
ಯಾದಗಿರಿ/ಗುರುಮಠಕಲ್: ಗುರುಮಠಕಲ್ ತಾಲೂಕಿನಾದ್ಯಂತ ಇಂದು ಮಹಾತ್ಮ ಬಸವೇಶ್ವರರ 892 ನೇಯ ಜಯಂತಿಯನ್ನು ಆಚರಣೆ ಮಾಡಲಾಯಿತು.
ಪಟ್ಟಣದ ಮಹಾತ್ಮ ಬಸವೇಶ್ವರ ವೃತ್ತದಲ್ಲಿ ಇಂದು ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಮಹಾತ್ಮ ಬಸವೇಶ್ವರರ 892 ನೇಯ ಜಯಂತಿಯನ್ನು ಆಚರಣೆ ಮಾಡಲಾಯಿತು.
ವಿಶೇಷವಾಗಿ ಮಹಾರಾಷ್ಟ್ರದ ಮುಂಬೈ ನಗರದ ಬೊರಿವೇಲಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಂಜಯ್ ಉಪಾಧ್ಯಾಯರವರು ಭಾಗಿಯಾಗಿ ಬಸವಣ್ಣನವರ ಜಯಂತಿ ಕೇವಲ ಆಚರಣೆಗೆ ಸೀಮಿತವಾಗದೆ ಜೀವನದಲ್ಲಿ ಅವರ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಮಾತಾನಾಡಿದರು. ಜಯಂತಿಯಲ್ಲಿ ವೀರಶೈವ ಲಿಂಗಾಯತ ಸಮಾಜ ಹಾಗೂ ಮಹಾತ್ಮ ಬಸವೇಶ್ವರ ಕೃಷಿ ಮಾರುಕಟ್ಟೆ ಸದಸ್ಯರು, ಸಾರ್ವಜನಿಕರು ಭಾಗಿಯಾದರು.
ವರದಿ: ಜಗದೀಶ್ ಕುಮಾರ್ ಭೂಮಾ
