ಹನೂರು:ಯಾವುದೇ ಗ್ರಾಮದ ಜನತೆ ಮುಂದುವರಿಯಬೇಕಾದರೆ ಆ ಗ್ರಾಮದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಗಳು ಇರಬೇಕು ಹಾಗೆಯೇ ಉತ್ತಮ ವಾತವರಣದ ಸೃಷ್ಟಿಯಾಗಿರಬೇಕು ಅಂತಹ ಸ್ಥಳಗಳಲ್ಲಿ ಇದು ಒಂದಾಗಿದೆ ಎಂದು
ಮಾಜಿ ಶಾಸಕಿ ಪರಿಮಳ ನಾಗಪ್ಪ ತಿಳಿಸಿದರು .
ತಾಲ್ಲೂಕಿನ ಕುರಟ್ಟಿಹೊಸೂರು ಗ್ರಾಮದ ಶಾಲೆಯಲ್ಲಿ ರಜತ ಮಹೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮಕ್ಕೆ ಆಗಮಿಸಿ
ಮಾತನಾಡಿದ ಅವರು ಈ ಶಾಲೆಯು ಪ್ರಾರಂಭವಾಗಿ ಇಪ್ಪತೈದನೆಯ ವರ್ಷ ತುಂಬಿದ ಪರಿಣಾಮವಾಗಿ ಇಂತಹ ಕಾರ್ಯ ಮಾಡುತ್ತಿರುವುದು ಸಂತೋಷದ ವಿಷಯ,ಇಪ್ಪತೈದು ವರ್ಷಗಳ ಹಿಂದೆ ಈ ಭಾಗದಲ್ಲಿ ಶಾಲೆಗಳೆಇರಲಿಲ್ಲ,ಇದೇ ಗ್ರಾಮದ ಮುಖಂಡರಾದ ಮುನಿಮಾದಶೆಟ್ರ ಕುಟುಂಬವು ಸ್ಥಳವನ್ನು ದಾನ ಮಾಡಿದ್ದರಿಂದ ಇಲ್ಲಿಯ ಮಕ್ಕಳಿಗೆ ಅನುಕೂಲಕರ ವಾತವರಣ ನಿರ್ಮಾಣವಾಯಿತು ಇಲ್ಲಿ ಓದಿದವರು ಉನ್ನತ ವಿದ್ಯಾಭ್ಯಾಸ ಮಾಡಿ ಅತ್ಯುನ್ನತ ಹುದ್ದೇಗೇರಿದ್ದಾರೆ ಆ ದಿನಗಳಲ್ಲಿ ಬಡತನ ಸಾಕಷ್ಟಿತ್ತು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಿರಿಯ ಪ್ರಾಥಮಿಕ ಶಾಲೆಗಳಿರಲಿಲ್ಲ ಇದೇ ರೀತಿಯಲ್ಲಿ ತಮ್ಮ ಮಾವನವರಾದ ಹುಚ್ಚಪ್ಪನವರು ಕಾಮಗೆರೆಯಲ್ಲಿ ತನ್ನ ಸ್ವಂತ ಜಮೀನು ದಾನ ನೀಡಿದರು ಅದರ ಫಲವಾಗಿ ಇಂದು ದೊಡ್ಡ ಶಾಲೆ ಬೆಳೆದಿದೆ,ಅಂದಿನ ಕಾಲದಲ್ಲಿ ಹತ್ತನೆ ತರಗತಿ ಓದಿದವರೆ ಹೆಚ್ವು ಅವರೆ ಶಿಕ್ಷಕರಾಗಿದ್ದರು,ಶಾಲೆ ಪ್ರಾರಂಭದಲ್ಲಿ ಗ್ರಾಮಗಳಲ್ಲಿ ಸಂಚರಿಸಿ ಮಕ್ಕಳನ್ನು ಕರೆತಂದು ವಿದ್ಯಾಭ್ಯಾಸಕ್ಕೆ ಸೇರಿಸುತ್ತಿದ್ದರು ಹೆಣ್ಣು ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ನನ್ನ ಅವದಿಯಲ್ಲಿ ವಸತಿನಿಲಯ ನೀಡಿದ್ದೆನೆ ಹಾಗೂ ಏಳು ಪ್ರೌಢಶಾಲೆಗಳನ್ನು ಮಂಜೂರಾತಿ ಮಾಡಿಸಿದ್ದೆನಿ ಅಲ್ಲದೆ ಶಾಲೆಗಳಿಗೆ ಕೆಲವು ಕಡೆ ಜಮೀನು ಸಮಸ್ಯೆಗಳನ್ನು ಎದುರಿಸಿದ್ದೀವಿ ರಾಮಲಿಂಗರೆಡ್ಡಿ ಸಚಿವರಾಗಿದ್ದಾಗ ನಾನು ಬಹಳ ಶ್ರಮ ಪಟ್ಟು ಶಾಲೆಗಳನ್ನು ತೆರೆದಿದ್ದೆವಿ, ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ
ಹಿರಿಯ ವಿದ್ಯಾರ್ಥಿಗಳಿಂದ ರಜತ ಮಹೋತ್ಸವದ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು .
ಇದೇ ಕಾರ್ಯಕ್ರಮಕ್ಕೆ ಆಗಮಿಸಿದ ಡಿಡಿಪಿಐ ಮಂಜುನಾಥ್ ಮಾತನಾಡಿ ಹಿರಿಯ ವಿದ್ಯಾರ್ಥಿಗಳ ರಜತ ಮಹೋತ್ಸವ ಮಾಡುತ್ತಿರುವುದು ಒಳ್ಳೆಯ ವಿಷಯ ಆದರೆ ಹಾಗೇನೆ ಇತ್ತಿಚಿನ ಯುವ ಪೀಳಿಗೆಗೆ ಅನುಕೂಲಕರ ವಾತವರಣ ನಿರ್ಮಿಸಿಕೊಡುವಲ್ಲಿ ತಮ್ಮಗಳ ಪಾತ್ರ ಬಹಳ ಮುಖ್ಯ ನೀವುಗಳು ಡಿಜಿಟಲ್ ಗ್ರಂಥಾಲಯ ಪ್ರಾರಂಭಿಸಿ ಇದರಿಂದ ಕಿರಿಯ ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ ಎಂದು ಕಿವಿ ಮಾತು ಹೇಳಿದರು.
ಇದೇ ಸಮಯದಲ್ಲಿ ವೇದಿಕೆ ಹಂಚಿಕೊಂಡ
ಕವಿಗಳಾದ ಚೆನ್ನಪ್ಪ ಅವರು ಮಾತನಾಡಿ ಈ ಶಾಲೆಯಲ್ಲಿ ಬಹುತೇಕ ವಿದ್ಯಾಭ್ಯಾಸ ಮಾಡಿದ ಎಲ್ಲಾ ಹಿರಿಯರು ನನ್ನ ವಿದ್ಯಾರ್ಥಿಗಳೆ ಇವರ ಕೆಲಸಕ್ಕೆ ಮಾತಿನಲ್ಲಿ ವರ್ಣಿಸುವ ಸಾಮರ್ಥ್ಯವಿಲ್ಲ.ನಾನು ಕೆಲಸಕ್ಕಾಗಿ 1998 ನನ್ನ ವೃತ್ತಿ ಜೀವನದ ಪ್ರಾರಂಬಿಸಿದ ಮೊದಲ ಸ್ಥಳವಿದು,ಅಂದಿನ ಕಾಲದಲ್ಲಿ ನನ್ನ ವಾಹನವಾದ ಬಾಡಿಗೆ ಸೈಕಲ್ ಇತ್ತು ನಾನು ಪ್ರಾರಂಭದಲ್ಲಿ ಒಂದು ಹಳೆಯ ಮನೆಯಲ್ಲಿ ಶಿಕ್ಷಣ ಪ್ರಾರಂಭಿಸಿದೆ ಆಗ ವಿದ್ಯಾರ್ಥಿಗಳ ಸಂಖ್ಯೆ ಬೆರಳೆಣಿಕೆಯಷ್ಟಿತ್ತು ಇಂದು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿದೆ ಇದನ್ನು ನೋಡಿದರೆ ಆನಂದವಾಗುತ್ತದೆ ಸಂತೋಷದ ವಿಷಯವೇನೆಂದರೆ ತಮ್ಮ ಮಕ್ಕಳಿಗೆ ಪೋಷಕರು,ಉತ್ತಮ ಗುಣಮಟ್ಟ ಶೈಲಿಯ ವಾತವರಣ ಸೃಷ್ಟಿ ಮಾಡಿದರು, ವಿದ್ಯಾರ್ಥಿಗಳ ಬೆಳವಣಿಗೆ ಕಂಡು ನಮಗೆ ಖುಷಿಯಾಗಿದೆ ಇಲ್ಲಿ ಸೇರಿರುವ ನಿಮ್ಮಗಳ ಬಲವೇ ಗುರುಕಾಣಿಕೆ ಎಂದರು ವೃತ್ತಿ ಜೀವನದಲ್ಲಿ ಶಿಷ್ಯ ನಿಜ ಜೀವನದಲ್ಲಿ ಅಪರಂಜಿಯಾಗಿ ಎಂದು ಶುಭ ಆರ್ಶಿವಾದ ಮಾಡಿದರು.
ಇದೇ ಸಂದರ್ಭದಲ್ಲಿ ಶಿವರಾಜ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ಲಕ್ಷ್ಮಿ ನಟರಾಜು ಕುರಟ್ಟಿಹೊಸೂರು ಅಧ್ಯಕ್ಷರು ಮಾದೇವ ಶೆಟ್ರು ಮುಖಂಡರು ನಟರಾಜ್ ಎಸ್ ಡಿ ಎಂ ಸಿ ಸದಸ್ಯರು ಗುರುಲಿಂಗಯ್ಯ ಮುಖ್ಯೋಪಾಧ್ಯಾಯರು ಶಿವಣ್ಣ ಶಿಕ್ಷಕರು ಶಿಕ್ಷಣ ತಾಲೂಕು ಸಂಘದ ಅಧ್ಯಕ್ಷರಾದ ಮುನ್ಮದ್ ಶೆಟ್ರು ಶಾಲೆಗೆ ಭೂಮಿ ದಾನ ಮಾಡಿದಂತಹ ನಂಜಮ್ಮ ಲೇಟ್ ಮಹದೇವ ಶೆಟ್ಟಿ ಹಾಗೂ ಕುಟುಂಬ ವರ್ಗದವರು ಶಿಕ್ಷಕರು ಹಿರಿಯ ವಿದ್ಯಾರ್ಥಿಗಳು ಗ್ರಾಮಸ್ಥರುಗಳು ಹಾಜರಿದ್ದರು ಹಾಗೂ ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಾಂತಮ್ಮ ಮತ್ತು ಎರಡು ಗ್ರಾಮದ ಗ್ರಾಮಸ್ಥರು ಹಾಜರಿದ್ದರು.
-ಉಸ್ಮಾನ್ ಖಾನ್