ಹನೂರು:ವಿದ್ಯೆಯನ್ನು ಸಂಪಾದನೆ ಮಾಡಬೇಕಾದರೆ ಒಳ್ಳೆಯ ಗುರುವಿರಬೇಕು ಹಾಗೆಯೇ ಮುಂದೆ ಗುರಿಯಿರಬೇಕು ಸಮಾಜದಲ್ಲಿ ಪ್ರತಿಯೊಬ್ಬರೂ ಶಿಕ್ಷಣ ವಂತರಾದರೆ ಮಾತ್ರ ಉನ್ನತ ಮಟ್ಟಕ್ಕೇರಲು ಸಾದ್ಯ ಇಂದು ನಮ್ಮ ಗುರುಗಳು ನೀಡಿದ ಬೋಧನೆಯಿಂದ ನಾವು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ತಲುಪಿದ್ದೇವೆ ಎಂದು ಹಳೆಯ ವಿಧ್ಯಾರ್ಥಿಗಳು ತಿಳಿಸಿದರು.ಕುರಟ್ಟಿ ಹೊಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಹಮ್ಮಿಕೊಂಡಿರುವ ಹಳೆಯ ವಿದ್ಯಾರ್ಥಿಗಳ 25 ವರ್ಷಗಳ ಶೈಕ್ಷಣಿಕ ಪಯಾಣದ ಸ್ಮರಣೆಯ ಅಂಗವಾಗಿ ಇದೇ ಶಾಲೆಯಲ್ಲಿ ಓದಿರುವ ಎಲ್ಲಾ ವಿದ್ಯಾರ್ಥಿಗಳು ಒಟ್ಟುಗೂಡಿ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದದವರಿಗೂ ಸೇರಿಸಿ ಗೌರವಾರ್ಥ ಈ ಕಾರ್ಯಕ್ರಮವನ್ನು ಮಾಡಲಾಗುವುದು ಇದೇ ತಿಂಗಳ ಹದಿನಾರನೆ ತಾರೀಖಿನಂದು 9:30 ಘಂಟೆಗೆ ಕಾರ್ಯಕ್ರಮವನ್ನು ಕುರಟ್ಟಿಹೊಸೂರು ಶಾಲೆಯಲ್ಲಿ ನಿಗದಿಪಡಿಸಲಾಗಿದೆ ಎಲ್ಲರೂ ಸಕಾಲದಲ್ಲಿ ಆಗಮಿಸಬೇಕಾಗಿ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಹಳೆಯ ವಿದ್ಯಾರ್ಥಿಗಳು ತಿಳಿಸಿದರು ಇದೇ ಸಮಯದಲ್ಲಿ ಎಲ್ಲಾ ಹಳೆಯ ಮತ್ತು ಪ್ರಸ್ತುತ ವಿದ್ಯಾಭ್ಯಾಸ ಮಾಡುತ್ತಿರುವ ವಿಧ್ಯಾರ್ಥಿಗಳು ಹಾಜರಿದ್ದರು
ವರದಿ ಉಸ್ಮಾನ್ ಖಾನ್.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.