ಕಣ್ಣು ಮುಚ್ಚಿ ಕುಳಿತಿರುವ ತಾಲೂಕ ಆರೋಗ್ಯ ಅಧಿಕಾರಿಗಳು – ಮಹಾಂತೇಶ್ ನಕ್ಕಲಗಡ್ಡ ಸಾಹುಕಾರ್
ಕಲಬುರಗಿ : ಜಿಲ್ಲೆಯ ಸೇಡಂ ತಾಲೂಕಿನ ಇಟ್ಕಲ ಗ್ರಾಮದ ಆಯುಷ್ಮಾನ ಭಾರತ, ಆರೋಗ್ಯ ಭಾರತ, 24/7 ಸೇವೆ ಎನ್ನುವ ನಾಮಫಲಕಗಳು ಇನ್ನೊಂದು ಕಡೆ ಚಿಕಿತ್ಸೆಗೆ ಬರುವ ರೋಗಿಗಳಿಗೆ ಆಸ್ಪತ್ರೆ ಬೀಗ ಜಡಿದಿರುವುದು ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಕೆರಳಿಸುವಂತೆ ಮಾಡಿದೆ.
ಆಸ್ಪತ್ರೆಯ ಸಿಬ್ಬಂದಿಗಳಿಗೆ ಜಯಂತಿ ಆಚರಣೆ ಬಂದರೆ ಎಲ್ಲಿಲ್ಲದ ಹಿಗ್ಗು, ಜಯಂತಿ ಮುಗಿಯುತ್ತಿದ್ದಂತೆ ಆಸ್ಪತ್ರೆಗೆ ಬೀಗ ಹಾಕುವುದು ಅಭ್ಯಾಸವಾಗಿದೆ, ಹೆಸರಿಗೆ 24/7 ಸೇವೆ ಆದರೆ ಸರಿಯಾದ ಚಿಕಿತ್ಸೆ ಸಿಗದೇ ಅನಿವಾರ್ಯವಾಗಿ ಬೇರೆ ಊರುಗಳಿಗೆ/ಖಾಸಗಿ ಆಸ್ಪತ್ರೆಗೆ ಹೋಗುವ ಅನಿವಾರ್ಯತೆ ತಂದೊಡ್ಡಿದೆ.
ಸದಾ ರಜೆಗಳಿಗಾಗಿ ಕಾಯುತ್ತಿರುವ ಸಿಬ್ಬಂದಿ ಇಂದು ಮಹಾತ್ಮಾ ಬಸವೇಶ್ವರ ಜಯಂತಿಯ ಪ್ರಯುಕ್ತ ಆಸ್ಪತ್ರೆ ಬೀಗ ಹಾಕಿ ಹೋಗಿರುವದು ನಾಚಿಕೆಗೇಡಿನ ಸಂಗತಿ
ರಕ್ತ ಪರೀಕ್ಷೆಗೆ ಬರುವ ರೋಗಿಗಳಿಗೆ ಖಾಸಗಿ ರಕ್ತ ಪರೀಕ್ಷೆ ಕೇಂದ್ರಗಳಿಗೆ ಕಳುಹಿಸುವದು ಅದರ ಹಿಂದಿನ ಮರ್ಮವನ್ನು ಅರಿಯಬೇಕಾಗಿದ್ದ ತಾಲೂಕ ಆರೋಗ್ಯಧಿಕಾರಿ ಡಾ. ಸಂಜೀವ ಪಾಟೀಲರಿಗೆ ಎಷ್ಟೇ ಬಾರಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಭರವಸೆ ಮಾತುಗಳನ್ನು ಬಿಟ್ಟು
ಆಸ್ಪತ್ರೆಯು ಪ್ರತಿ ರವಿವಾರ ಮುಚ್ಚಲ್ಪಡುತ್ತದೆ, ದಿನ ನಿತ್ಯ ಸಂಜೆ 4 ಗಂಟೆಗೆ ಆಸ್ಪತ್ರೆಯಲ್ಲಿ ಅಧಿಕಾರಿಗಳನ್ನು ಟಾರ್ಚ್ ಹಾಕಿ ಹುಡುಕಬೇಕಾಗುತ್ತದೆ.
ಗ್ರಾಮವು ವಿಜಯಪುರ – ಹೈದ್ರಾಬಾದ್ ರಾಜ್ಯ ಹೆದ್ದಾರಿಗೆ ಕೆಲವೇ ಕಿಲೋ ಮೀಟರ್ ದೂರದಲ್ಲಿದ್ದು ಅಪಘಾತ/ ಆಚಾತುರ್ಯ ಘಟನೆ ಸಂಭವಿಸಿದಾಗ ಪ್ರಥಮ ಚಿಕಿತ್ಸೆ ಸಿಗದೇ ನೆರೆ ಜಿಲ್ಲೆಯ ಗುರುಮಠಕಲ್ ಆಸ್ಪತ್ರೆ ಹೋಗುತ್ತಾರೆ, ಇಲ್ಲಿ ಸಿ.ಸಿ ಕ್ಯಾಮರಾ ಅಳವಡಿಕೆ ಮತ್ತು ಆಂಬುಲೆನ್ಸ್ ವ್ಯವಸ್ಥೆ ಅತ್ಯಗತ್ಯ ಅವಶ್ಯಕತೆ ಇದ್ದು ಈ ಕುರಿತು ಮೇಲಾಧಿಕಾರಿಗಳು ಕೂಡಲೇ ಗಮನ ಹರಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಮಹಾಂತೇಶ್ ನಕ್ಕಲಗಡ್ಡ (ಸಾಹುಕಾರ್) ಅವರು ಆಗ್ರಹಿಸಿದ್ದಾರೆ.
ಸೇಡಂ ಮತ ಕ್ಷೇತ್ರದ ಸಚಿವರು ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಶರಣ ಪ್ರಕಾಶ ಪಾಟೀಲರವರು ದಯವಿಟ್ಟು ಈ ಕಡೆ ಗಮನಕೊಟ್ಟು ಚಿಕಿತ್ಸೆ ಕೊಡದೆ ಆಸ್ಪತ್ರೆಗೆ ಬೀಗ ಹಾಕಿ ಅಸಡ್ಡೆತನ ತೋರಿರುವ ಈ ಆರೋಗ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕಾನೂನು ಕ್ರಮ ತೆಗೆದುಕೊಳ್ಳಲು ಸಾರ್ವಜನಿಕರ ಒಕ್ಕೊರಲಿನಿಂದ ಮನವಿ ಮಾಡಿದ್ದಾರೆ ತಪ್ಪಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟದ ಹಾದಿ ತುಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ವರದಿ: ಜಗದೀಶ್ ಕುಮಾರ್ ಭೂಮಾ
