ಕಲಬುರಗಿ / ಚಿತ್ತಾಪುರ: ಪಟ್ಟಣದ ಹಳೆಯ ಕೋರ್ಟ್ ಎದುರುಗಡೆಯ ಟೈರ್ ಪಂಚರ್ ಅಂಗಡಿ ಹತ್ತಿರ ವ್ಯಕ್ತಿಯೋರ್ವನ ಶವ ಪತ್ತೆಯಾಗಿರುವ ಘಟನೆ ಜರುಗಿದೆ.
ಮುಖಕ್ಕೆ ಗಾಯಗಳಾಗಿದ್ದು, ಕೊಲೆ ಮಾಡಿದ್ದಾರೆಯೇ ಅಥವಾ ಏನಾಗಿದೆ? ಈ ವ್ಯಕ್ತಿ ಎಲ್ಲಿಯವ? ಇಲ್ಲಿಗೇಕೆ ಬಂದ ಎನ್ನುವುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸಿಪಿಐ ಚಂದ್ರಶೇಖರ ತಿಗಡಿ, ಪಿ ಎಸ್ ಐ ಶ್ರೀಶೈಲ್ ಅಂಬಾಟಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ, ವ್ಯಕ್ತಿಯ ಪ್ಯಾಂಟ್, ಶರ್ಟ್ ಹಾಗೂ ಪಕ್ಕದಲ್ಲಿಯೇ ಬಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲನೆ ನಡೆಸಿದರು.
ಕೊಲೆಯಾಗಿದೆ ಎನ್ನುವ ವಿಷಯ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ ಕುತೂಹಲ ಹಾಗೂ ಆತಂಕದಿಂದ ಜನರು ತಂಡೋಪ ತಂಡವಾಗಿ ನೋಡಲು ಘಟನಾ ಸ್ಥಳದಲ್ಲಿ ಜಮಾಯಿಸಿದ್ದಾರೆ.
ವರದಿ ಮೊಹಮ್ಮದ್ ಅಲಿ, ಚಿತ್ತಾಪುರ
