ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಿಂಧನೂರಿನ ಕಾರುಣ್ಯ ಆಶ್ರಮ ನಡೆದು ಬಂದ ದಾರಿ…

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಹರೆಟನೂರು ಗ್ರಾಮದ ಆದಿಶಕ್ತಿ ಶ್ರೀದ್ಯಾವಮ್ಮ ದೇವಿಯ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ಅಮರಯ್ಯ ಸ್ವಾಮಿ ಹಿರೇಮಠ ಇವರು ದೇವಿಯ ಅರ್ಚನೆಯ ಮಂಗಳ ಆರತಿಗೆ ಬರುವಂತಹ ಹಣ ಹಾಗೂ ದವಸ ಧಾನ್ಯಗಳು ಅನಾಥರಿಗೆ ಹಾಗೂ ಬುದ್ಧಿಮಾಂದ್ಯ ಮಕ್ಕಳಿಗೆ ಉಪಯೋಗ ಆಗಲೆಂದು ಈ ಸಂಸ್ಥೆ ಹುಟ್ಟು ಹಾಕಿದರು.ಈ ಸಂಸ್ಥೆಗೆ ಅವರ ಮಗನಾದ ಚನ್ನಬಸಯ್ಯ ಸ್ವಾಮಿ ಹಿರೇಮಠ ಅವರನ್ನು ಆಡಳಿತಾಧಿಕಾರಿ ಆಗಿ ನೇಮಿಸಿ ಈ ಟ್ರಸ್ಟಿನ ಎಲ್ಲಾ ಜವಾಬ್ದಾರಿಯನ್ನು ಕಾನೂನಾತ್ಮಕವಾಗಿ ವಹಿಸಿದ್ದರು.ಈ ಸಂಸ್ಥೆ ಪ್ರಾರಂಭಗೊಳಿಸುವಾಗ ಶರಣು.ಪಾ. ಹಿರೇಮಠ ಅವರು ಗೌರವ ಅಧ್ಯಕ್ಷರನ್ನಾಗಿ ವೀರೇಶ ಯಡಿಯೂರು ಮಠ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ಡಾ. ಚನ್ನನಗೌಡ .ಆರ್. ಪಾಟೀಲ ಅವರು ಮೇಲ್ವಿಚಾರಣೆ ಅಧ್ಯಕ್ಷರನ್ನಾಗಿ ಬಸಿರ್ ಯತ್ಮಾರಿ ಅವರನ್ನು ಕೋಶಾಧ್ಯಕ್ಷರನ್ನಾಗಿ ನೇಮಿಸಿಕೊಂಡು ಅನಾಥ ಪರ ಸೇವೆ ಹಾಗೂ ವಿವಿಧ ಸಮಾಜ ಸೇವೆಯ ಕಾರ್ಯಕ್ರಮಗಳನ್ನು ರೂಪಿಸಿದರು.8-2-2018 ರಲ್ಲಿ ಕುಷ್ಟಗಿ ರಸ್ತೆಯಲ್ಲಿ ಎಸ್ ಎಲ್ ವಿ ಹೋಟೆಲ್ ಹಿಂದುಗಡೆ ಇರುವ ಕಟ್ಟಡದಲ್ಲಿ ಸುಮಾರು ತಿಂಗಳಿಗೆ 15000 ಬಾಡಿಗೆ ರೂಪದಲ್ಲಿ ಪ್ರಾರಂಭಿಸಿದರು.ಈ ಸಂಸ್ಥೆ ಎಲ್ಲಾ ಚಟುವಟಿಕೆಗಳು ನಿರಂತರವಾಗಿ ಕಾರುಣ್ಯ ಜೋಳಗೆ ಆನಾಥರ ಬಾಳಿಗೆ ಎನ್ನುವ ಅಭಿಯಾನ ಮುಂದುವರಿಸಿಕೊಂಡು ಬರುತ್ತಿರುವಾಗ ಸಮಾಜದ ಅನೇಕ ಹಲವಾರು ನೋವು,ನಿಂದನೆಗಳು,ಟೀಕೆ, ಟಿಪ್ಪಣಿಗಳು,ಅವಮಾನಗಳನ್ನು ಎದುರಿಸುತ್ತಾ ಶುದ್ಧ ಆತ್ಮದಿಂದ ಇದು ಸೇವೆಯಲ್ಲ ನಮ್ಮ ಆದ್ಯ ಕರ್ತವ್ಯ ಎನ್ನುವ ಹಾಗೆ ಸಂಸ್ಥೆಯನ್ನು ಬೆಳೆಸುತ್ತಾ ಸುಮಾರು 64 ಜನರಿಗೆ ಆಶ್ರಯ ನೀಡಿ ಊಟ ವಸತಿ ಆರೋಗ್ಯವನ್ನು ಸಮಾಜದ ಸಹಾಯದಿಂದಲೇ ಮಾಡುತ್ತಾ ಬಂದಿದ್ದಾರೆ. ಸರ್ಕಾರದ ಎಲ್ಲಾ ಸಚಿವರಿಗೂ ಅಧಿಕಾರಿಗಳಿಗೆ ಸವಲತ್ತುಗಳ ಬಗ್ಗೆ ಮನವಿ ಮಾಡಿಕೊಂಡರೂ ಸಹ ಸರ್ಕಾರ ಕಿಂಚಿತ್ತು ಸಹಾಯ ಮಾಡಿಲ್ಲ ಮಾನವೀಯ ಮೌಲ್ಯಗಳನ್ನು ಮನುಷ್ಯತ್ವ ರೂಪದಲ್ಲಿ ಸಮಾಜಕ್ಕೆ ಮಾದರಿಯಾಗಿರುವ ಕುಟುಂಬವೇ ಸಿಂಧನೂರಿನ ಕಾರುಣ್ಯ ಆಶ್ರಮ ಈಗ ಆಶ್ರಯ ಪಡೆದಿರುವ ಅನಾಥ ವೃದ್ಧರು ಬೇರೆ ಬೇರೆ ಜಿಲ್ಲೆ ತಾಲೂಕು ರಾಜ್ಯಗಳಿಂದ ಪೊಲೀಸರ ಸಮಕ್ಷಮದಲ್ಲಿ ಅವರನ್ನು ಕರೆದುಕೊಂಡು ಬಂದು ಆಶ್ರಯ ಕೊಡಲಾಗಿದೆ.ಈ ಸೇವೆ ಮಾಡುವ ಆಶ್ರಮದ ಆಡಳಿತ ಅಧಿಕಾರಿ ಡಾ.ಚನ್ನಬಸವ ಸ್ವಾಮಿ ಇವರಿಗೆ ಹಲವಾರು ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಗಳು ಮತ್ತು ತಮಿಳುನಾಡಿನ ಯುನಿವರ್ಸಿಟಿ ಸಮಾಜ ಸೇವೆ ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದೆ. ಇಷ್ಟು ಜನಗಳ ಪೈಕಿ ಮೂರ್ನಾಲ್ಕು ಜನರಿಗೆ ಸ್ವತಃ ಕಾರುಣ್ಯ ಕುಟುಂಬವೇ ನಾಮಕರಣ ಮಾಡಿದೆ ನಾನು ನನ್ನದು ಎನ್ನುವ ಈ ಸ್ವಾರ್ಥ ಜಗತ್ತಿನಲ್ಲಿ ನಿಸ್ವಾರ್ಥತೆಯನ್ನು ಮೈಗೂಡಿಸಿಕೊಂಡು ಇಡೀ ನಮ್ಮ ರಾಜ್ಯದಲ್ಲಿ ಈ ಸಂಸ್ಥೆ ಮಾದರಿಯಾಗಿದೆ. ಕರೋನಾ ಪ್ರಥಮ ಲಾಕ್ ಡೌನ್ ಅಂತದಲ್ಲಿ ಸಿಂಧನೂರಿನ ಜನರಲ್ಲಿ ಎಂಟು ಜನರಿಗೆ ಆಶ್ರಯ ನೀಡಿದೆ ಮತ್ತು ಕರೋನ ಲಾಕ್ ಡೌನ್ ಸಮಯದಲ್ಲಿ ಸಮಾಜ ಸೇವೆಯನ್ನು ಮಾಡುತ್ತಾ ಬಂದಿದೆ.ಕಾರುಣ್ಯ ಜೋಳಿಗೆ ಮೂಲಕ ಸುಮಾರು ಆರು ಜನ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜು ಫೀಸ್ ವಿತರಿಸಿತು.ಮೂಲತಃ ಈ ಸಂಸ್ಥೆಗೆ ಯಾವುದೇ ಆಸ್ತಿ ಇರುವುದಿಲ್ಲ ನಾಡಿನ ಜನರ ಕರುಣೆ ಸಹಾಯ ಈ ಸಂಸ್ಥೆಯ ಆಸ್ತಿಯಾಗಿದೆ,ಈ ಸಂಸ್ಥೆಯಲ್ಲಿ ಸುಮಾರು 12 ಜನ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ ದಿನಾಲು ಈ ಸಂಸ್ಥೆಯಲ್ಲಿ ಹುಟ್ಟುಹಬ್ಬ,ಪುಣ್ಯ ಸ್ಮರಣೆ ಹಾಗೂ ಮದುವೆ ವಾರ್ಷಿಕೋತ್ಸವ ಮತ್ತು ಆತ್ಮತೃಪ್ತಿಗಾಗಿ ಅನೇಕ ಹಲವಾರು ಕಾರ್ಯಕ್ರಮಗಳನ್ನು ಆಚರಿಸಿಕೊಳ್ಳುತ್ತಾರೆ.ಈ ಆಶ್ರಮದಲ್ಲಿ ಎಲ್ಲಾ ಆಸ್ತಿಗಳು ಸಹ ಸಮಾಜದಿಂದ ದೊರಕಿರುವ ಆಸ್ತಿ ಎಂದು ಕಾರುಣ್ಯ ಆಡಳಿತ ಸಂಸ್ಥೆ ತಿಳಿಸುತ್ತದೆ ಈ ಆಶ್ರಮಕ್ಕೆ ನಿರಂತರವಾಗಿ ಸಹಾಯ ಮಾಡುವ ದಾನಿಗಳು ಎಂದರೆ ಡಾಕ್ಟರ.ಶಿವರಾಜ್ ಸಹನಾ ಮಕ್ಕಳ ಆಸ್ಪತ್ರೆ, ಕೆ. ವಿರೂಪಾಕ್ಷಪ್ಪ,ಡಾಕ್ಟರ್ ಸುಧೀರ್ ಪದ್ಮ ನರ್ಸಿಂಗ್ ಹೋಮ್,ಎಂ.ಪಿ ರೇಣುಕಾಚಾರ್ಯ,ಸತ್ಯನಾರಾಯಣ ಶೆಟ್ಟಿ ಆಕ್ಸ್ಫರ್ಡ್ ಕಾಲೇಜ್,ಧರ್ಮಸ್ಥಳದ ಆಡಳಿತ ಅಧಿಕಾರಿ ವೀರೇಂದ್ರ ಹೆಗಡೆಯವರು, ಡಾಕ್ಟರ್ ಸ್ವರ್ಣಲತಾ ದಂತ ವೈದ್ಯರು, ವೆಂಕಟರಾವ್ ನಾಡಗೌಡ,ಬಸವನಗೌಡ ಬಾದರ್ಲಿ,ಶಾಂತಕುಮಾರ್ ಮಾಟೂರ, ದೊಡ್ಡ ಬಸನಗೌಡ ಬಾದರ್ಲಿ ಮತ್ತು ಹೆಸರು ಪ್ರಸ್ತಾಪಿಸಬಾರದು ಎನ್ನುವ ಹಲವಾರು ದಾನಿಗಳು ಇದ್ದಾರೆ ನಮ್ಮ ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಲೇ ಇವೆ ಮಕ್ಕಳಿಗೆ ವೃದ್ಧ ತಂದೆ, ತಾಯಿ ಬೇಡದಿರುವುದೇ ಅದಕ್ಕೆ ಮುಖ್ಯ ಕಾರಣ ಇದು ನಮ್ಮ ಭಾರತೀಯ ಸಂಸ್ಕೃತಿಯಲ್ಲ ವಿದೇಶಗಳಲ್ಲಿ ಓಲ್ಡ್ ಏಜ್ ಹೋoಗಳು ಇರುತ್ತವೆ ಏಕೆಂದರೆ ಅಲ್ಲಿ ಕುಟುಂಬ,ಅದರಲ್ಲೂ ಕೂಡು ಕುಟುಂಬದ ಪರಿಕಲ್ಪನೆಯೇ ಇಲ್ಲ ತಂದೆ ತಾಯಿ 10 ಜನ ಮಕ್ಕಳನ್ನು ಸಾಕುತ್ತಾರೆ,ಅದೇ 10 ಜನ ಮಕ್ಕಳು ತಂದೆ-ತಾಯಿ ಇಬ್ಬರನ್ನು ಸಾಕಲಾರರು ಎಂಬುವುದು ವಿಪರ್ಯಾಸವೇ ಸರಿ.
ಇಳಿ ವಯಸ್ಸಿನಲ್ಲಿ ವೃದ್ಧರು ನೆಮ್ಮದಿ ಕಾಣದೆ ವೃದ್ಧಾಶ್ರಮಗಳಲ್ಲಿ ಕಂಗಲಾಗುತ್ತಾರೆ. ಮಕ್ಕಳು,ಮೊಮ್ಮಕ್ಕಳನ್ನು ನೋಡುವ ತವಕದಲ್ಲಿ ದಿನಗಳನ್ನು ಕಳೆಯುತ್ತಾರೆ. ವೃದ್ಧರು ಎಂದರೆ ಕೆಲಸಕ್ಕೆ ಬಾರದವರು ಎಂಬಂತೆ ಕಾಣುತ್ತಾರೆ ಅತ್ತೆ ಮಾವನನ್ನು ದೇವರ ರೀತಿ ನೋಡಿಕೊಳ್ಳುವ ಸೊಸೆಯರು ಇದ್ದ ಕಾಲ ಒಂದಿತ್ತು ಆದರೆ ಈಗಿನ ಕಾಲದಲ್ಲಿ ತಾವು ತಮ್ಮ ಮಕ್ಕಳು ಅಂತ ನೋಡುವ ಸೊಸೆಯರ ಸಂಖ್ಯೆ ಹೆಚ್ಚಾಗುತ್ತಿದೆ ಪ್ರಸ್ತುತ ದಿನಗಳಲ್ಲಿ ಬೆಂಗಳೂರಿನಲ್ಲಿ ನಡೆದಂತ ಒಂದು ಘಟನೆ “ಆಗಸ್ಟ್ 21ರಂದು ಶಾಲೆಯ ಪ್ರವಾಸಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ಯಲಾಗಿತ್ತು ಅದರ ಭಾಗವಾಗಿ ವೃದ್ಧಾಶ್ರಮವೊಂದಕ್ಕೆ ತೆರಳಿದ್ದ ವಿದ್ಯಾರ್ಥಿನಿಯರ ಬಳಗದಲ್ಲಿದ್ದ 14 ವರ್ಷದ ಬಾಲಕಿಯೊಬ್ಬಳಿಗೆ ತನ್ನ ಅಜ್ಜಿಯನ್ನು ಆಕಸ್ಮಿಕವಾಗಿ ವೃದ್ಧಾಶ್ರಮದಲ್ಲಿ ಕಂಡ ಕೂಡಲೇ ಬಾಲಕಿ ಅಚ್ಚರಿ ಮತ್ತು ಆಘಾತಕ್ಕೆ ಒಳಗಾಗಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು ಬಾಲಕಿಗೆ ತಿಳಿಯದಂತೆ ಆಕೆಯ ಪೋಷಕರು ಅಜ್ಜಿಯನ್ನು ವೃದ್ಧಾಶ್ರಮಕ್ಕೆ ಕರೆತಂದು ಸೇರಿಸಿ ಹೋಗಿದ್ದರು ಎಂಬುವುದನ್ನು ಮಾಹಿತಿ ತಿಳಿದು ಬಾಲಕಿ ಬಿಕ್ಕಿ ಬಿಕ್ಕಿ ಅಳುವ ಘಟನೆ ಮನ ಮಿಡಿಯುವಂತಿತ್ತು” ಈ ವೃದ್ಧಾಶ್ರಮಗಳ ಒಂದು ಪರಿಕಲ್ಪನೆ ಹೋಗಿ ಮೊದಲಿನ ಹಾಗೆ ಮೊಮ್ಮಕ್ಕಳಿಗೆ ಅಜ್ಜಿ -ತಾತನ ಹೆಗಲು ಏರಿ ತೊಡೆ ಮೇಲೆ ಕುಳಿತು ಊಟ ಮಾಡಿಸಿಕೊಳ್ಳುವ,ಕಥೆ ಹೇಳಿಸಿಕೊಂಡು ಮಲಗಿಸಿಕೊಳ್ಳುವ ದಿನಗಳು ಮತ್ತೆ ಬರಬೇಕು ಮತ್ತು ಮಕ್ಕಳು ಹಿರಿಯರನ್ನು ಹೊರಗೆ ಅಟ್ಟುವ ಈ ಒಂದು ಪದ್ಧತಿಯನ್ನು ಬಿಡಬೇಕು ಅಂತ ಒಂದು ದಿನಗಳು ಬರಬೇಕೆಂಬುದು ಎಲ್ಲರ ಆಶಯವಾಗಿದೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ವೃದ್ಧಾಶ್ರಮಗಳು ಇರಬಾರದು ಎನ್ನುವಂತಹ ಸಂಕಲ್ಪ ಹೊಂದಿದಂತಹ ನಮ್ಮ ದೇಶದಲ್ಲಿ ನೊಂದ ಜೀವಿಗಳ ಆನಾಥ ಜೀವಿಗಳ ಅನಿವಾರ್ಯತೆಗೆ ಈ ಕಾರುಣ್ಯ ಕುಟುಂಬ ಹುಟ್ಟಿಕೊಂಡಿದೆ ಎಂದು ಸಂಸ್ಥೆಯ ದಿನ ನಿತ್ಯದ ಸಂದೇಶ ಇದರ ಜೊತೆ ಜೊತೆಯಲಿ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹಿರಿಯ,ನಾಗರಿಕ ಸೇವೆ ತಿಳುವಳಿಕೆ ಅಭಿಯಾನ ಅರಿವು ಮತ್ತು ನೆರವು ಎನ್ನುವ ವಿಶೇಷ ಕಾರ್ಯಕ್ರಮವನ್ನು ಈ ಸಂಸ್ಥೆ ಮಾಡುತ್ತಾ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುತ್ತದೆ ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಎಲ್ಲೋ ಜೀವನ ಕಲ್ಪಿಸಿ ಕೊಡುವ ಈ ಕುಟುಂಬ ನಮ್ಮ ಸಿಂಧನೂರು ಎನ್ನುವ ಕರುಣಾಮಯಿ ನಮ್ಮ ನಾಡಿನಲ್ಲಿರುವುದು ಸಿಂಧನೂರು ತಾಲೂಕಿನ ಜನತೆಯ ಘನತೆ ಗೌರವವನ್ನು ಹೆಚ್ಚಿಸುತ್ತದೆ. ತಾಲೂಕಿನ ರೈತ ಬಾಂಧವರು ಕೂಡಾ ಪ್ರತಿ ಬೆಳೆಯ ಕಟಾವಿನ ಸಮಯದಲ್ಲಿ ಸಹಾಯ ಮಾಡಿ ಅನ್ನದಾತೋ ಸುಖೀಭವ ಎನ್ನುವ ವಿಶೇಷ ಪದಕ್ಕೆ ಅರ್ಥ ಕಲ್ಪಿಸಿ ಕೊಟ್ಟಿದ್ದಾರೆ. ಒಬ್ಬ ಮಾನವ ಬದುಕು ಜೀವನ ಅನಿವಾರ್ಯತೆಗಳಿಗಾಗಿ ದಾರಿ ತಪ್ಪಿದಾಗ ಆ ಮಾನವನ ವ್ಯಥೆ,ಕತೆಯನ್ನು ಹೇಳಿಕೊಳ್ಳುವ ಸಮಯ ಕಾರುಣ್ಯ ಕುಟುಂಬ ನೀಡುತ್ತದೆ. ಹುಟ್ಟು ಆಕಸ್ಮಿಕವಾದರೆ ಸಾವು ಖಚಿತ ಎನ್ನುವ ವೇದದ ಮಧ್ಯೆ ಈ ಕಾರುಣ್ಯ ಕುಟುಂಬ ಜೀವನ ಸಾಮಾಜಿಕವಾದಂತಹ ಬದುಕಿನ ದಾರಿಯನ್ನು ಅರ್ಥಗರ್ಭಿತವಾಗಿ ಸಮಾಜಕ್ಕೆ ತಿಳಿಸುತ್ತದೆ ಇಂದಿನ ಕಲಿಯುಗದಲ್ಲಿ ಬೇರೆ ಬೇರೆ ಜಾಗದಲ್ಲಿ ಧಾರ್ಮಿಕ ಸಭೆಗಳನ್ನು ಏರ್ಪಡಿಸಿ ವ್ಯರ್ಥ ಖರ್ಚು ಮಾಡುತ್ತಿರುವ ಕರುಣಾಮಯಿಗಳಿಗೆ ಇಂತಹ ಜೀವಿಗಳ ಮಧ್ಯೆ ಇಂತಹ ಸಭೆ ಸಂದರ್ಭಗಳ ಮಾಡಿಕೊಂಡಾಗ ಮಾತ್ರ ಮಾನವ ಧರ್ಮಕ್ಕೆ ಜಯ ಸಿಗುತ್ತದೆ ಎಂದು ಹೇಳಬಹುದು ವೃದ್ರಾಶ್ರಮಗಳು ಎಂದರೆ ವೃದ್ಧರಿಗೆ ನೆಮ್ಮದಿ ಸಿಗುವಂತಹ ತಾಣಗಳು ಆಗಿರಬೇಕು ಅಲ್ಲಿಯವರೆಗೆ ಮನೆಯಲ್ಲಿ ಅಥವಾ ಮಕ್ಕಳಿಂದ ಸಿಗದಿರುವ ಸ್ವಾತಂತ್ರ್ಯ ನೆಮ್ಮದಿ ಶಾಂತಿ ಅಷ್ಟೇ ಅಲ್ಲದೆ ಹೊತ್ತು ಹೊತ್ತಿಗೆ ಸರಿಯಾಗಿ ಊಟ ತಿಂಡಿ ಇತ್ಯಾದಿಗಳು ದೊರೆಯಬೇಕು ಮಾತೃ ಹೃದಯದಿಂದ ಮಾತನಾಡಿಸುವ ಮತ್ತು ಉಪಚರಿಸುವ ವ್ಯಕ್ತಿಗಳಿಗಾಗಿ ಅವರು ಹಂಬಲಿಸುತ್ತಾರೆ ಇನ್ನು ವೃದ್ಧರು ಎಂದ ಮೇಲೆ ನಾನಾ ರೀತಿಯ ಕಾಯಿಲೆಗಳು ಕಂಡುಬರುತ್ತವೆ ಅವುಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸೇವೆಯ ಅಗತ್ಯವಿದೆ ಮತ್ತು ಅವರನ್ನು ನೋಡಿದರೆ ಅಸಹ್ಯ ಪಟ್ಟುಕೊಳ್ಳದೆ
ಒಗ್ಗಿಸಿಕೊಂಡು ಸೇವೆ ಮಾಡುವ ವೃದ್ಧಾಶ್ರಮವೇ ನಮ್ಮ ಸಿಂಧನೂರಿನ ಕಾರುಣ್ಯ ವೃದ್ಧಾಶ್ರಮವಾಗಿದೆ ಮನುಷ್ಯತ್ವ ಮೌಲ್ಯಗಳನ್ನು ಸೇವೆಯ ರೂಪದಲ್ಲಿ ಸಮಾಜಕ್ಕೆ ತಿಳಿಸುವ ಕಾರ್ಯವನ್ನು ನಮ್ಮ ಕಾರುಣ್ಯ ವೃದ್ಧಾಶ್ರಮವು ಮುಂಚೂಣಿಯಲ್ಲಿದೆ ಮನುಷ್ಯ ಮನೆ,ಮನೆಯಲ್ಲಿ ಜನಿಸುತ್ತಾನೆ ಆದರೆ ಮನುಷ್ಯತ್ವ ಕೆಲವರಲ್ಲಿ ಮಾತ್ರ ಜನಿಸಲು ಸಾಧ್ಯ ಹಾಗೂ ಜೀವನದಲ್ಲಿ ಮನುಷ್ಯತ್ವದ ಗುಣ ಬೆಳೆಸಿಕೊಳ್ಳಬೇಕೆಂದರೆ ಸಹಾಯ ಮಾಡಿ ಕರುಣೆ ತೋರಿ ದೈವ ಮೆಚ್ಚಿದರೆ ದೇವರು ಮೆಚ್ಚಿದಂತೆ ಎಂದು ಕಾರುಣ್ಯ ಆಶ್ರಮದ ಆಡಳಿತ ಅಧಿಕಾರಿ ಆದಂತಹ ಡಾ. ಚನ್ನಬಸಯ್ಯ ಸ್ವಾಮಿ ಅವರ ದಿನ ನಿತ್ಯ ಸಂದೇಶ.
ಇಂತಹ ಸಂಸ್ಥೆಗಳಿಗೆ ಸಹಾಯ ಮಾಡುವ ಕರುಣೆಮಯಿಗಳು ಇದ್ದರೆ ಹಾಗೂ ದಾನಿಗಳು ಇದ್ದರೆ ಸಹಾಯ ಮಾಡಿ
ಬ್ಯಾಂಕ್ ಖಾತೆ ಸಂಖ್ಯೆ 1935104000190831
ಐ.ಎಫ್.ಸಿ.ಕೋಡ್ -ಐ.ಬಿ.ಕೆ.ಎಲ್ 0001935
ಸಿಂಧನೂರ್ ಶಾಖೆ
ಐಡಿಬಿಐ ಬ್ಯಾಂಕ್
ಹಾಗೂ ಫೋನ್ ಪೇ ಮತ್ತು ಗೂಗಲ್ ಪೇ ನಂಬರ 9731983111,9110858985 ಇವುಗಳಿಗೆ ಸಹ ಕಳಿಸಬಹುದು
ವರದಿ:ವೆಂಕಟೇಶ್.ಹೆಚ್.ಬೂತಲದಿನ್ನಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ