ಬಳ್ಳಾರಿ / ಕೋಟೆ – ಕಂಪ್ಲಿ:
ಹಜರತ್ ಖಾಜಾ ಬಂದೇ ನವಾಜ್ ಕಾನ್ಫರೆನ್ಸ್ ನ ಪ್ರವಚನ ಕಾರ್ಯಕ್ರಮವು ಕಂಪ್ಲಿ ಕೋಟೆಯ 13ನೇ ವಾರ್ಡಿನಲ್ಲಿ ನಡೆಯಿತು.
13ನೇ ವಾರ್ಡಿನ ಜುಮ್ಮಾ ಮಸೀದಿಯ ಮುಖ್ಯಸ್ಥರು ಹಾಗೂ ಕೋಟೆಯ ಮುಸ್ಲಿಂ ಯುವಕರು ಏರ್ಪಡಿಸಿದ ಹಜರತ್ ಖಾಜಾ ಬಂದೇ ನವಾಜ್ ಕಾನ್ಫರೆನ್ಸ್ ಧಾರ್ಮಿಕ ಪ್ರವಚನ ಕಾರ್ಯಕ್ರಮವು ಶ್ರದ್ಧಾ ಭಕ್ತಿಯಿಂದ ನಡೆಯಿತು.
ಆಶೀರ್ವಚನ ನೀಡಿ ಮಾತನಾಡಿದ ಧರ್ಮಗುರು ಸೈಯದ್ ಷಾ ಅಬುಲ್ ಹಸನ್ ಖಾದ್ರಿ ಹಿರಿಯರನ್ನು ಗೌರವಿಸದವನು, ಕಿರಿಯರ ಮೇಲೆ ವಾತ್ಸಲ್ಯ ತೋರದವನು, ಒಳಿತಿನ ಪ್ರಚಾರ ಮಾಡದವನು ಮತ್ತು ಕೆಡುಕಿನಿಂದ ಜನರನ್ನು ತಡೆಯದವನು ನಮ್ಮವನಲ್ಲ.
ಮನುಷ್ಯನು ಕೇವಲ ತಾನು ಸತ್ಕಾರ್ಯಗಳನ್ನು ಮಾಡಿ ಕೆಡುಕುಗಳಿಂದ ದೂರವಿದ್ದರೆ ಸಾಲದು. ಕೇವಲ ತನ್ನ ಸುಧಾರಣೆಯಲ್ಲಿ ತೃಪ್ತನಾಗದೆ ಸಮಾಜದ ಇತರೆಲ್ಲ ವ್ಯಕ್ತಿಗಳನ್ನೂ ಒಳಿತಿನ ಮಾರ್ಗಕ್ಕೆ ಹಚ್ಚಲು ಮತ್ತು ಕೆಡುಕುಗಳಿಂದ ತಡೆಯಲು ಶ್ರಮಿಸಬೇಕು, ಎಲ್ಲರೂ ಶಾಂತಿ ಸೌಹಾರ್ದಿಂದ ಬಾಳಬೇಕು ಎಂದು ಇಸ್ಲಾಂ ಧರ್ಮ ಪ್ರತಿಪಾದಿಸುತ್ತದೆ ತಿಳಿಸಿದರು.
ಈ ಕಾರ್ಯಕ್ರಮದ ಮುಖ್ಯ ಉಪನ್ಯಾಸಕರಾದ ಬಾಗಲಕೋಟೆ ಜಿಲ್ಲೆಯ ಗಜೇಂದ್ರಗಡದ ಮುಫ್ತಿ ಮೊಹಮ್ಮದ್ ಅಬೂಬಕರ್ ಪ್ರವಚನ ನೀಡಿ ಗುಲ್ಬರ್ಗದ ಹಜ್ರತ್ ಖ್ವಾಜಾ ಬಂದಾ ನವಾಜ್ ಗೆಸು ದರಜ್ ರವರು (ಜುಲೈ 13, 1321 – ನವೆಂಬರ್ 1, 1422) ಭಾರತದ ಒಬ್ಬ ಮಹಾನ್ ಸೂಫಿ ಸಂತರಾಗಿದ್ದರು. ಅವರು ತಾಳ್ಮೆ ಹೊಂದಿದವರಾಗಿದ್ದರು. ಗೆಸು ದರಜ್ ಒಬ್ಬ ದಿಲ್ಲಿಯ ಪ್ರಖ್ಯಾತ ಸೂಫಿ ಸಂತ ಹಜ್ರತ್ ನಾಸಿರುದ್ದೀನ್ ಚಿರಗ್ಹ್ ದೆಹ್ಳವಿ ಅವರ ಶಿಷ್ಯರಾಗಿದ್ದರು. ಗೆಸು ದರಜ್ ಅವರ್ ಹೆಸರು “ಸಯ್ಯದ್ ಮೊಹಮ್ಮೆದ್ ಹುಸ್ಸೈನಿ”. 1336 ರಲ್ಲಿ ಇವರು ದಿಲ್ಲಿಗೆ ಹೋಗಿ ತಮ್ಮ ಶಿಕ್ಷಣ ಹಾಗು ತಾಲೀಮು ಪೂರ್ತಿ ಮಾಡಿದರು. ಗೆಸು ದರಜ್ ಅವರ ಗುರುಗಳು ಹಜ್ರತ್ ಕೆಥ್ಲಿ, ಹಜ್ರತ್ ತಾಜುದ್ದೀನ್ ಬಹಾದುರ್ ಮತ್ತು ಕಜಿ ಅಬ್ದುಲ್ ಮುಕ್ತದಿರ್. ದಿಲ್ಲಿ, ಮೆವಾಥ್, ಗ್ವಾಲಿಯರ್, ಛತ್ರ, ಚಂದೆರಿ ಮತ್ತು ಬರೋಡಗಳಲ್ಲಿ ಪಾಠವನ್ನು ಮಾಡಿ 1397ರಲ್ಲಿ ಕಲಬುರಗಿಗೆ ಬಂದರು.ಒಂದು ದಿನ ಇವರು ಮತ್ತು ಮಿತ್ರರು ಹಜ್ರತ್ ನಸೀರುದ್ದಿನವರ ಪಲಕಿವನ್ನು ಎತ್ತಿದಾಗ ಗೆಸು ದರಜಿನ ಕೂದಲು ಪಲಕಿಯ ಕಾಲಲ್ಲಿ ಸಿಕ್ಕಿಬಿದ್ದಿತು, ಅವರಿಗೆ ಬಹಳ ನೋವು ಆಗಿತ್ತು, ಆದ್ರೆ ಗುರುವಿನ ಮೇಲೆ ಪ್ರೀತಿ ಹಾಗು ಮಯಾ೯ದೆಯಿಂದ ಅವನು ಯಾರಿಗೂ ಹೇಳಲಿಲ್ಲ. ಈ ಪ್ರೀತಿ ಹಾಗು ಮಯಾ೯ದೆ ನೋಡಿ ಹಜ್ರತ್ ನಾಸಿರುದ್ದೀನ್ ಅವನನ್ನು ” ಗೆಸು ದರಜ್ ” ಅಂತ ಘೋಷಿಸಿದರು. ಎಲ್ಲ ಜನರು ಗೆಸು ದರಜಿಗೆ “ಖ್ವಾಜಾ ಬಂದಾ ನವಾಜ್ ಗೆಸು ದರಾಜ್” ಹೆಸರಿಂದ ಕರೆಯುತ್ತಾರೆ. ಇವರು 201 ವಷ೯ ಬದುಕಿದ್ದರು. ಇವರ ಸ್ಥಳ ಈಗ ಯಾತ್ರಾ ಸ್ಥಳವಾಗಿದೆ. ಇವರು ಆನೇಕ ಪುಸ್ತಕಗಳನ್ನು ಅರಬ್ಬಿ ಪರ್ಸಿಯ ಹಾಗು ಉರ್ದು ಭಾಷೆಯಲ್ಲಿ ಬರೆದಿದ್ದರೆ. ಅವುಗಳಲ್ಲಿ ಅವರಿಫ್-ಉಲ್-ಮ`ಅರಿಫ್, ಫಾಸೂಸ್-ಅಲ-ಹುಕ್ಮ್, ಅಸೇದ ಅಮಲಿ ಮತ್ತು ಅದಾಬ್-ಅಲ-ಮುರೀದಇನ್. ದರ್ಗಾವು ಸವಿಸ್ತಾರವಾದ ಸಂಕೀರ್ಣ ವಸತಿನ್ನು ಹೊಂದಿದೆ. 1413 ರಲ್ಲಿ ಕಲಬುರಗಿ ಬಂದಿದ್ದ ‘ಬಂದಾ ನವಾಜ್’, ಮಹಾನ್ ಸೂಫಿ ಸಂತರು. ಇವರ ದರ್ಗಾದಲ್ಲಿ ವರ್ಣಚಿತ್ರಗಳು ಮತ್ತು ಮುಘುಲ್ ನಿರ್ಮಿಸಿದ ಇಂಡೋ-ಅರೆಬ್ಬಿಯ ಯಾ ಶೈಲಿಯಲ್ಲಿ ನಿರ್ಮಿಸಲಾಗಿದೆ. ಗೋಡೆಗಳು ಮತ್ತು ಮೇಲ್ಛಾವಣಿಯ ಮೇಲೆ ವರ್ಣಚಿತ್ರಗಳು ಟರ್ಕಿಷ್ ಮತ್ತು ಇರಾನಿ ಪ್ರಭಾವ ಸಮ್ಮಿಳನ ಹೊಂದಿವೆ.
“ಖ್ವಾಜಾ ಬಂದಾ ನವಾಜ್ ಗೆಸು ದರಜ್”ರ ಉರುಸ್ ಆಚರಿಸುತ್ತಾರೆ. ಆ ದಿನ ಉಲ್-ಅ`ದಃ ಮುಸ್ಲಿಂ ಕ್ಯಾಲೆಂಡರ 15ನೆ ದಿನಕೆ ಆಚರಿಸುತ್ತಾರೆ. ಈ ದಿನ ಹಲವಾರು ಜನ ವಿಭಿನ್ನ ಸ್ಥಳದಿಂದ ಇಲ್ಲಿ ಗೆಸು ದರಜ್ ರ ಆಶಿರ್ವಾದ್ ಪಡೆಯಲು ಬರುತ್ತಾರೆ. ಈಗ ಇಲ್ಲಿನ ಮುಖ್ಯಸ್ಥರು “ಸ್ಯೆಯದ್ ಮೋಹಮ್ಮದ ಅಲಿ ಅಲ್ ಹುಸೇನ ಯಾಗಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸೈಯದ್ ಆಶ್ವಖ್ ಖಾದ್ರಿ, ಮಹಮ್ಮದ ಸಿರಾಜುದ್ದೀನ ಖಲಂದರಿ, ಬಿ. ಇಮ್ರಾನ್ ಆಫೀಜ್, ಮೌಲ್ವಿಗಳು, ಪು. ಸದಸ್ಯ ಲಡ್ಡು ಹೊನ್ನೂರವಲಿ, ಲಡ್ಡು ಮೆಹಬೂಬಸಾಬ್, ಎಲ್ಲಾ ಮಸೀದಿಯ ಮುತುವಲಿಗಳು, ಹಾಗೂ ಕಂಪ್ಲಿ ಹೊಸಪೇಟೆ ಹಾಗೂ ಗಂಗಾವತಿ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
