ಬೆಂಗಳೂರು :ವಿಶ್ವ ವಿಖ್ಯಾತ ವಿಧಾನಸೌಧಕ್ಕೆ ಶ್ರೀ ಯು ಟಿ ಖಾದರ್ ಅವರು ಅಧ್ಯಕ್ಷರಾದ ಮೇಲೆ ದಿನಕ್ಕೊಂದು ಆಕರ್ಷಣೆಯ ವೈಭವ ಕಾಣಿಸಿಕೊಳ್ಳುತ್ತಿದ್ದು ಕವಿಗಳಿಗೆ, ಓದುಗರಿಗೆ ಮತ್ತು ಲೇಖಕರಿಗೆ ಅಪ್ಯಾಯಮಾನವಾದ ಪುಸ್ತಕ ಪ್ರದರ್ಶನ ಮತ್ತು ಪ್ರವಾಸಿಗರಿಗೆ ವಿಧಾನಸೌಧಕ್ಕೆ ವಿವಿಧ ಬಣ್ಣಗಳ ದೀಪಾಲಂಕಾರಗಳನ್ನು ಪ್ರತಿ ಶನಿವಾರ ಮತ್ತು ಭಾನುವಾರಗಳಂದು ಜಗ ಜಗಿಸುವಂತಹ ವ್ಯವಸ್ಥೆ ಮಾಡಿಸಿರವುದಲ್ಲದೆ ವಿಧಾನಸೌಧಕ್ಕೆ ಆನ್ ಲೈನ್ ಮೂಲಕ ಪ್ರವೇಶಕ್ಕೆ ಬುಕಿಂಗ್ ಸೌಲಭ್ಯಗಳನ್ನು ಏರ್ಪಡಿಸುವ ಮೂಲಕ ಜನ ಮಾನಸದಲ್ಲಿ ಅಚ್ಚ ಹಸಿರಾಗಿ ಬೆಳಗಿದ್ದಾರೆ.
ವಿಧಾನಸೌಧ ಎದುರು ಇಂದು ಯಾರು ಬೇಕಾದರೂ ಸಂಭ್ರಮಿಸಬಹುದಾದ ಕ್ಷಣಗಳನ್ನು ಸೃಷ್ಟಿಸಿದ ಆ ಅಗೋಚರ ಬ್ರಹ್ಮರಿಗೆ ಒಂದು ಸಲ್ಯೂಟ್…
