ಮಂಗಳೂರು,ಚೇಳಾೖರು(ಮಧ್ಯ):ಮಕರ ಸಂಕ್ರಾತಿಯ ಶುಭ ದಿನದಂದು ಗ್ರಾಮ ಸೇವಾಸಂಘ ಮಧ್ಯ ಈ ಸಂಘದ ಸುವರ್ಣ ಮಹೋತ್ಸವದ ಸಂಭಮದ ಅಂಗವಾಗಿ ಅಹೋರಾತ್ರಿ ಭಜನಾ ಮಂಗಲೋತ್ಸವವನ್ನು ಆಯೋಜಿಸಾಗಿದೆ ಸೂರ್ಯೋದಯದ 6:30 ಕ್ಕೆ ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಪ್ರಜ್ವಲನೆಯ ಮೂಲಕ ಆರಂಭಿಸಲಾಯಿತು ಆಹ್ವಾನಿತ ಗಣ್ಯರಾದ ಶ್ರೀಕೃಷ್ಣ ಮೂರ್ತಿ ಭಟ್,ಅರ್ಚಕರು ಶ್ರೀಖಡ್ಗೇಶ್ವರ ಖಡ್ಗೇಶ್ವರಿ ದೇವಸ್ಥಾನ ಮಧ್ಯ,ಶ್ರೀ ಕರುಣಾಕರ ಶೆಟ್ಟಿ ಮಧ್ಯಗುತ್ತು, ಶ್ರೀ ಶಂಕರ ಹೆಗ್ಡೆ ಮಧ್ಯಬೀಡು,ಶ್ರೀ ರಾಜಾರಾಮ್ ಸಾಲ್ಯಾನ್ ಧನ ಲಕ್ಷ್ಮಿ ಕನ್ಸ್ಟ್ರಕ್ಷನ್,ಶ್ರೀಯಸ್.ಕೆ ಶ್ರೀಯಾನ್ ಮುಂಬೈ,ಶ್ರೀಮತಿ ಪ್ರಭಾಲಾಕ್ಷಿ ಶೆಟ್ಟಿ ಮಧ್ಯ, ಶ್ರೀ ಮೋಹನ ಚೌಟ ಮುಂಬೈ,ಶ್ರೀರಮೇಶ ಪೂಜಾರಿ, ಭ್ರಾಮರಿ ಚೇಳಾೖರು,ಶ್ರೀಮತಿ ಯಶೋದಾ ಬಿ, ಗ್ರಾಮಪಂಚಾಯತ್ ಅಧ್ಯಕ್ಷೆ,ಶ್ರೀಭೋಜ ಅಂಚನ್ ಮಧ್ಯ,ಶ್ರೀಮತಿ ವೀಣಾ ಟಿ ಶೆಟ್ಟಿ,ಜಿ.ಎಂ.ಎಂ ಆರ್ ಪಿ ಎಲ್, ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಸುವರ್ಣ ಸಂಭ್ರಮದ ಭಜನಾ ಮಂಗಳವು ದಿನಾಂಕ 15/01/2023 ರಂದು ಸೂರ್ಯದಯಕ್ಕೆ ಸಮಾಪ್ತಿಗೊಳ್ಳುವುದು 21 ವಿವಿಧ ಊರ ಪರ ಊರ ಭಜನಾ ಮಂಡಳಿಗಳಿಂದ ಭಜನಾ ಸೇವೆಯನ್ನು ನಡೆಸಿಕೊಡುತ್ತಾರೆ
ಭಜನಾ ಉದ್ಘಾಟನಾ ಸಮಾರಂಭಕ್ಕೆ ಮಧ್ಯ ಗ್ರಾಮದ ಗಣ್ಯರಾದ ಶ್ರೀ ಕೊರಗ ಶೆಟ್ಟಿ, ಶ್ರೀ ರವೀಂದ್ರ ಶೆಟ್ಟಿ ಮದ್ಯ ಬೀಡು, ಶ್ರೀ ರವೀಂದ್ರ ಶೆಟ್ಟಿ ಮದ್ಯ ಗುತ್ತು, ಶ್ರೀ ಪುಷ್ಪರಾಜ ಶೆಟ್ಟಿ, ಅಧ್ಯಕ್ಷ ವಿದ್ಯಾನಿಧಿ ಸೇವಾ ಟ್ರಸ್ಟ್, ಶ್ರೀ ದಿನೇಶ ದೇವಾಡಿಗ, ಮಾಜಿ ಗ್ರಾಮ ಪಂಚಾಯತ್ ಸದಸ್ಯರು, ಶ್ರೀ ರಾಜೇಶ್ ಶೆಟ್ಟಿ, ಮಾಜಿ ಗ್ರಾಮ ಪಂಚಾಯತ್ ಸದಸ್ಯರು, ಶ್ರೀ ಸುಧಾಕರ ಶೆಟ್ಟಿ ಗ್ರಾಮಪಂಚಾಯತ್ ಸದಸ್ಯರು, ಶ್ರೀ ವೆಂಕಟೇಶ ಶೆಟ್ಟಿ ಗುತ್ತಿಗೆದಾರರು ಹಾಗು ಅನೇಕ ಗ್ರಾಮಾಸ್ತರು ಉಪಸ್ಥಿತ ರಿದ್ದರು. ವರದಿ : ಚಂದ್ರಶೇಖರ ಹೆಬ್ಬಾರ್ ಕೊಲ್ಯ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.