ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿಯ ಸಂಸ್ಥಾಪಕರಾದ ಜಿ.ಜನಾರ್ದನ ರೆಡ್ಡಿ ಅವರ 56ನೇ ವರ್ಷದ ಹುಟ್ಟುಹಬ್ಬ ಸಮಾರಂಭ ಕಾರ್ಯಕ್ರಮವನ್ನು ಆಶ್ರಮದಲ್ಲಿ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ನೆರವೇರಿಸಿದರು.ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಂಧನೂರು ವಿಧಾನಸಭಾ ಕ್ಷೇತ್ರದ ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿಯ ಮುಖಂಡರಾದ ಮಲ್ಲಿಕಾರ್ಜುನ ನೆಕ್ಕಂಟಿ ಮಾತನಾಡಿ ಸಿಂಧನೂರಿನ ಕರುಣಾಮಯಿ ಕಾರುಣ್ಯ ಆಶ್ರಮಕ್ಕೆ ಕೆ.ಆರ್.ಪಿ. ಪಕ್ಷದಿಂದ ನಿರಂತರ ನೆರವು ಒದಗಿಸುತ್ತೇವೆ.ನಮ್ಮ ಪಕ್ಷದ ಸಂಸ್ಥಾಪಕರಾದ ಜನಾರ್ದನ ರೆಡ್ಡಿ ಇಂತಹ ಆಶ್ರಮದಲ್ಲಿ ಆಶ್ರಯ ಪಡೆದಿರುವ ಹಿರಿಯ ಜೀವಿಗಳ ಆಶೀರ್ವಾದವನ್ನು ಸದಾ ಬಯಸುತ್ತಾ ಅನೇಕ ಸಮಾಜ ಪರ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಅನೇಕ ಉದಾಹರಣೆಗಳು ನಮ್ಮ ನಾಡಿಗೆ ಮಾದರಿಯಾಗಿವೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಹುಟ್ಟಿದಾಗಿನಿಂದಲೂ ಸಹ ಬೇರೆ ಪಕ್ಷಗಳಿಗೆ ನಡುಕ ಉಂಟಾಗಿದೆ ನಮ್ಮ ಸಿಂಧನೂರು ಅಲ್ಲದೆ ರಾಜ್ಯದಲ್ಲಿ ಮನೆಮನೆ ಮಾತಾಗಿರುವ ಈ ಕಾರುಣ್ಯ ಆಶ್ರಮ ನಮ್ಮೆಲ್ಲರ ಹೆಮ್ಮೆಯ ಕರುಣಾಮಯಿ ಕುಟುಂಬವಾಗಿದೆ.ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದ್ದೇ ಆದರೆ ಆಶ್ರಮಕ್ಕೆ ಸರ್ಕಾರದ ಸವಲತ್ತುಗಳನ್ನು ಒದಗಿಸುವ ಮೂಲಕ ವೈಯಕ್ತಿಕ ಸಹಾಯ ಮಾಡುವುದರಲ್ಲಿ ಎರಡು ಮಾತಿಲ್ಲ ಜನಾರ್ದನ ರೆಡ್ಡಿ ಅವರು ಸಹ ಈ ಕಾರುಣ್ಯ ಆಶ್ರಮಕ್ಕೆ ಒಮ್ಮೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. ಜೊತೆಯಲ್ಲಿ ಅವರ ಇಡೀ ಕುಟುಂಬ ಈ ಕಾರುಣ್ಯ ಆಶ್ರಮದ ಭೇಟಿಗಾಗಿ ಕಾಯುತ್ತಿದೆ ಜನರು ಕೂಡಾ ಬದಲಾವಣೆ ಬಯಸಿ ಜನಾರ್ದನ ರೆಡ್ಡಿ ಅವರಿಗೆ ಆಶೀರ್ವಾದ ಮಾಡುವುದರ ಮೂಲಕ ನಮ್ಮ ನಾಡಿನ ಅಭಿವೃದ್ಧಿಗೆ ನಾಡಿನ ಜನರು ಕಾರಣರಾಗುತ್ತಾರೆ.ಈ ಆಶ್ರಮದಲ್ಲಿನ ಎಲ್ಲಾ ಹಿರಿಯರ ಆಶೀರ್ವಾದ ನಮ್ಮ ಜನಾರ್ದನ ರೆಡ್ಡಿ ಅವರ ಮೇಲಿರಲಿ ಈ ಕಾರುಣ್ಯ ಕುಟುಂಬದಲ್ಲಿ ಆಶ್ರಯ ಪಡೆದಿರುವ ಹಿರಿಯರು ನನ್ನ ತಂದೆ ತಾಯಿಗಳಿಗೆ ಸಮಾನ ಇವರೆಲ್ಲರ ಋಣ ತೀರಿಸುವ ಅವಕಾಶ ನನಗೆ ಒದಗಿ ಬಂದಿರುವುದು ಬಹಳ ಸಂತೋಷವಾಗಿದೆ.ನಮ್ಮ ಜನಾರ್ದನ ರೆಡ್ಡಿ ಅವರ ಶ್ರೀಮತಿ ಅರುಣಾಲಕ್ಷ್ಮಿ ಅವರು ಈ ಕಾರುಣ್ಯ ಆಶ್ರಮಕ್ಕೆ ಭೇಟಿ ನೀಡಿದರೆ ಇಲ್ಲಿನ ಎಲ್ಲಾ ಕುಂದುಕೊರತೆಗಳಿಗೆ ಶಾಶ್ವತ ಪರಿಹಾರ ದೊರೆಯುತ್ತದೆ ಎಂದು ಮಾತನಾಡಿದರು ಈ ಕಾರ್ಯಕ್ರಮದಲ್ಲಿ ಕಾರುಣ್ಯಾಶ್ರಮದ ಗೌರವಾಧ್ಯಕ್ಷರಾದ ಶರಣು. ಪಾ.ಹಿರೇಮಠ ಅಧ್ಯಕ್ಷತೆ ವಹಿಸಿದ್ದರು ಈ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ನೆಕ್ಕಂಟಿ ಅವರನ್ನು ಕಾರುಣ್ಯ ಆಶ್ರಮದ ವತಿಯಿಂದ ಸನ್ಮಾನಿಸಿ ಗೌರವಿಸಿ ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಕಾರುಣ್ಯಾಶ್ರಮದ ಕಾರ್ಯಾಧ್ಯಕ್ಷರಾದ ವೀರೇಶ ಯಡಿಯೂರ ಮಠ. ಆಡಳಿತ ಅಧಿಕಾರಿಗಳಾದ ಡಾ.ಚನ್ನಬಸವ ಸ್ವಾಮಿ,ಸುಜಾತ,ಸಮಾಜಸೇವಕರಾದ ಮುತ್ತು ಪಾಟೀಲ್.ವಿರೂಪಾಕ್ಷಿ ಹಿರೇಮಠ,ಮಹೇಶ,ಸುರೇಶ ಬಂಡಿ,ಸಿದ್ರಾಮಯ್ಯ ಹಿರೇಮಠ,ವೀರೇಶ ಅಂಗಡಿ,ಸಾಯಿಕುಮಾರ,ನಾಗನಗೌಡ,ರವಿ ರಡ್ಡಿ,ಮಹೇಶ ಅಂಗಡಿ,ಅಮರ ಹಿರೇಮಠ,ವಿಶ್ವ ಹಿರೇಮಠ,ಮನೋಜ್,ಯಶವಂತ ರಡ್ಡಿ,ಕಿರಣ್ ಕುಮಾರ,ಉದಯಕುಮಾರ, ರಾಕೇಶ, ವೆಂಕಟೇಶ,ಯಮನೂರ ಉಪ್ಪಾರ,ಪವನ ಕೋಟೆ,ಸಮೀರ್ ಹಾಗೂ ಕಲ್ಯಾಣ ರಾಜ್ಯ ಪ್ರಗತಿಪಕ್ಷದ ಮುಖಂಡರುಗಳು ಭಾಗವಹಿಸಿದ್ದರು
ವರದಿ:ವೆಂಕಟೇಶ.ಹೆಚ್.ಬೂತಲದಿನ್ನಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.