ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಿಜೆಪಿ ಎಸ್ ಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿ ಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಿದರು.ಮೈಸೂರಿನ ಲಲಿತ್ ಮಹಲ್ ಹೋಟೆಲ್ ನಲ್ಲಿ ಶನಿವಾರ ಆಯೋಜಿಸಿದ್ದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಉದ್ಘಾಟಿಸಿದರು ಬಿಜೆಪಿ ಎಸ್ಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಲಾಲ್ ಸಿಂಗ್ ಆರ್ಯ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ರಾಷ್ಟ್ರೀಯ ಸಂಘಟನಾ ಸಂಘಟಕ ದಶಾಂತ್ ಕುಮಾರ್ ಗೌತಮ್ ಡಾಕ್ಟರ್ ಸಂಜಯ್ ಪಾಸ್ವಾನ್ ರಾಮಪಟ್ಟಿ ಶಾಸ್ತ್ರಿ ಮೇಯರ್ ಶಿವಕುಮಾರ್ ಹಾಗೂ ಇತರರು ಸಭೆಯಲ್ಲಿ ಭಾಗವಹಿಸಿದ್ದರು. ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯಗಳು ಭಾರತದ ಸಂಸ್ಕೃತಿಯ ಪ್ರತಿಬಿಂಬಿಸುವ ಪ್ರಮುಖ ಭಾಗವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು.ಪರಿಶಿಷ್ಟ ಜಾತಿ ಪಂಗಡ ಸಮುದಾಯವು ಭಾರತದ ಪ್ರಮುಖ ಸಾಮಾಜಿಕ ಅಂಗವಾಗಿದ್ದು ಇಲ್ಲಿನ ಸಾಮಾಜಿಕ ತಳಹದಿಯೂ ಹೌದು ಎರಡೂ ಸಮುದಾಯಗಳು ದೇಶದ ಆಸ್ಮತೆಯಾಗಿವೆ ಎಂದರು.ನಾನು ರಸ್ತೆ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನವನ್ನು ಕೊಡಬಹುದು ಆದರೆ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಜಲ್ಲಿ,ಡಾಂಬರ್ ಹಾಕುವವರು ಜನರು ಅವರ ಶ್ರಮ ಏನೆಂಬುವುದು ನನಗೆ ಗೊತ್ತು ತಳಹದಿಯಲ್ಲಿ ಕೆಲಸ ಮಾಡುವವರು ಈ ದೇಶದ ಅರ್ಥ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ದೇಶದ ಅಭಿವೃದ್ಧಿಯು ಈ ದುಡಿಯುವ ವರ್ಗದ ಕೈಯಲ್ಲಿದೆ ಎಂಬುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು.ಇದರಲ್ಲಿ ಪರಿಶಿಷ್ಟ ಜನಾಂಗ ಮತ್ತು ವರ್ಗದವರು ಹೆಚ್ಚಾಗಿದ್ದಾರೆ ಎಂಬುದನ್ನು ಮುಖ್ಯಮಂತ್ರಿಗಳು ನೋಡಿದರು ಈ ಸಮುದಾಯ ಆರ್ಥಿಕವಾಗಿ ಸಾಮಾಜಿಕವಾಗಿ ಸದೃಢವಾಗಬೇಕಾಗಿದೆ, ಸಾಮಾಜಿಕ ನ್ಯಾಯ,ಸಮಾನತೆ ಸ್ವಾಲಂಬಿಯಾಗಿ ಗೌರವಿತವಾಗಿ ಬದುಕುವಂತಾಗಬೇಕು ಅವರು ಸಮಾಜದ ಮುಖ್ಯ ವಾಹಿನಿಗೆ ಬರಬೇಕಾಗಿದೆ ನಾವು ಯಾರಿಗಂತಲೂ ಕಡಿಮೆ ಇಲ್ಲ ಅನುಕಂಪ ಅಗತ್ಯವಿಲ್ಲ ಎಂಬ ಮನೋಭಾವನೆ ಮುನ್ನಡೆಯಬೇಕು ಎಂದು ಬಸವರಾಜ್ ಬೊಮ್ಮಾಯಿ ನುಡಿದರು ಎಸ್ ಸಿ – ಎಸ್ ಟಿ ಸಮುದಾಯಗಳಿಗೆ ಸಂವಿಧಾನದ ಆಶಯದಂತೆ ಮೀಸಲಾತಿ ನೀಡಲಾಗಿದೆ ಬಿಜೆಪಿ ಸರ್ಕಾರವು ಈ ವರ್ಗಗಳಿಗೆ ಮತ್ತಷ್ಟು ಸೌಲಭ್ಯ ಕಲ್ಪಿಸುತ್ತದೆ.
ಸಮಗ್ರ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಪ್ರಕ್ರಿಯೆ ಆರಂಭಿಸಿದೆ ಎಂದು ಅವರು ಇದೇ ವೇಳೆ ನುಡಿದರು ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಶ್ರೇಷ್ಠ ಸಾಮಾಜಿಕ ವಿಜ್ಞಾನಿ ನಾನು ಸಹ ಅಂಬೇಡ್ಕರ್ ವಾದಿ ಎಂದು ಗೌರವದಿಂದ ಹೇಳುತ್ತೇನೆ ಅವರೊಬ್ಬರು ಚಿಂತಕ ಆರ್ಥಿಕ ಅಲ್ಲದೆ ಅವರು ನಂಬರ್ ಒನ್ ದೇಶ ಭಕ್ತರಾಗಿದ್ದರು ಅವರು ಸಂಸತ್ತಿಗೆ ಬರಲು ಅವಕಾಶ ನೀಡದ ಕಾಂಗ್ರೆಸ್ ಪಕ್ಷವು ನಂತರ ವರ್ಷಗಳಲ್ಲಿ ಅಂಬೇಡ್ಕರ್ ಅವರನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯಲು ಹವಳಿಸುತ್ತಿದೆ ಎಂದು ನಡೆದರು ಪರಿಸ್ಥಿತಿ ಮತ್ತು ಪಂಗಡ ಭಾರತದ ಆಸ್ಮತೆಯ ಒಂದು ಭಾಗವಾಗಿದೆ ಎಂದರು.
-ಜಾಕೀರ್ ಹುಸೇನ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.