ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್‌ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ

ರಾಷ್ಟ್ರೀಯ ಯುವ ದಿನದ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ

ಚಾಮರಾಜನಗರ/ಕೊಳ್ಳೇಗಾಲ:ಉದ್ಘಾಟಿಸಿದ ಶ್ರೀಲೋಕಪ್ಪ ಎನ್.ಆರ್ ಗೌರವಾನ್ವಿತ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಕೊಳ್ಳೇಗಾಲ ಪಟ್ಟಣದ ಶ್ರೀಮಹದೇಶ್ವರ ಪ್ರಥಮ ದರ್ಜೆ ಕಾಲೇಜು ಕೊಳ್ಳೇಗಾಲದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕಂಡ ಶ್ರೇಷ್ಟ ನಾಯಕ,ಯುವಕರೇ ದೇಶದ ದೊಡ್ಡ ಆಸ್ತಿ ಎಂದು ನಂಬಿದ ದೊಡ್ಡ ಶಕ್ತಿ ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ಗೌರವಿಸಲು ಪ್ರತಿ ವರ್ಷ ಜನವರಿ ೧೨ರಂದು ರಾಷ್ಟಿಯ ಯುವ ದಿನವನ್ನು ಆಚರಿಸಲಾಗುತ್ತಿದೆ ಎಂದು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ.ಲೋಕಪ್ಪ.ಎನ್.ಆರ್,ರವರು ತಿಳಿಸಿದರು.
ಪಟ್ಟಣದ ಶ್ರೀ.ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್,ಎನ್.ಎಸ್.ಎಸ್.ಘಟಕಗಳು,ತಾಲ್ಲೂಕು ಕಾನೂನು ಸೇವೆಗಳ ಸಮಿತಿ,ವಕೀಲರ ಸಂಘ, ಅಭಿಯೋಜನ ಇಲಾಖೆ ಕೊಳ್ಳೇಗಾಲ ಇವರ ಸಹಯೋಗದಲ್ಲಿ ನಡೆದ“ರಾಷ್ಟ್ರೀಯ ಯುವ ದಿನ” ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವ ದಿನವನ್ನು ದೇಶದ ಯುವಕರು ಉತ್ತಮ ವ್ಯಕ್ತಿಯಾಗಲು, ದೇಶದ ಅಭಿವೃದ್ದಿಗಾಗಿ

ಶ್ರಮಿಸಿ

ಜೀವನ ನಡೆಸಲು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಆಚರಿಸಲಾಗುತ್ತದೆ.
೧೯೮೪ರಲ್ಲಿ ಭಾರತ ಸರ್ಕಾರವು ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲು ನಿರ್ಧರಿಸಿತು ಅಲ್ಲಿಂದ ಇಲ್ಲಿಯವರೆಗೂ ಯುವಕರ ಸ್ಪೂರ್ತಿ ಚಿಲುಮೆ ಸ್ವಾಮಿ ವಿವೇಕಾನಂದರವರ ಹುಟ್ಟಿದ ದಿನವನ್ನು ಯುವ ದಿನವನ್ನಾಗಿ ಆಚರಿಸಲಾಗುತ್ತಿದೆ.
ರಾಷ್ಟ್ರದ ಯುವಕರನ್ನು ಪ್ರೇರೇಪಿಸುವ ಮತ್ತು ಸಬಲೀಕರಣಗೂಳಿಸುವ ಪ್ರಯತ್ನವಾಗಿದೆ.ಸ್ವಾಮಿ ವಿವೇಕಾನಂದರು ಜನವರಿ ೧೨ ೧೮೬೩ರಂದು ಕೋಲ್ಕತ್ತಾದಲ್ಲಿ ಜನಿಸಿದರು ಇತರ ಸನ್ಯಾಸಿಗಳಂತೆ ಇರದ ಇವರು ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ಯುವ ದನಿಯಾದರು.
ವಿವೇಕಾನಂದರು ಶ್ರೀ.ರಾಮಕೃಷ್ಣ ಪರಮಹಂಸರ ಕಟ್ಟಾ ಶಿಷ್ಯಯಾಗಿದ್ದರು ಮತ್ತು ಅವರು ತಮ್ಮ ಉಪನ್ಯಾಸಗಳ ಮೂಲಕ ದೇಶದ್ಯಾಂತ ಯುವ ಪ್ರಜ್ನೆಯನ್ನು ಹೆಚ್ಚಿಸಲು ಸಹಾಯ ಮಾಡಿದರು. ವಿವೇಕಾನಂದರು ೧೮೯೩ರಲ್ಲಿ ಶಿಕಾಗೋದಲ್ಲಿ ವಿಶ್ವ ಧರ್ಮ ಸಂಸತ್ತಿನಲ್ಲಿ ನೀಡಿದ ಭಾಷಣವು ಇನ್ನೂ ಕೂಡ ಪ್ರಸಿದ್ದ ಭಾಷಣವಾಗಿ ಉಳಿದಿದೆ ಎಂದರು.
ನಂತರ ವಕೀಲರಾದ ಶ್ರೀಮತಿ ನಿರ್ಮಲಾ ಮಧುಸೂದನ್ ರವರು ಮಾತನಾಡಿ ಶಿಕ್ಷಣ ಮತ್ತು ಮಾನವ ಸಬಲೀಕರಣವನ್ನು ಎತ್ತಿ ಹಿಡಿದರು, ನಿಸ್ವಾರ್ಥತೆ ಮತ್ತು ಮಾನವೀಯತೆಯ ಸೇವೆಯ ಮೂಲಕ ಮಾತ್ರ ಒಬ್ಬರು ನಿಜವಾಗಿಯೂ ಧರ್ಮ ಮತ್ತು ದೇವರನ್ನು ಕಂಡುಕೊಳ್ಳಬಹುದು ಎಂದು ಅವರು ನಂಬಿದ್ದರು ಮತ್ತು ಅದನೇ ಜನತೆಗೂ ಮನನ ಮಾಡಿಸುತ್ತಿದ್ದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಪರ ಸಿವಿಲ್ ನ್ಯಾಯಾಧೀಶರಾದ ಶ್ರೀ.ರಘು.ಸಿ.ಜೆ. ಸಹಾಯ ಸರ್ಕಾರಿ ಅಭಿಯೋಜಕರಾದ ಶ್ರೀ.ಪ್ರಶಾಂತ್.ಎನ್, ವಕೀಲರ ಸಂಘದ ಅಧ್ಯಕ್ಷರಾದ ಶ್ರೀ.ಡಿ.ಎಸ್.ಬಸವರಾಜು, ಕಾರ್ಯದರ್ಶಿ ಶ್ರೀ.ಮೋಹನ್‌ಕುಮಾರ್.ಎಂ. ಹಿರಿಯ ವಕೀಲರಾದ ಎಸ್.ನಾಗರಾಜು, ಶ್ರೀ.ಮಹದೇಶ್ವರ ಕಾಲೇಜ್‌ನ ಪ್ರಾಂಶುಪಾಲರಾದ ಶ್ರೀಮತಿ ಜಯಲಕ್ಷ್ಮೀ.ಬಿ ಹಾಗೂ ಪ್ರಾಧ್ಯಾಪಕರುಗಳಾದ ಡಾ . ಸುಧಾ, ನಂಜುಂಡ ಸ್ವಾಮಿ, ಡಾ.ಆನಂದ್ , ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು
ವರದಿ:ಪ್ರದೀಪ್ ಕುಮಾರ್ ಕೆ
ಕಾಂಚಳ್ಳಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ