ಷೆಯೇ ಜೀವನವಲ್ಲಾ! ಪರೀಕ್ಷೆಯ ಪಲಿತಾಂಶ ಬಂದ ಬಳಿಕ ವಿದ್ಯಾರ್ಥಿಗಳು, ಯುವಜನರು ದಃಖಿತರಾಗಿ ದ್ವೀಮುಖರಾಗುತ್ತಿದ್ದಾರೆ ಕೆಲ ವಿದ್ಯಾರ್ಥಿಗಳು ಮನೆ ಬಿಟ್ಟು ಹೋದರೆ ಇನ್ನೂ ಹಲವಾರು ಕಡೆ ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆ ಗೆ ಶರಣಾಗಿದ್ಧನ್ನು ಕಂಡಿದ್ಧವೆ, ಬದುಕಿಗೆ ಪರೀಕ್ಷೆಗಳೊಂದೆ ಮೂಲ ದಾರಿಯೇ? ಪರೀಕ್ಷೆಯನ್ನು ಬರೆಯದವರೂ ಪಠ್ಯಕ್ರಮದಲ್ಲಿ ಪಾಠವಾಗಿಲ್ಲವೇ? ಶಾಲೆಯನ್ನು ನೋಡದವರು ಅವರ ಹೆಸರಿನ ಮೇಲೆ ವಿದ್ಯಾಸಂಸ್ಥೆಗಳು ಇಲ್ಲವೆ? ಒಂದೇ ಎರಡೆ ಬಹಳಷ್ಟು ಉದಾಹರಣೆಗಳನ್ನು ನೋಡಬಹುದು, ವಿದ್ಯಾರ್ಥಿ ಯುವಜನತೆ ಮೌಡ್ಯತೆಯಿಂದ ಹೊರಬರಲಿ, ಪಾಲಕರು ತಮ್ಮ ಮಕ್ಕಳು ಅಂಕಗಳಿಸುವ ಯಂತ್ರಗಳನ್ನಾಗಿ ನಿರ್ಮಾಣ ಮಾಡಬೇಡಿರಿ, ಬದಲಾಗಿ ಅಂಕಗಳಿಗೆ ಮಾದರಿಯಾಗಿ ನಿಲ್ಲುವ ಸಾಧಕರನ್ನಾಗಿ ರೂಪಿಸಬೇಕಿದೆ, ವಿದ್ಯಾರ್ಥಿಗಳು ಪಾಲಕರು ಶಾಲಾ ಶಿಕ್ಷಣದ ವ್ಯಾಸಂಗ ಬದುಕನ್ನು ಕಟ್ಟಿಕೊಳ್ಳುವ ದಾರಿಯಂದು ಅರಿಯಬೇಕೆ ಹೊರತು ಮರಣ ಶಾಸನ ಬರೆಯುವ ಯಮಧರ್ಮನ ಕೊನೆಯಲ್ಲ !.

ಅಸ್ತ್ರವಾಗಲಿ ಮೈಲು(ಮುಳ)ಗಲ್ಲು

ಸರಿಯಾದ ಮಾರ್ಗದರ್ಶನವಿಲ್ಲದೆ ಅಂಕ ಗಳಿಕೆಯಲ್ಲಿ ಹಿಂದುಳಿದು ವಿಚಿಲಿತರಾಗುವುದು, ಶ್ರೇಷ್ಠ ಉದ್ಯೋಗ ಪಡೆಯುವುದಕ್ಕಾಗಿ ಹೊರಗಿನ ಸಮಾಜ ನೋಡದೆ ಜೀವನ ಕಳೆದುಕೊಳ್ಳುವುದು, ತಾವು ಕಲಿತಿದ್ದೆ ಬೇರೆ ಈಗಿರುವ ಕೆಲಸದಲ್ಲಿ ತೃಪ್ತಿ ಕಾಣದಿರುವುದು, ಮನೆಯವರ ಸದ್ದಿಚ್ಚೆ ಪೂರೈಸದೆ ಮಕ್ಕಳು ಅಂಕಗಳಿಕೆಯ ಹಿಂದೆ ಬಿದ್ಧು ಸ್ವಾತಂತ್ರವನ್ನು
ಕಳೆದುಕೊಳ್ಳುವುದು, ಶ್ರೀಮಂತರಾಗಬೇಕೆಂಬ ಭರಾಟೆ ಸ್ವಾರ್ಥಪರ ಉದ್ಯೋಗ ಅರಸಿ ನಿಲ್ಲುವುದು, ನೌಕರಿ ಎಂಬ ಸಂಕುಚಿತ ವ್ಯವಸ್ಥೆಗೆ ಅಣಿಯಾಗುವುದು, ದೊಡ್ಡ ದೊಡ್ಡ ಹುದ್ದೆಯಲ್ಲಿ ಇರಬೇಕೆಂದು ಕುಟುಂಬ ಬಾಂಧವ್ಯವನ್ನು ಮುರಿದುಕೊಳ್ಳುವುದು ಮುಂತಾದ ಕಟ್ಟುಪಾಡಿನ ಆಶೆಗೆ ಯುವಜನತೆ ಹಾಗೂ ಕುಟುಂಬವು ಸರಿಯಾದ ದಾರಿ ಸಿಗದೆ ಕೊರಗುತ್ತಿರುವದನ್ನು ಇಂದಿಗೂ ಕಾಣುತ್ತಿದ್ದಾವೆ, ಗುರಿ ಇರಬೇಕು ಬದುಕನ್ನು ಕಟ್ಟಿಕೊಳ್ಳಲು ಹೊರತು ಇದ್ದ ಬದುಕನ್ನು ಹಾಳು ಮಾಡಲು ಅಲ್ಲ ಎಂಬುದನ್ನು ಮನಗಾಣಬೇಕಿದೆ ನಿಶ್ಚಿತ ಮೈಲುಗಲ್ಲು ಮೇಲೆ ಬರಲು ಸಹಾಯದ ಅಸ್ತ್ರವಾಗಬೇಕು ಬದಲಾಗಿ ಕಟ್ಟಿಕೊಂಡ ಕನಸು(ಗುರಿ) ಮುಳುಗಲ್ಲಾಗದಿರಲಿ.

ಉದ್ಯೋಗ

ಶಾಲಾ ಅಥವಾ ವೃತ್ತಿ ಪರ ಶಿಕ್ಷಣ ಪಡೆದುಕೊಂಡ ಮೇಲೆ ನೌಕರಿ ಬಯಸುವುದು ಸಹಜ ಆದರೆ ಪಡೆದ ವ್ಯಾಸಂಗದ ಶಿಕ್ಷಣಕ್ಕೆ ನೌಕರಿ ಕಷ್ಟ : ಸಾಧ್ಯವೇ ಹಾಗೆಂದ ಮೇಲೆ ಕಲಿತಿದ್ಧು ವ್ಯರ್ಥವೆಂಬುವುದು ತಪ್ಪು, ಶಿಕ್ಷಣ ನೀಡುವುದು ಶಿಕ್ಷಣ ಸಂಸ್ಥೆಗಳ ಕೆಲಸವೇ ಹೊರತು ಎಲ್ಲರಿಗೂ ನೌಕರಿ ಕೊಡಸುವುದಲ್ಲ ,ಅದು ನಮ್ಮ ಸ್ವ – ಸಾಮರ್ಥ್ಯಗಳ ಮೇಲೆ ಅವಲಂಬಿತವಾಗಿದೆ ಮತ್ತು ಶಿಕ್ಷಣ ಪಡೆಯುವುದು ನಮ್ಮ ಜ್ಞಾನಾರ್ಜನೆಗೆ ಹೊರತು ಉದ್ಯೋಗವೆಂಬ ವ್ಯಾಪಾರದ ವಹಿವಾಟಕ್ಕಲ್ಲ!
ಸ್ವಂತ ಸಾಮರ್ಥ್ಯದ ಮೇಲೆ ಪ್ರಯತ್ನಿಸಿ ಸರಕಾರದ ಸಂಸ್ಥೆಗಳಲ್ಲಾಗಲಿ ಅಥವಾ ಖಾಸಗಿಯ ಸಂಸ್ಥಗಳಲ್ಲಾಗಲಿ ಉದ್ಯೋಗದಲ್ಲಿ ಅರಸಿ ತೊಡಗಿಸಿಕೊಳ್ಳಬೇಕು.

ನೂರೆಂಟು ಮಾರ್ಗ

ಯಾವುದೇ ವ್ಯಾಸಂಗ ಮುಗಿಸಿದರೂ ಅದಕ್ಕೆ ತಕ್ಕಂತಹ ಉದ್ಯೋಗಗಳು ಸೃಷ್ಟಿ ಇವೆ ಅವುಗಳನ್ನು ಪಡೆದುಕೊಳ್ಳುವ ಜಾಣ್ಮೆಬೇಕು ಅಲ್ಲದೇ ಕೃಷಿ,ಹೈನುಗಾರಿಕೆ, ಕೌಶಲ್ಯಾಧರಿತ ಅನೇಕ ವೃತ್ತಿಗಳನ್ನು ಮಾಡಬಹುದು ಇತ್ತೀಚೆಗೆ ಸರಕಾರ ಹಾಗೂ ಸಂಘ ಸಂಸ್ಥೆಗಳು, ಕಂಪನಿಗಳು ಅನೇಕ ರೀತಿಯ ಉದ್ಯೋಗಗಳ ಅವಕಾಶಗಳನ್ನು ನೀಡಿವೆ ಯಾವುದೇ ಪ್ರತಿಭೆಯಾಗಲಿ ಪ್ರತಿಫಲವಿದೆ, ಹುಡುಕಿ ತೊಡಗಿಸಿಕೊಳ್ಳುವ ಪ್ರಯತ್ನ ನಮ್ಮದಾಗಬೇಕು, ಸರಕಾರವಂತೂ ಪ್ರತಿವರ್ಷ ಪ್ರತಿ ತಾಲೂಕ ಹಂತದಲ್ಲಿ ಉದ್ಯೋಗ ಮೇಳಗಳನ್ನು ವಿವಿಧ ಇಲಾಖೆಗಳ ಮೂಲಕ ಮಾಡುತ್ತಿರುವುದು ಶ್ಲಾಘನೀಯ, ಅಲ್ಲದೇ ಸುದ್ಧಿ ಮಾಧ್ಯಮಗಳು ಉದ್ಯೋಗ ಅವಕಾಶಗಳನ್ನು ನಿರಂತರ ಪ್ರಕಟಿಸುತ್ತಿವೆ.

ಸ್ವಾವಲಂಬನೆ ಮೂಡಲಿ

ತಾವು ನಿಶ್ಚತ ಉದ್ಯೋಗದ ಆಯ್ಕೆಯನ್ನು ಬಯಸಿ ಸರಿಯಾದ ಶಿಕ್ಷಣ ಪಡೆದುಕೊಂಡು ಹೆಜ್ಜೆ ಇಡುವುದು ಸೂಕ್ತವಾಗಿದೆ, ಇದರಿಂದ ಹಲುವಾರು ನೌಕರಿಗಳನ್ನು ಸೃಷ್ಟಿ ಮಾಡಬಹುದು ಯಾವ ವ್ಯವಸ್ಥೆಗೂ ಜೋತು ಬೀಳದೆ ಬದುಕಿಗೆ ಸೇತುವೆಯಾಗುವ ಉದ್ಯೋಗ ಕಂಡುಕೊಳ್ಳಬೇಕು.

ಕೌಶಲ್ಯ ತರಬೇತಿಗಳು ನಡೆಯಲಿ

ಜೀವನ ಅನುಭವಿಸಲು ಸರಿಯಾದ ಮಾರ್ಗದರ್ಶನದ ಮೌಲ್ಯಾತ್ಮಕ ಶಿಕ್ಷಣದ ಅವಶ್ಯವಿದೆ ಸರಕಾರ ಹಾಗೂ ಸಂಘ ಸಂಸ್ಥೆಗಳು ಕೌಶಲ್ಯ ತರಬೇತಿಗಳನ್ನು ಶಾಲಾ ಹಂತದ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ನೆಡಸಲಿ ಆ ಮೂಲಕ ಮಾನವ ಬದುಕಿನ ಒತ್ತಡದ ಜೀವನ ಕೊನೆಯಾಗುವ ಪರಿಹಾರ ದೊರಕಲಿ ಅಲ್ಲದೆ ಮುಂದುವರೆಕೆ ಶಿಕ್ಷಣದ ಕೇಂದ್ರದ ಹಾಗೆ ಪ್ರತಿ ಗ್ರಾಮೀಣ ಪ್ರದೇಶಗಳಲ್ಲಿ ಕೌಶಲ್ಯ ಕೇಂದ್ರಗಳನ್ನು ತೆರೆಯಲಿ ಕಲಿತವರಿಗೂ ಕಲಿಯಲಾರದವರಿಗೂ ಎಲ್ಲಾ ರೀತಿಯ ಮಾರ್ಗದರ್ಶನ ನೀಡುವ ಶಾಲೆಯಾಗಬೇಕು.

“ನಿಮ್ಮ ಕೈಯಲ್ಲಿದೆ ಭವಿಷ್ಯ
ಒತ್ತಡಕ್ಕೆ ಜೋತು ಬಿದ್ಧು
ಕಡಿಮೆಯಾಗದಿರಲಿ ಆಯುಷ್ಯ”

ವಿದ್ಯಾರ್ಥಿ ಯುವ ಜನರು ಜೀವನದ ಸಾರ್ಥಕ ಬದುಕನ್ನು ಬಾಳಲು ಅರಿಯಬೇಕಿದೆ, ಪಡೆದುಕೊಂಡ ಶಿಕ್ಷಣ  ಬದುಕಿಗೆ ಅನ್ನವಾಗಬೇಕು, ಸ್ಪರ್ಧಾತ್ಮಕ ಯುಗದಲ್ಲಿ ಮಾನವೀಯ ಮೌಲ್ಯಗಳನ್ನು ಕಳೆದುಕೊಂಡು ಕೊರಗಿ ಸಾಯುವದಕ್ಕಿಂತ ಸಂಸ್ಕಾರಯುತ  ಜೀವನ ಕಂಡುಕೊಂಡು ಮಾದರಿಯಾಗಬೇಕು, ಯುವಜನರು ಉದ್ಯೋಗದ ಹುಡಕಾಟದ ಬರಾಟೆಯಲ್ಲಿ ತಮ್ಮ ಸ್ವಂತ ಅಸ್ತಿತ್ವವನ್ನು ಮರೆಯುತ್ತಿದ್ಧಾರೆ,  ಅರಿವಿನೊಂದಿಗೆ ಗುರಿ ತಲುಪಿ ಮನುಜ ಕುಲದ ನೆಲೆ ಉಳಿಸಲಿ.

  • ಶ್ರೀಮತಿ ಭಾಗ್ಯ ಶ್ರೀ ಗವಿಶಿದ್ಧಯ್ಯ ಹಳ್ಳಿಕೇರಿಮಠ,
    ಚುಟುಕು ಸಾಹಿತಿಗಳು, ಜಂತಲಿ ಶಿರೂರು.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ