ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ 15/1/2023 ರಂದು ನಡೆದ ಬಲಭೀಮೇಶ್ವರ ಪಲ್ಲಕ್ಕಿ ಉತ್ಸವ ಸರಗನಾಡಿನ ಆರಾಧ್ಯ ದೈವ ಶ್ರೀ ಬಲಭೀಮೇಶ್ವರ ಪಲ್ಲಕ್ಕಿ ಉತ್ಸವ ನೋಡುವುದೇ ಒಂದು ಪುಣ್ಯ.
ಉತ್ತರಾಯಣ ಸೂರ್ಯನು ಭೂ ಮಧ್ಯ ರೇಖೆಯ ಉತ್ತರಾಭಿಮುಖವಾಗಿ ಸಂಚರಿಸುವ ಕಾಲ.ಜನವರಿ 14 ಮತ್ತು 15 ಕ್ಕೆ ಗೋಧೂಳಿ ನಕ್ಷತ್ರ ಪ್ರಾರಂಭವಾಗುತ್ತದೆ ಮಕರ ಸಂಕ್ರಾಂತಿ ಹಬ್ಬದ ನಂತರ ಮುಂದಿನ ಮೂವತ್ತು ಘಳಿಗೆ ಬಹಳ ಪುಣ್ಯಕಾಲ
ಈ ಸಮಯದಲ್ಲೇ ಶ್ರೀಬಲಭೀಮೇಶ್ವರ ಪಲ್ಲಕ್ಕಿ ಶಹಾಪುರ ನಗರದಿಂದ ಮಾರ್ಗವಾಗಿ ಹಳ್ಳಿಸಗರ, ಮಡ್ನಾಳ, ಅಣಬಿ, ಉರಸಗುಂಡಿ ಗ್ರಾಮದ ನದಿಗೆ ತೆರಳಿ ಬಲಭೀಮೇಶ್ವರ ದೇವರು ನದಿಯಲ್ಲಿ ಗಂಗಾಸ್ನಾನ ಆದ ನಂತರ ಭಕ್ತರು ಎಳ್ಳು ಹಚ್ಚಿ ಸ್ನಾನ ಮಾಡಿದ ನಂತರ ಉರಸಗುಂಡಿ ಗ್ರಾಮದಲ್ಲಿ ಎಲ್ಲಾ ಭಕ್ತರು ಭೋಜನ ಮಾಡಿ ಅಲ್ಲೇ ಸ್ವಲ್ಪ ಕಾಲ ಭಕ್ತರು ವಿಶ್ರಾಂತಿ ಪಡೆದು,
ಅಲ್ಲಿಂದ ಉರಸಗುಂಡಿ ಗ್ರಾಮದಿಂದ ಮಡ್ನಾಳ ಗ್ರಾಮಕ್ಕೆ ಆಗಮಿಸಿ,ಅದೇ ಮಾರ್ಗವಾಗಿ ಹಳ್ಳಿಸಗರ ಗ್ರಾಮಕ್ಕೆ ಬಂದು ರಾತ್ರಿ 8 ಗಂಟೆಗೆ ಶಹಾಪುರ ನಗರಕ್ಕೆ ಆಗಮಿಸಿದ ನಂತರ ಇಡೀ ರಾತ್ರಿ ಶ್ರೀಬಲಭೀಮೇಶ್ವರ ಪಲ್ಲಕ್ಕಿ ಮೆರವಣಿಗೆ ನಡೆಯುತ್ತದೆ ಶಹಾಪುರ ನಗರದಿಂದ ಬೆಳಿಗ್ಗೆ 4 ಗಂಟೆಗೆ ಬಿಟ್ಟು ಶಹಾಪುರ ಮುಖ್ಯರಸ್ತೆಯಿಂದ ಭೀಮರಾಯನ ಗುಡಿ ತಲುಪುತ್ತದೆ ದೇವಸ್ಥಾನದಲ್ಲಿ ಶ್ರೀಬಲಭೀಮೇಶ್ವರ ಪಲ್ಲಕ್ಕಿ ಮಂಗಳಾರತಿ ಮಾಡಿ ನಂತರ ಜಾತ್ರೆಗೆ ಚಾಲನೆ ನೀಡಿ ಭಕ್ತರು ಒಬ್ಬರಿಗೊಬ್ಬರು ಎಳ್ಳು ಬೆಲ್ಲ ವಿನಿಮಯ ಮಾಡಿಕೊಳ್ಳುವ ಮುಖಾಂತರ ಹಬ್ಬವನ್ನು ಆಚರಿಸುತ್ತಾರೆ.
ವರದಿ-ರಾಜಶೇಖರ ಮಾಲಿಪಾಟೀಲ,ಶಹಾಪುರ