ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವರ್ಚುಸ್ ಕಂಪನಿಯಿಂದ ಶಾಲಾ ಮಕ್ಕಳಿಗೆ ಪ್ರಯೋಗಾಲಯ ಹಸ್ತಾಂತರ


ಹನೂರು:ಶಾಲಾ ಮಕ್ಕಳಿಗೆ ಪ್ರಾರಂಭದಲ್ಲಿ ಉತ್ತಮ ಶಿಕ್ಷಣ ನೀಡಿದರೆ ಮುಂದಿನ ದಿನಗಳಲ್ಲಿ ಉನ್ನತಮಟ್ಟದ ಉದ್ಯೋಗ ಪಡೆಯಲು ಸಹಕಾರಿಯಾಗುತ್ತದೆ ಎಂದು ವಿರ್ತುಸ ಮಾರ್ಕೆಟಿಂಗ್ ಮತ್ತು ಕಾರ್ಪೂರೇಟ್ ಕಮ್ಯುನಿಕೇಷನ್ ಉಪಾಧ್ಯಕ್ಷರಾದ ರೋಸ್ ಪೆರರ ತಿಳಿಸಿದರು.
ರಾಮಪುರದ ಜೆ ಎಸ್ ಎಸ್ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಶಾಲೆಯಲ್ಲಿ
ಎಂಟನೆ ತರಗತಿ ವಿದ್ಯಾರ್ಥಿಗಳ ಸಾಧನೆ ಅದ್ಭುತವಾಗಿದೆ ಶಿಕ್ಷಕರು ಉತ್ತಮವಾದ ಕೆಲಸ ಮಾಡುತ್ತಿದ್ದಾರೆ ರಾಜ್ಯದಲ್ಲೇ ಜೆ ಎಸ್ ಎಸ್ ಶಾಲೆ ದೊಡ್ಡಮಟ್ಟದಲ್ಲಿ ಹೆಸರುವಾಸಿಯಾಗಿದೆ,ನೀವು ಭಯ ಪಡಬಾರದು ನಿಮ್ಮ ವಿಧ್ಯಾಭ್ಯಾಸ ಉನ್ನತ ಮಟ್ಟಕ್ಕೆ ಏರಲಿ ನಿಮಗೆ ಅವಕಾಶಗಳು ಸಿಕ್ಕಾಗ ಉಪಯೋಗಿಸಿ ಕಲಿಯಿರಿ ಒಂದು ತಿಂಗಳು ಹಾಗೂ ಎರಡು ತಿಂಗಳು ಹಾಗೆ ಸಮುದಾಯದ ಕಲಿಕೆ ಮಾಡಿದರೆ ಪ್ರತಿಯೊಬ್ಬರು ಉತ್ಪಾದನಾ ಸಾಮರ್ಥ್ಯ ಹೊಂದಿರುವ ನಿಮ್ಮಲ್ಲಿ ಎಲ್ಲಾ ಸಾದ್ಯ ತಂತ್ರಜ್ಞಾನ ಮುಂದುವರಿದಿದೆ ನಾವು ರಾಜ್ಯ ದೇಶ ವಿದೇಶಗಳಲ್ಲಿ ಹೆಸರು ಮಾಡಲು ಉತ್ತಮ ಗುಣಮಟ್ಟದ ಶಿಕ್ಷಣ ಮುಖ್ಯ ಅದು ಗುಣಮಟ್ಟದ ಸಂಸ್ಥೆಗಳ ಮುಖಾಂತರ ಮಾಡಬೇಕು ಆಗ ವಿದೇಶಗಳಲ್ಲಿ ಕೆಲಸ ಮಾಡುವ ಅವಕಾಶವು ಸಿಗುತ್ತದೆ ಇಂಥಹ ಕೆಲಸ ಸಾಮನ್ಯವಲ್ಲ ಆದರು ಕಲಿತರೆ ಎಲ್ಲಾವು ಸುಲಭವಾಗಿ ಮಾಡಬಹುದು ಎಂಟು ಹತ್ತು ವರ್ಷದ ತಂತ್ರಜ್ಞಾನಕ್ಕೂ ಮುಂದಿನ ಐದಾರು ವರ್ಷಗಳ ತಂತ್ರಜ್ಞಾನಕ್ಕು ವ್ಯತ್ಯಾಸವಿದೆ ನಿಮ್ಮ ಎಬಿಲಿಟಿ ತಕ್ಕಂತೆ ಉದ್ಯೋಗ ಸಿಗುತ್ತದೆ .ಮಹಿಳೆಯರು ನಲವತ್ತು ಪರ್ಶೆಂಟ್ ಉದ್ಯೋಗ ಇದೆ ಹಿಂದೆ ಹತ್ತು ಭಾಗ ವಿತ್ತು ಮುಂದೆ ಅರವತ್ತು ಬಾಗಕ್ಕೆ ಕೆಲಸ ಮಾಡುವಂತಾಗಬೇಕು ಹೆಚ್ಚು ಸಮಯವನ್ನು ಓದಲು ಕಲಿಯಲು ಉಪಯೋಗಿಸುವ ಕಾರ್ಯಮಾಡಿ ಇದರಿಂದ ಅನೇಕ ಉದ್ಯೋಗ ಸೃಷ್ಟಿ ಯಾಗಿದೆ.ನಿಮಗೆ ಶಾಲೆಯಲ್ಲಿ ಸ್ವಯಂ ಸಂಸ್ಥೆಗಳು ನಿಮಗೆ ಸಹಾಯ ಮಾಡುತ್ತಿವೆ ಅದರ ಸದುಪಯೋಗ ಪಡಿಸಿಕೊಳ್ಳಲು ವಿಧ್ಯಾರ್ಥಿಗಳಿಗೆ ಸಲಹೆ ನೀಡಿದರು .ಇದೆ ಸಮಯದಲ್ಲಿ ಮಾತನಾಡಿದ ಪ್ರಾಂಶುಪಾಲರಾದ ನಟರಾಜುರವರು ವಿದ್ಯಾರ್ಥಿಗಳ ಬದುಕು ಸುಂದರವಾದ ಹೊಸ ತಂತ್ರಜ್ಞಾನ ಅವಿಸ್ಕಾರಗಳನ್ನು ಪರಿಚಯಿಸಿರುವ ಸಂಸ್ಥೆಯವರು ನಿಮ್ಮ ಮಕ್ಕಳ ಶಿಕ್ಷಣ ಉತ್ತಮವಾಗಿರಲಿ ಎಂದು ತಿಳಿಸಿದ್ದಾರೆ ಪ್ರಪಂಚದಲ್ಲಿ ಮುಂದುವರಿದಿದೆ ನಾವು ಮುಂದುವರಿಯಬೇಕು ನಿಮ್ಮ ಶಾಲೆಯಲ್ಲಿ ಉತ್ತಮ ಸಾಧನೆ ಮಾಡುತ್ತಿರುವ ಮಕ್ಕಳಿಗೆ ಮುಂದುವರಿಸಲು ಅನುಕೂಲ ಮಾಡಿಕೊಡಿ ಇಲ್ಲಿರುವ ಮಕ್ಕಳಿಗೆ ಉಪಯೋಗಿಸುವ ಜವಾಬ್ದಾರಿ ನಮ್ಮದಾಗುತ್ತದೆ ಅಲ್ಲದೆ ಈ ಹನೂರಿನ ಭಾಗದ ಎಲ್ಲಾ ಮಕ್ಕಳಿಗೆ ಎಂಬತ್ತು ಲಕ್ಷಗಳ ಹಣ ವಿನಿಯೋಗ ಮಾಡಿದ್ದಾರೆ.ತಂತ್ರಜ್ಞಾನ ಕಂಪನಿಗಳು ಕ್ಯಾಂಪಸ್ ಸಂದರ್ಶನ ನಡುಸುತ್ತವೆ ಅದರಲ್ಲಿ ಕೆಲವು ವ್ಯಕ್ತಿಗಳಿರುವಾಗ ಅದನ್ನು ಉಪಯೋಗಿಸಬಹುದು ನಮ್ಮ ಮಕ್ಕಳು ಕಲಿಯಬೇಕು ಹೊಸ ವಿದ್ಯಾಭ್ಯಾಸ ಪಾಲಿಸಿಗಳಿಗೆ ಮಕ್ಕಳು ಹೊಂದಿಕೊಂಡಿರಬೇಕು ಇಂತಹ ಅವಕಾಶಗಳನ್ನು ಉಪಯೋಗಿಸುವ ಮೂಲಕ ಬೆಳೆಯಬೆಕು ನಮ್ಮ ಶಾಲೆಯಲ್ಲಿ ಮೂರು ಲಕ್ಷ ನೀಡಿ ಲ್ಯಾಭ್ ಗಳನ್ನು ಮಾಡಿದ್ದಾರೆ ಎಂದರು .ಇದೇ ಸಂದರ್ಭದಲ್ಲಿ ಪ್ರಯೋಗಾಲಯವನ್ನು ಉದ್ಘಾಟನೆ ಮಾಡಲಾಯಿತು .
ಇದೇ ಸಂದರ್ಭದಲ್ಲಿ ರವಿಶಂಕರ್ ,ಅವೀನಶ್ , ಸಂತೋಷ್ ಶಾನ್ ಬೋಗ , ಮತ್ತು ಮುರುಗೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ವರದಿ ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ